ಚೀನಾದಲ್ಲಿ ಉದ್ಯೋಗ ಮತ್ತು ಮನಃಶಾಂತಿಗಾಗಿ ದೇವಸ್ಥಾನಗಳಿಗೆ ಹೋಗುವ ಯುವಕರ ಸಂಖ್ಯೆಯಲ್ಲಿ ಹೆಚ್ಚಳ !

ಚೀನಾದಲ್ಲಿ ಮನಃಶಾಂತಿಗಾಗಿ ದೇವಸ್ಥಾನಗಳಿಗೆ ಹೋಗುವ ಯುವಕರು

ಬೀಜಿಂಗ್ (ಚೀನಾ) – ‘ರೈಟರಸ್’ ಈ ವಾರ್ತಾವಾಹಿನಿಯು ನೀಡಿದ ಮಾಹಿತಿಯನುಸಾರ ೨೦೨೨ ರ ತುಲನೆಯಲ್ಲಿ ಚೀನಾದಲ್ಲಿ ದೇವಸ್ಥಾನಗಳಿಗೆ ಹೋಗುವ ಯುವಕರ ಸಂಖ್ಯೆ ಶೇ. ೩೧೦ ರಷ್ಟು ಹೆಚ್ಚಾಗಿದೆ. ಇದರಲ್ಲಿ ೧೯೯೦ ರ ನಂತರ ಹುಟ್ಟಿದವರ ಸಂಖ್ಯೆ ಅತ್ಯಧಿಕವಾಗಿದೆ. ಅದರಲ್ಲೂ ಉದ್ಯೋಗ ಸಿಗಲಿ ಎಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವವರ ಸಂಖ್ಯೆಯೇ ಹೆಚ್ಚು ಎನ್ನಲಾಗಿದೆ. ಕೊರೊನಾದಿಂದಾಗಿ ಚೀನಾದಲ್ಲಿ ಆರ್ಥಿಕ ಹಿಂಜರಿತವಿದೆ. ಪ್ರಸ್ತುತ ಚೀನಾದಲ್ಲಿ ೧ ಕೋಟಿ ೧೬ ಲಕ್ಷ ನಿರುದ್ಯೋಗಿಗಳಿದ್ದಾರೆ. ಇಂತಹ ಯುವಕರು ಮನಃಶಾಂತಿಗಾಗಿ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ.

ಸಂಪಾದಕೀಯ ನಿಲುವು

  • ‘ಧರ್ಮವು ಅಫೀಮಿನ ಮಾತ್ರೆಯಾಗಿದೆ’, ಎಂದು ಹೇಳುವ ಕಮ್ಯುನಿಷ್ಟರ ತಾಣವಾಗಿರುವ ಚೀನಾದಲ್ಲಿನ ಜನರು ಮನಃಶಾಂತಿಗಾಗಿ ದೇವಸ್ಥಾನಕ್ಕೆ ಹೋಗಬೇಕಾಗುತ್ತಿದೆ, ಇದು ಬುದ್ಧಿಪ್ರಾಮಾಣ್ಯವಾದಿಗಳಿಗೆ ಕಪಾಳಮೋಕ್ಷವಾಗಿದೆ !
  • ಚೀನಾದಲ್ಲಿ ಅಂನಿಸ ನಂತಹ ಸಂಘಟನೆಗಳಿಲ್ಲ, ಇಲ್ಲದಿದ್ದರೆ ಅವರು ಈ ವಿದ್ಯಾವಂತ ಮತ್ತು ವೈಜ್ಞಾನಿಕ ಯುವಕರನ್ನು ‘ಮೂಢನಂಬಿಕೆ’ ಎಂದು ಹೇಳಿ ವಿರೋಧಿಸುತ್ತಿದ್ದರು !