ಭಾರತೀಯ ವಾಯುಪಡೆಯ ಪೈಲಟ್‌ಗಳ ಸಾಧನೆ
ನವ ದೆಹಲಿ – ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಿಂದ ಭಾರತೀಯ ವಾಯುಪಡೆಯ ಪೈಲಟ್‌ಗಳು ೧೨೧ ಭಾರತೀಯರನ್ನು ರಕ್ಷಿಸಿದ್ದಾರೆ. ರಾಜಧಾನಿ ಖಾರ್ಟೂಮ್‌ನಿಂದ ೪೦ ಕಿಮೀ ದೂರದಲ್ಲಿರುವ ವಾಡಿ ಸೈದೀನಾ ರನ್‌ವೇ ಹದಗೆಟ್ಟಿದ್ದರೂ ಮತ್ತು ಇಂಧನ ಮತ್ತು ಬೆಳಕು ಇಲ್ಲದಿದ್ದರೂ ಸಹ ‘ಸಿ-೧೩೦ ಜೆ ಹರ್ಕ್ಯುಲಸ್’ ಅನ್ನು ಏಪ್ರಿಲ್ ೨೭ ರ ರಾತ್ರಿ ಇಳಿಸಲಾಯಿತು. ಕೇವಲ ೮ ‘ಗರುಡ’ ಕಮಾಂಡೋಗಳ ರಕ್ಷಣಾ ಸರಪಳಿಯಲ್ಲಿ ೧೨೧ ಭಾರತೀಯರನ್ನು ಅಲ್ಲಿಂದ ಸುರಕ್ಷಿತವಾಗಿ ಸೌದಿ ಅರೇಬಿಯಾದ ಜೆದ್ದಾಹದಲ್ಲಿ ಸುರಕ್ಷಿತವಾಗಿ ಸಾಗಿಸಲಾಯಿತು. ಈ ಸಂಪೂರ್ಣ ಅಭಿಯಾನದ ಬಗ್ಗೆ ಪ್ರಧಾನಿ ಕಾರ್ಯಾಲಯವೂ ನಿಗಾವಹಿಸಿತ್ತು.
Daring IAF Pilots Use Night Vision Goggles To Rescue 121 People From Destroyed Airstrip In Sudan#TNDIGITALVIDEOS pic.twitter.com/ONp84n3Tnk
— TIMES NOW (@TimesNow) April 29, 2023
ಖಾರ್ಟೂಮ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ, ಅಲ್ಲಿ ಸಿಕ್ಕಿಬಿದ್ದ ಭಾರತೀಯರು ಬಂದರನ್ನು ತಲುಪಲು ಸಾಧ್ಯವಾಗಲಿಲ್ಲ. ನೌಕಾಪಡೆಯ ಯುದ್ಧನೌಕೆಗಳು ಭಾರತೀಯರನ್ನು ಬಂದರಿನಿಂದ ಜದ್ದಾಹಕ್ಕೆ ಸಾಗಿಸುತ್ತಿವೆ. ನಾಗರಿಕರು ತೊಂದರೆಯಲ್ಲಿ ಸಿಲುಕಿರುವುದನ್ನು ನೋಡಿದ ವಾಯುಪಡೆ ತಕ್ಷಣವೇ ಹರ್ಕ್ಯುಲಸ್ ವಿಮಾನವನ್ನು ರವಾನಿಸಲಾಗಿತ್ತು.
(ಸೌಜನ್ಯ : NDTV)