ಆಯುರ್ವೇದ ಮತ್ತು ಅಲೋಪಥಿ ಡಾಕ್ಟರರಿಗೆ ಸಮಾನ ವೇತನ ಜಾರಿಗೊಳಿಸಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಅಲೋಪಥಿ ಡಾಕ್ಟರರಂತೆ ಕ್ಲಿಷ್ಟಕರವಾದ ಶಸ್ತ್ರಕ್ರಿಯೆ ಮತ್ತು ಆಪತ್ಕಾಲದ ಸೇವೆಯನ್ನು ಮಾಡಲು ಆಯುರ್ವೇದ ಡಾಕ್ಟರರಿಗೆ ಕೊಡಲು ಬರುವುದಿಲ್ಲ !

ನವ ದೆಹಲಿ – ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು(ಆಯುರ್ವೇದಿಕ ಡಾಕ್ಟರ) ಇವರು ಆಧುನಿಕ ವೈದ್ಯರಂತೆ (ಅಲೋಪಥಿ ಡಾಕ್ಟರರ) ಸಕ್ಷಮರಲ್ಲ ಎಂದು ಹೇಳುತ್ತಾ ಇಬ್ಬರಿಗೂ ಸಮಾನ ವೇತನ ಜಾರಿಗೊಳಿಸುವ ಗುಜರಾತ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಎಪ್ರಿಲ್ 26 ರಂದು ರದ್ದುಗೊಳಿಸಿದೆ. ಅಲೋಪಥಿ ಡಾಕ್ಟರರಂತೆ ಕ್ಲಿಷ್ಟಕರವಾದ ಶಸ್ತ್ರಕ್ರಿಯೆ ಮತ್ತು ಆಪತ್ಕಾಲೀನ ಸೇವೆಯನ್ನು ಆಯುರ್ವೇದ ಡಾಕ್ಟರರಿಗೆ ನೀಡಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯವು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

ಆಯುರ್ವೇದ ಕಾರ್ಯಮಾಡುವ ಎಮ್.ಬಿ.ಬಿ.ಎಸ್. ಪದವಿ ಡಾಕ್ಟರರಿಗೆ ಸಮಾನವೆಂದು ತಿಳಿಯಬಹುದಾಗಿದೆಯೆಂದು ಗುಜರಾತ ಉಚ್ಚ ನ್ಯಾಯಾಲಯವು 2012 ರಲ್ಲಿ ಆದೇಶವನ್ನು ನೀಡಿತ್ತು. ಅದನ್ನು ಪ್ರಶ್ನಿಸಿದ ಅರ್ಜಿಯ ಆಲಿಕೆಯ ಅಂತ್ಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಮೇಲಿನಂತೆ ತೀರ್ಪು ನೀಡಿದೆ.

ನ್ಯಾಯಾಲಯವು :

1. ಆಯುರ್ವೇದ ವ್ಯವಸಾಯ ಮಾಡುವವರ ಮಹತ್ವ ಮತ್ತು ಪರ್ಯಾಯಿ ಅಥವಾ ಸ್ವದೇಶಿ ಔಷಧಿ ಪದ್ಧತಿಯನ್ನು ಪ್ರೋತ್ಸಾಹಿಸುವ ಮಹತ್ವದ್ದಾಗಿದ್ದರೂ, ಎರಡೂ ಶ್ರೇಣಿಯ ಡಾಕ್ಟರರು ಸಮಾನ ವೇತನಕ್ಕೆ ಅರ್ಹರೆಂದು ತೀರ್ಮಾನಿಸುವ ಸಮಾನ ಕಾರ್ಯವನ್ನು ಖಂಡಿತವಾಗಿಯೂ ಮಾಡುವುದಿಲ್ಲ, ಈ ವಸ್ತುಸ್ಥಿತಿಯನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ.

2. `ಎರಡೂ ಪದ್ಧತಿಯಲ್ಲಿ ಯಾವ ಉಪಚಾರ ವಿಜ್ಞಾನವನ್ನು ಅವಲಂಬಿಸಿರುತ್ತವೆಯೋ, ಅವುಗಳ ಸ್ವರೂಪದಿಂದ ಮತ್ತು ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಪ್ರಗತಿಯಿಂದ ಅಲೋಪಥಿ ಡಾಕ್ಟರರು ಆಕಸ್ಮಿಕ ಕೆಲಸ ಮಾಡಲು ಸಕ್ಷಮರಾಗಿದ್ದಾರೆ. ಅವರಿಗೆ ಗಂಭೀರವಾಗಿ ಗಾಯಗೊಂಡಿರುವವರಿಗೆ ತಕ್ಷಣವೇ ಉಪಚರಿಸಲು ಸಾಧ್ಯವಾಗುತ್ತದೆ. ಅದನ್ನು ಆಯುರ್ವೇದಿಕ ಡಾಕ್ಟರರು ಮಾಡಲು ಸಾಧ್ಯವಿಲ್ಲ.

3. ಎಮ್.ಬಿ.ಬಿ.ಎಸ್. ಪದವಿಯನ್ನು ಹೊಂದಿರುವ ಡಾಕ್ಟರರು ಕ್ಲಿಷ್ಟಕರವಾದ ಆಪರೇಶನ್ ಮಾಡುವ ಸರ್ಜನ್ ಹೇಗೆ ಸಹಾಯ ಮಾಡಬಹುದೋ ಅದೇ ರೀತಿ ಮಾಡಲು ಆಯುರ್ವೇದ ಡಾಕ್ರರರಿಗೆ ಸಾಧ್ಯವಿಲ್ಲ, ಈ ಬಗ್ಗೆಯೂ ನ್ಯಾಯಪೀಠವು ಉಲ್ಲೇಖಿಸಿದೆ.

ಸಂಪಾದಕೀಯ ನಿಲುವು

ಮಾನವನ ಜೀವನದ ಶೇ. 80 ರಷ್ಟು ಸಮಸ್ಯೆಗಳ ಹಿಂದಿನ ಕಾರಣವು ಆಧ್ಯಾತ್ಮಿಕವಾಗಿರುತ್ತದೆ. ಇದರಿಂದ ಅನೇಕ ಬಾರಿ ಅಲೋಪಥಿ ಡಾಕ್ಟರರಿಗೆ ಯಶಸ್ಸು ಸಿಗುವುದಿಲ್ಲ. ಆದರೆ ಪ್ರಾರಬ್ಧ, ಕೆಟ್ಟ ಶಕ್ತಿ, ಕಾಲ(ಜ್ಯೋತಿಷ್ಯಶಾಸ್ತ್ರ) ಮುಂತಾದವುಗಳ ಅಧ್ಯಯನವಿರುವ ಆಯುರ್ವೇದಿಕ ಡಾಕ್ಟರರಿಗೆ ನಿಖರವಾಗಿ ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಇದರಿಂದ `ಇಬ್ಬರೂ ಸಮವರ್ಗದವರಲ್ಲ’, `ಅವರಿಗೆ ಸಮಾನ ವೇತನ ನೀಡಲು ಸಾಧ್ಯವಿಲ್ಲ’ ಎಂದು ನಿರ್ಧರಿಸುವಾಗ ಈ ಅಂಶಗಳ ವಿಚಾರವಾಗುವುದು ಅಪೇಕ್ಷಿತವಿದೆ !