ಸಿಂಗಾಪೂರದಲ್ಲಿ ಗಾಂಜಾ ಕಳ್ಳಸಾಗಾಣಿಕೆ ಮಾಡುತ್ತಿದ್ದ ಭಾರತೀಯ ಮೂಲದ ವ್ಯಕ್ತಿಗೆ ಗಲ್ಲು ಶಿಕ್ಷೆ

ವಿಶ್ವಸಂಸ್ಥೆಯಿಂದ ವಿರೋಧ ವ್ಯಕ್ತ !

ಸಿಂಗಾಪುರ – ಗಾಂಜಾದ ಕಳ್ಳ ಸಾಗಾಣಿಕೆಯಲ್ಲಿ ತಪ್ಪಿತಸ್ಥೆನೆಂದು ಕಂಡು ಬಂದಿರುವ ಭಾರತೀಯ ವಂಶದ ಸಿಂಗಾಪುರ ನಾಗರಿಕನಾಗಿರುವ ತಂಗರಾಜು ಸುಪೈಯಾ ಹೆಸರಿನ ವ್ಯಕ್ತಿಗೆ ಎಪ್ರಿಲ್ 26 ರಂದು ಗಲ್ಲು ಶಿಕ್ಷೆ ವಿಧಿಸಲಾಗಿದೆ. `ರಾಯಟರ್ಸ’ ಅನುಸಾರ 46 ವರ್ಷದ ಸುಪೈಯಾ 2013 ರಲ್ಲಿ 1 ಕೇಜಿ ಗಾಂಜಾ ಕಳ್ಳ ಸಾಗಾಣಿಕೆಗೆ ಪ್ರೋತ್ಸಾಹಿಸಿದ್ದನು.

1. ಸಿಂಗಾಪುರದಲ್ಲಿ ಮಾದಕ ವಸ್ತುಗಳ ವಿರುದ್ಧ ಅತ್ಯಂತ ಕಠಿಣ ನಿಯಮಗಳಿವೆ. `ಜನತೆಯ ರಕ್ಷಣೆಗಾಗಿ ಮರಣದಂಡನೆ ವಿಧಿಸುವುದು ಅತ್ಯಾವಶ್ಯಕವಾಗಿದೆ’ ಎಂದು ಅಲ್ಲಿಯ ಸರಕಾರದ ಹೇಳಿಕೆಯಾಗಿದೆ.

2. ಸುಪೈಯಾನಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ವಿರೋಧಿಸಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆ ಮತ್ತು ಇತರೆ ಅನೇಕ ಮಾನವ ಹಕ್ಕುಗಳ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ವಿಶ್ವ ಸಂಸ್ಥೆಯು, ಮಾದಕ ವಸ್ತುಗಳ ಪ್ರಕರಣದಲ್ಲಿ ಗಲ್ಲುಶಿಕ್ಷೆ ವಿಧಿಸುವುದು ಅಂತರರಾಷ್ಟ್ರೀಯ ಮಾನದಂಡದ ಅನುರೂಪವಾಗಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿವೆ.

3. ಸಿಂಗಾಪುರದಲ್ಲಿ ಕಳೆದ ವರ್ಷ ಮಾದಕ ವಸ್ತುಗಳ ಪ್ರಕರಣದಲ್ಲಿ 11 ಜನರಿಗೆ ಗಲ್ಲು ಶಿಕ್ಷೆ ನೀಡಲಾಗಿತ್ತು.

ಸಂಪಾದಕರ ನಿಲುವು

ಅಮಲು ವಸ್ತುಗಳ ಕಳ್ಳಸಾಗಾಣಿಕೆ ಮಾಡುವವರಿಗೆ ನೇರ ಗಲ್ಲು ಶಿಕ್ಷೆ ವಿಧಿಸುವ ಸಿಂಗಾಪುರದಿಂದ ಭಾರತ ಪಾಠ ಕಲಿಯಬೇಕು !