ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷನ ಮೇಲೆ ಲೈಂಗಿಕ ಕಿರುಕುಳ ಆರೋಪದ ಪ್ರಕರಣ
ಅಧ್ಯಕ್ಷರ ವಿರುದ್ಧ ಎಫ್.ಐ.ಆರ್. ದಾಖಲಿಸಲು ಮೀನಾಮೇಷ ಮಾಡುತ್ತಿರುವ ಪೊಲೀಸರಿಗೆ ನೊಟೀಸ್
ನವ ದೆಹಲಿ – ಇಲ್ಲಿಯ ಜಂತರಮಂತರ ಪರಿಸರದಲ್ಲಿ ಮಹಿಳಾ ಕುಸ್ತಿಪಟುಗಳು ನಡೆಸುತ್ತಿರುವ ಧರಣಿ ಆಂದೋಲನ ಎಪ್ರಿಲ್ 25 ರಂದು ಅಂದರೆ ಮೂರನೇ ದಿನವೂ ಮುಂದುವರಿದಿದೆ. ಈ ಪ್ರಕರಣದಲ್ಲಿ ಮಹಿಳಾ ಕುಸ್ತಿಪಟುಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಅರ್ಜಿಯ ಕುರಿತು ವಿಚಾರಣೆ ನಡೆಸಲು ನ್ಯಾಯಾಲಯವು ಒಪ್ಪಿಗೆ ಸೂಚಿಸಿದೆ. `ಮಹಿಳಾ ಕುಸ್ತಿಪಟುಗಳು ತಮ್ಮ ದೂರಿನಲ್ಲಿ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಈ ಅಂಶಗಳನ್ನು ವಿಚಾರ ಮಾಡುವುದು ಆವಶ್ಯಕವಾಗಿದೆ’, ಎಂದು ನ್ಯಾಯಾಲಯವು ಹೇಳಿದೆ. ಈಗ ಈ ಪ್ರಕರಣದ ಕುರಿತು ಎಪ್ರಿಲ್ 29 ರಂದು ಆಲಿಕೆ ನಡೆಯಲಿದೆ. ಈ ಪ್ರಕರಣದಲ್ಲಿ ಮುಖ್ಯ ನ್ಯಾಯಾಧೀಶರಾದ ಡಿ.ವೈ. ಚಂದ್ರಚೂಡ ಇವರು `ಭಾರತೀಯ ಕುಸ್ತಿ ಮಹಾಸಂಘ’ದ ಅಧ್ಯಕ್ಷ ಮತ್ತು ಭಾಜಪ ಶಾಸಕ ಬೃಜಭೂಷಣ ಶರಣ ಸಿಂಹ ಇವರ ವಿರುದ್ಧ ಎಫ್.ಐ. ಆರ್. ನೊಂದಾಯಿಸಲು ಮೀನಾಮೇಶ ಮಾಡುತ್ತಿದ್ದ ದೆಹಲಿ ಪೊಲೀಸರಿಗೂ ನೋಟಿಸ್ ಕಳುಹಿಸಿದ್ದಾರೆ. (ಅಂತರರಾಷ್ಟ್ರೀಯ ಹೆಸರಾಂತ ಕುಸ್ತಿಪಟುಗಳ ದೂರುಗಳನ್ನು ದಾಖಲಿಸದೇ ಇರುವ ಪೊಲೀಸರು ಸಾಮಾನ್ಯ ಮಹಿಳೆಯರ ದೂರುಗಳನ್ನು ಏನು ಮಾಡುತ್ತಿರಬಹುದು ಎಂಬುದು ವಿಚಾರ ಮಾಡದಿರುವುದೇ ಒಳಿತು – ಸಂಪಾದಕರು) ದೂರು ದಾಖಲಿಸಿದ ಕುಸ್ತಿಪಟುಗಳ ಹೆಸರು ಬಹಿರಂಗವಾಗದಿರಲಿ ಅದಕ್ಕಾಗಿ ನ್ಯಾಯಾಲಯವು 7 ಮಹಿಳಾ ದೂರುದಾರರ ಹೆಸರುಗಳನ್ನು ನ್ಯಾಯಾಲಯದ ದಾಖಲೆಗಳಿಂದ ತೆಗೆದುಹಾಕುವಂತೆ ಹೇಳಲಾಗಿದೆ.