ಭಾರತೀಯರಿಗೆ ಪಾಕಿಸ್ತಾನ ಅಲ್ಲ, ಚೀನಾ ಅತಿದೊಡ್ಡ ಸವಾಲು ಅನಿಸುತ್ತದೆ ! – ಅಮೇರಿಕಾದ ಶಾಸಕ ರೋ ಖನ್ನಾ

ಅಮೇರಿಕಾದ ಶಾಸಕ ರೋ ಖನ್ನಾ

ವಾಶಿಂಗ್ಟನ (ಅಮೇರಿಕಾ) – ಭಾರತೀಯರು ಪಾಕಿಸ್ತಾನ ಅಲ್ಲ ಚೀನಾವನ್ನು ಎಲ್ಲಕ್ಕಿಂತ ದೊಡ್ಡ ಸೇನಾ ಎದುರಾಳಿಯೆಂದು ತಿಳಿಯುತ್ತಾರೆ, ಎಂದು ಅಮೇರಿಕಾದ ಭಾರತೀಯ ವಂಶದ ಶಾಸಕ ರೋ ಖನ್ನಾ ಇವರು ಹೇಳಿದ್ದಾರೆ. ಅವರು ಸ್ಟ್ಯಾನ್ ಫೋರ್ಡ ವಿಶ್ವವಿದ್ಯಾಲಯದ ವಿದೇಶ ನೀತಿಯ ವಿಷಯದ ಒಂದು ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು. ಖನ್ನಾ ತಮ್ಮ ಮಾತನ್ನು ಮುಂದುವರಿಸುತ್ತಾ, ಚೀನಾ ಏಷ್ಯಾ ಖಂಡವನ್ನು ತನ್ನ ಅಧಿಪತ್ಯದಡಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ, ಅದು ಗಡಿರೇಖೆಯ ವಿವಾದದ ವಿಷಯದ ಮೇಲೆ ಭಾರತಕ್ಕೆ ಬೆದರಿಕೆ ಹಾಕುತ್ತಿದ್ದರೇ ಇತರೆ ಮಿತ್ರ ರಾಷ್ಟ್ರಗಳೊಂದಿಗೆ ಕೀಳಾಗಿ ವ್ಯವಹರಿಸುತ್ತಿದೆ. ಅಮೇರಿಕಾಗೆ ಭಾರತ ಮತ್ತು ಇತರೆ ಏಷ್ಯಾದ ಮಿತ್ರ ರಾಷ್ಟ್ರಗಳ ಸಂಬಂಧವನ್ನು ದೃಢಪಡಿಸುವ ಆವಶ್ಯಕತೆಯಿದೆ. ಹಾಗೆಯೇ ಅಮೇರಿಕಾಗೆ ಚೀನಾದೊಂದಿಗಿರುವ ತನ್ನ ಸಂಬಂಧವನ್ನು ಪುನಃ ಸರಿಪಡಿಸಿಕೊಳ್ಳುವ ಆವಶ್ಯಕತೆಯಿದೆ. ಇದರಿಂದ ನಮಗೆ ಮತ್ತು ಏಷ್ಯಾದ ನಮ್ಮ ಮಿತ್ರ ರಾಷ್ಟ್ರಗಳಿಗೆ ಸಿಗುವ ಸವಾಲುಗಳಿಗೆ ಸ್ಪಷ್ಟತೆ ಬರುವುದು. ನಮ್ಮ ಮುತ್ಸದ್ದಿತನ ಮತ್ತು ಮುಖಂಡತ್ವದಿಂದ 20ನೇ ಶತಕದ ತುಲನೆಯಲ್ಲಿ 21ನೇ ಶತಕ ಕಡಿಮೆ ಹಿಂಸೆಯಾಗಬಹುದು ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.