NCERT ಯ ಪುಸ್ತಕದಿಂದ ಕೈ ಬಿಟ್ಟಿದ್ದ ಹಿಂದೂ ವಿರೋಧಿ ಮತ್ತು ಮೊಘಲರ ಪಾಠವನ್ನು ಕೇರಳದ ಕಮ್ಯುನಿಸ್ಟ್ ಸರಕಾರವು ಮಕ್ಕಳಿಗೆ ಕಲಿಸಲಿದೆ !

ಗುಜರಾತ್ ಗಲಭೆ, ಮೊಘಲರ ಇತಿಹಾಸ, ರಾ.ಸ್ವ.ಸಂಘದ ಮೇಲೆ ನಿಷೇಧ ಮತ್ತು ಮ. ಗಾಂಧಿ ಕೊಲೆಯ ಬಗ್ಗೆ ಕಲಿಸುವರು !

ಕೊಚ್ಚಿ (ಕೇರಳ) – ಕೇರಳದ ಸ್ಟೇಟ್ ಕೌನ್ಸಿಲ್ ಆಫ್ ಎಜುಕೇಶನ ರಿಸರ್ಚ ಆಂಡ ಟ್ರೇನಿಂಗ್ (NCERT)ಯು ತನ್ನ ೧೧ ಮತ್ತು ೧೨ ನೇ ತರಗತಿಗಳ ಇತಿಹಾಸ ಮತ್ತು ರಾಜ್ಯಶಾಸ್ತ್ರ ಈ ಪಠ್ಯಪುಸ್ತಕಗಳನ್ನು ಬದಲಾಯಿಸಲಿದೆ. ಇದರಲ್ಲಿ ವಿಶೇಷವೆಂದರೆ NCERTಯು ಯಾವ ಪಾಠಗಳನ್ನು ತನ್ನ ಪುಸ್ತಕದಿಂದ ತೆಗೆದುಹಾಕಿತ್ತೋ, ಈ ಪಠ್ಯಕ್ರಮವನ್ನು ಪುಸ್ತಕದಲ್ಲಿ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಶಿಕ್ಷಣ ಇಲಾಖೆಯು ಕೇರಳದ ಮುಖ್ಯಮಂತ್ರಿಗೆ ಪ್ರಸ್ತಾವನೆ ಕಳುಹಿಸಿದೆ. ಇದಕ್ಕೆ ಅನುಮೋದನೆ ದೊರೆತ ಕೂಡಲೇ ಪುಸ್ತಕಗಳಲ್ಲಿ ಸೇರಿಸಲಾಗುವುದು.

ಗುಜರಾತ್‌ನಲ್ಲಿ ೨೦೦೨ ರ ಗಲಭೆಗಳು, ಮೊಘಲ್ ಯುದ್ಧದ ಇತಿಹಾಸ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲಿನ ನಿಷೇಧ ಮತ್ತು ಮ. ಗಾಂಧಿ ಅವರ ಹತ್ಯೆ ಪ್ರಕರಣ ಈ ವಿಷಯಗಳನ್ನು ಕೇರಳದ ಪಠ್ಯಪುಸ್ತಕದಲ್ಲಿ ಸೇರಿಸಲಾಗುವುದು. ಅದೇ ಪಠ್ಯವನ್ನು ಇತ್ತೀಚೆಗೆ ಕೇಂದ್ರದ NCERT ಯ ಪುಸ್ತಕದಿಂದ ಹೊರತೆಗೆಯಲಾಗಿದೆ. ಕೇಂದ್ರದ ಭಾಜಪ ಸರಕಾರದ ವಿರುದ್ಧ ಕೇರಳ ಸರಕಾರ ವಿರೋಧ ವ್ಯಕ್ತಪಡಿಸಿದ ಹಾಗೂ ಮುಸ್ಲಿಮರ ಓಲೈಕೆ ಮಾಡುವ ಮೂಲಕ ಸಂಘವನ್ನು ಕೀಳಾಗಿ ತೋರಿಸಲು ಪ್ರಯತ್ನಿಸುತ್ತಿದೆ. ಕೇರಳ ಸರಕಾರದ ಈ ನಿರ್ಧಾರಕ್ಕೆ ಭಾಜಪವು ವಿರೋಧ ವ್ಯಕ್ತಪಡಿಸಿದೆ.

ಸಂಪಾದಕೀಯ ನಿಲುವು

ಇದರಿಂದ ಕೇರಳದ ಕಮ್ಯುನಿಸ್ಟ್ ಮೈತ್ರಿ ಸರಕಾರದ ಹಿಂದೂ ದ್ವೇಷ ಮತ್ತು ಮುಸ್ಲಿಂ ಪ್ರೀತಿ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಕೇರಳದ ಧರ್ಮಾಭಿಮಾನಿ ಹಿಂದೂಗಳು ಸಂಘಟಿತರಾಗಬೇಕಾಗಿದೆ !