ಭಾರತದ ದಾಪುಗಾಲು !

ಅಮೇರಿಕಾದಲ್ಲಿ ೧೯೬೦ ಕ್ಕಿಂತ ಮೊದಲು ವಿಶೇಷವಾಗಿ ಭಾರತದ ಬಗ್ಗೆ ‘ವಿಚಿತ್ರ ದೇವತೆಗಳಿರುವ ದೇಶ, ಎಂಬಂತೆ ಸಂಕಲ್ಪನೆ ಇತ್ತು. ೭೦ ರಿಂದ ೯೦ ರ ದಶಕದಲ್ಲಿ ಭಾರತದ ವಿಜ್ಞಾನಿಗಳು, ಆಧುನಿಕ ವೈದ್ಯರು, ಅಭಿಯಂತರು, ವ್ಯಾಪಾರಿಗಳು ವಿದೇಶಕ್ಕೆ ಹೋಗಿ ಅಲ್ಲಿ ನೆಲೆಸಿ ಅಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿಯಾದರು. ೨೦೦೦ ದ ನಂತರ ಇದರಲ್ಲಿ ಪ್ರಚಂಡ ಪ್ರಮಾಣದಲ್ಲಿ ಹೆಚ್ಚಳವಾಯಿತು. ಕಳೆದ ೨ ದಶಕಗಳಲ್ಲಿ ಭಾರತದಲ್ಲಿನ ಯೋಗ ಹಾಗೂ ಆಯುರ್ವೇದದ ಆಕರ್ಷಣೆ ಹೆಚ್ಚಾಗಿ ವಿದೇಶಿಯರು ರಭಸದಿಂದ ಅದನ್ನು ಅಂಗೀಕರಿಸಲು ಆರಂಭಿಸಿದರು. ಕಳೆದ ಕೆಲವೇ ವರ್ಷಗಳಲ್ಲಿ ‘ಭಾರತದ ಪ್ರಾಚೀನ ವಿಜ್ಞಾನವು ಸಂಪೂರ್ಣ ಜಗತ್ತಿನ ಆಧುನಿಕ ವಿಜ್ಞಾನಕ್ಕಿಂತ ಪ್ರಗತವಾಗಿತ್ತು, ಎಂಬುದನ್ನು ವಿವಿಧ ಉದಾಹರಣೆಗಳಿಂದ ವಿದೇಶಿಯರು ಕೂಡ ದೊಡ್ಡ ಪ್ರಮಾಣದಲ್ಲಿ ಹೇಳಲು ಆರಂಭಿಸಿದರು. ೨೦೨೧ ರ ನಂತರ ಜಾಗತಿಕ ಸ್ತರದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯು ಪ್ರಚಂಡ ವೇಗದಲ್ಲಿ ಆಗುತ್ತಿರುವುದರ ಚರ್ಚೆ ಆರಂಭವಾಯಿತು. ಕೊರೋನಾದ ನಂತರ ಜಗತ್ತಿನಾದ್ಯಂತದ ಆರ್ಥಿಕ ಹಿಂಜರಿತದ ನಂತರ ಭಾರತದ ಹೆಚ್ಚುತ್ತಿರುವ ‘ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಯನ್ನು ನೋಡುವಾಗ ಸಂಪೂರ್ಣ ಜಗತ್ತು ಒಬ್ಬ ‘ಗ್ಲೋಬಲ್ ಪ್ಲೇಅರ್ (ಆರ್ಥಿಕ ಕ್ಷೇತ್ರದಲ್ಲಿನ ಆಟಗಾರ) ಎನ್ನುವ ದೃಷ್ಟಿಯಲ್ಲಿ ಭಾರತವನ್ನು ನೋಡುತ್ತಿದೆ.

ಇಷ್ಟೆಲ್ಲ ಹಿನ್ನೆಲೆಯನ್ನು ಹೇಳುವ ಕಾರಣವೆಂದರೆ ಭಾರತದ ಪ್ರವಾಸದಲ್ಲಿರುವ ಉಕ್ರೇನ್‌ನ ವಿದೇಶಾಂಗ ಮಂತ್ರಿ ಎಮೀನ್ ಝಾಪರೋವಾ ಇವರು ಭಾರತದ ಸಾಮರ್ಥ್ಯದ ಕುರಿತು ಗುಣಗಾನ ಮಾಡಿ ಅದರಿಂದ ಹಲವು ನಿರೀಕ್ಷೆಗಳಿರುವುದನ್ನು ವ್ಯಕ್ತಪಡಿಸಿದ್ದಾರೆ. ಆ ಅಪೇಕ್ಷೆಯಲ್ಲಿ ‘ಭಾರತ ಉಕ್ರೇನ್‌ಗೆ ಸಹಾಯ ಮಾಡಬೇಕು, ಎನ್ನುವ ತೆರೆಮರೆಯ ಸಂದೇಶವಿದ್ದರೂ, ಅದರಿಂದ ಜಾಗತಿಕ ಸ್ತರದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಭಾರತದ ಮಹತ್ವ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದೇ ಬರುತ್ತದೆ.  ಕೇವಲ ಭಾರತದ ಅರ್ಥವ್ಯವಸ್ಥೆಯ ಅಭಿವೃದ್ಧಿಯನ್ನು ಉದ್ದೇಶಿಸಿ ಝಾಪರೋವಾ ಇವರು ‘ವಿಶ್ವಗುರು ಎಂಬ ಶಬ್ದವನ್ನು ಭಾರತಕ್ಕೆ ಉಪಯೋಗಿಸಿರುವುದಲ್ಲ, ಬದಲಾಗಿ ಅದು ಜಗತ್ತಿನಾದ್ಯಂತ ಯುದ್ಧದ ವಾತಾವರಣವಿರುವಾಗ ಭಾರತ ಅವಲಂಬಿಸಿದ ‘ತಟಸ್ಥ ಭೂಮಿಕೆಯಿಂದ ! ‘ಉಕ್ರೇನ್‌ನಂತಹ ದೇಶಗಳಿಗೆ ಭಾರತದಿಂದ ಸಹಾಯದ ಅಪೇಕ್ಷೆಯಿದೆ ಹಾಗೂ ಭಾರತದ ಆಧಾರವೂ ಅವುಗಳಿಗೆ ಬೇಕೆನಿಸುತ್ತದೆ, ಎಂದು ಹೇಳಲು ಆಸ್ಪದವಿದೆ. ಝಾಪರೋವಾ ಇವರು ಇಂಧನ ಕ್ಷೇತ್ರದ ಹಾಗೆಯೆ ಸೈನಿಕ ಕ್ಷೇತ್ರದಲ್ಲಿಯೂ ಭಾರತವು ಜಗತ್ತಿನೊಂದಿಗೆ ಕೊಡುಕೊಳ್ಳುವಿಕೆ ಮಾಡಬೇಕು, ಎಂದು ಹೇಳಿದರು. ಭಾರತ ಜಗತ್ತಿನಾದ್ಯಂತದ ಆರ್ಥಿಕ ಸವಾಲನ್ನು ಸ್ವೀಕರಿಸಲು ಮುಂದೆ ಬರಬೇಕು. ಹೀಗೆ ಮಾಡುವುದು ಅಥವಾ ಮಾಡದಿರುವುದು ಒಂದು ಪ್ರತ್ಯೇಕ ವಿಷಯವಾಗಿರಬಹುದು; ಆದರೆ ಸದ್ಯ ಇತರ ದೇಶಗಳು ಇಂತಹ ಅಪೇಕ್ಷೆಯನ್ನಿಟ್ಟುಕೊಳ್ಳುವಂತಹ ಸ್ಥಿತಿಯನ್ನು ಭಾರತ ಜಾಗತಿಕ ಸ್ತರದಲ್ಲಿ ಸೃಷ್ಟಿಸಿದೆ.

ವಿದೇಶ ಸಚಿವ ಎಸ್. ಜಯಶಂಕರ

ವಿದೇಶ ಸಚಿವರ ಆದರ ಯುಕ್ತ ವರ್ಚಸ್ಸು ಕಳೆದ ಕೆಲವು ತಿಂಗಳಲ್ಲಿ ವಿದೇಶ ಸಚಿವ ಎಸ್. ಜಯಶಂಕರ ಇವರು ವಿದೇಶ ನೀತಿಯಲ್ಲಿ ಅವಲಂಬಿಸಿದ ಕಠೋರ ನಿಲುವು ಭಾರತದ ವಿಷಯದಲ್ಲಿ ಇತರರ ಮನಸ್ಸಿನಲ್ಲಿ ಗೌರವ ಮೂಡಿಸುವಂತಹದ್ದಾಗಿದೆ. ‘ಪ್ರತಿಯೊಂದು ದೇಶದ ಜೊತೆಗೆ ಭಾರತದ ಸ್ವತಂತ್ರ ಸಂಬಂಧವಿರಲಿದೆ. ಇತರ ದೇಶಗಳೊಂದಿಗೆ ಸಂಬಂಧವನ್ನಿಡಲು ಭಾರತವು ಯಾರದ್ದೇ ಒತ್ತಡಕ್ಕೆ ಮಣಿದು ಹಿಂಜರಿಯುವುದಿಲ್ಲ, ಎನ್ನುವ ಸಂದೇಶವು ಸದ್ಯ ಇಡೀ ಜಗತ್ತಿಗೆ ಹೋಗಿದೆ. ಈ ಹಿಂದೆ ಅನೇಕ ವರ್ಷಗಳವರೆಗೆ ಅಮೇರಿಕಾದಿಂದ ನಮ್ಮ ಮೇಲೆ ಆರ್ಥಿಕ ಒತ್ತಡವಿತ್ತು. ಭಾರತ ತಟಸ್ಥ ದೇಶವಾಗಿದ್ದರೂ ಈ ಒತ್ತಡದಿಂದಾಗಿ ಅಣುಸಂಶೋಧನೆ ಹಾಗೂ ಸಂಬಂಧಪಟ್ಟ ವಿಷಯಗಳಿಗಾಗಿ ಭಾರತ ಹಿಂಜರಿಯಬೇಕಾಗುತ್ತಿತ್ತು. ಅನೇಕ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಜಯಶಂಕರ ಇವರು ಪಾಕಿಸ್ತಾನ, ಚೀನಾ, ರಷ್ಯಾ-ಉಕ್ರೇನ್ ಯುದ್ಧ, ಅಮೇರಿಕಾದೊಂದಿಗಿನ ಸಂಬಂಧ, ಉಗ್ರವಾದ ಮುಂತಾದ ವಿಷಯಗಳಲ್ಲಿ ಭಾರತದ ಪರವಾಗಿ ಪ್ರಖರವಾಗಿ ಮಾತನಾಡಿದ್ದಾರೆ. ‘ಭಾರತವನ್ನು ಅವಮಾನಿಸುವ, ಭಾರತವನ್ನು ತುಳಿಯುವ ದಿನಗಳು ಆಗಿಹೋಗಿವೆ, ಎಂದು ಅವರು ವಿವಿಧ ಪ್ರಸಂಗಗಳಲ್ಲಿ ನೀಡಿದ ಹೇಳಿಕೆಗಳಿಂದ ಸಿದ್ಧ ಪಡಿಸಿದ್ದಾರೆ. ಆದ್ದರಿಂದ ಸದ್ಯ ಜಾಗತಿಕ ಸ್ತರದಲ್ಲಿ ಭಾರತದ ನಿಲುವು ‘ಒತ್ತಡಯುಕ್ತ ದೇಶ, ಎಂದು ಆಗಿರದೆ ‘ಮುಯ್ಯಿಗೆ ಮುಯ್ಯಿ ಎನ್ನುವ ಹಾಗೆ ಉತ್ತರ ನೀಡುವೆವು ಅಥವಾ ‘ಮುತ್ಸದ್ದಿತನದಿಂದ ಕೂಟ ನೀತಿಯನ್ನು ಉಪಯೋಗಿಸುವೆವು, ಎನ್ನುವ ಸ್ವರೂಪದ್ದಾಗಿದೆ. ಮಾನವಾಧಿಕಾರದ ವಿಷಯದಲ್ಲಿ ಚರ್ಚೆಯಾದರೆ‘ ನಾವು ಸುಮ್ಮನಿರುವುದಿಲ್ಲ. ನಮಗೂ ಪ್ರಶ್ನೆ ಕೇಳುವ ಅಧಿಕಾರವಿದೆ, ಎಂದು ಅವರು ಖಡಾಖಂಡಿತವಾಗಿ ಹೇಳಿದ್ದರು. ಶತ್ರುರಾಷ್ಟ್ರಗಳು ತಲೆತಗ್ಗಿಸಿ ನಡೆಯುವಂತಹ ಸ್ಥಿತಿ ಯನ್ನು ಎಸ್. ಜಯಶಂಕರ ಇವರು ಸೃಷ್ಟಿಸಿದ್ದಾರೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ ಇವರ ಹೆಜ್ಜೆಯ ಮೇಲೆ ಹೆಜ್ಜೆ ಸದ್ಯ ಅಮೇರಿಕಾದ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ‘ಪೀಟರ್‌ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಶನಲ್ ಇಕಾನಾಮಿಕ್ಸ್ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾರತ ವಿರೋಧಿ ವಾತಾವರಣವನ್ನು ಸೃಷ್ಟಿಸುವ ಪತ್ರಕರ್ತರು ಭಾರತಕ್ಕೆ ಬಂದು ಎಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ, ಎಂಬುದನ್ನು ತೋರಿಸಬೇಕು, ಎಂದು  ಸವಾಲು ಹಾಕಿದರು. ನಾನು ಸ್ವತಃ ಅವರಿಗೆ ಸಹಕರಿಸುತ್ತೇನೆ. ಭಾರತಕ್ಕೆ ಬರದೆ ವಾರ್ತೆ ನೀಡುವವರನ್ನು ಉಲ್ಲೇಖಿಸಿ ಕಠೋರವಾಗಿ ಅವರ ಕಿವಿ ಹಿಂಡಿದರು. ಭಾರತದ ಮುಸಲ್ಮಾನರಿಗೆ ಅನ್ಯಾಯವಾಗುತ್ತಿದ್ದರೆ, ಅವರ ಜನಸಂಖ್ಯೆ ಇಷ್ಟು ಹೆಚ್ಚಾಗುತ್ತಿತ್ತೇ ? ಜಗತ್ತಿನಲ್ಲಿ ಅತಿಹೆಚ್ಚು ಮುಸಲ್ಮಾನ ಜನಸಂಖ್ಯೆಯಿರುವ ದೇಶಗಳಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿದ್ದು ಭಾರತದಲ್ಲಿ ಮುಸಲ್ಮಾನರ ಮಕ್ಕಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನೂ ಕೊಡಲಾಗುತ್ತದೆ. ತದ್ವಿರುದ್ಧ ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಚಿಂತಾಜನಕವಾಗಿದೆ ಹಾಗೂ ಮುಸಲ್ಮಾನರೂ ಪರಸ್ಪರ ಜಗಳವಾಡುತ್ತಿದ್ದಾರೆ. ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯೂ.ಟಿ.ಓ.) ‘ಇತರ ದೇಶಗಳ ಹೇಳಿಕೆಯನ್ನೂ ಕೇಳಿಸಿಕೊಳ್ಳಿ, ಎಲ್ಲ ದೇಶಗಳ  ಕುರಿತು ನಿಷ್ಪಕ್ಷರಾಗಿರಿ, ಎಂದು ಗರ್ಜಿಸಿದರು. ಬಲಶಾಲಿ ಅಮೇರಿಕಾಗೆ ಹೋಗಿ ಅವರ ಮುಂದೆಯೆ ಹೀಗೆ ಮಾತನಾಡುವ ಧೈರ್ಯ ಭಾರತಕ್ಕೆ ಬಂದಿದೆ. ಇಷ್ಟು ಸಾಮರ್ಥ್ಯಶಾಲಿಯಾಗಿದೆ. ಭಾರತದ ಆರ್ಥಿಕ ಬೆಳವಣಿಗೆ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿರುವುದರಿಂದ ಹಾಗೂ ಭಾರತದಲ್ಲಿನ ಬಹುಸಂಖ್ಯಾತರಿಗೆ ಅವರ ಪ್ರಾಚೀನ ಗೌರವಶಾಲಿ ಪ್ರಗತಿಶೀಲ ಇತಿಹಾಸದ ಅರಿವು ಆಗಿರುವುದರಿಂದ ಅದನ್ನು ದುರ್ಬಲಗೊಳಿಸಲು ಭಾರತವಿರೋಧಿ ಹಾಗೂ ಹಿಂದೂವಿರೋಧಿ ಶಕ್ತಿಗಳು ಭಾರತದಲ್ಲಿ ಕಾಲ್ಪನಿಕ ಮಾನವಾಧಿಕಾರದ ಉಲ್ಲಂಘನೆಯಾಗು ತ್ತಿದೆ, ಮೂಲಭೂತವಾದ ಹೆಚ್ಚಾಗುತ್ತಿದೆ, ಇತ್ಯಾದಿ ಸುಳ್ಳಿನ ಕಂತೆಗಳನ್ನು ಹರಡಿಸಿ ಭಾರತದ ಘನತೆಯನ್ನು ಮಲಿನಗೊಳಿಸುವ ದೊಡ್ಡ ಷಡ್ಯಂತ್ರವನ್ನು ರಚಿಸುತ್ತಿವೆ. ಭಾರತ ಅದಕ್ಕೆ ಸೊಪ್ಪು ಹಾಕುವುದಿಲ್ಲ. ‘ಭಾರತದಲ್ಲಿನ ವಿರೋಧಪಕ್ಷದ ಸದಸ್ಯರಿಗೆ ತಮ್ಮ ಹುದ್ದೆಯನ್ನು ಬಿಡಬೇಕಾಗುತ್ತಿದೆ. ಭಾರತದಲ್ಲಿ ಮುಸಲ್ಮಾನರನ್ನು ಕೊಲ್ಲಲಾಗುತ್ತಿದೆ, ಎನ್ನುವ ಸುಳ್ಳು ಸುದ್ದಿಗಳನ್ನು ಅಲ್ಲಿನ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ನಿರ್ಮಲಾ ಸೀತಾರಾಮನ್ ಇವರು ಅಮೇರಿಕಾದ ಪತ್ರಕರ್ತರ ಮುಂದೆ ಭಾರತದ ಪರವಾಗಿ ಖಂಡತುಂಡವಾಗಿ ಮಾತನಾಡಿರುವುದು ಪತ್ರಕರ್ತರಿಗೆ ಮಾತ್ರವಲ್ಲ, ಭಾರತದ ಹಿಂದೂದ್ವೇಷಿಗಳಿಗೂ ಒಂದು ಛಡಿಯೇಟಾಗಿದೆ. ಅವರ ಈ ಸ್ಪಷ್ಟೋಕ್ತಿಯಿಂದಾಗಿ ಒಂದು ಕಲ್ಲಿನಿಂದ ಅನೇಕ ಪಕ್ಷಿಗಳು ಹೊಡೆಯಲ್ಪಟ್ಟಿವೆ. ರಾಷ್ಟ್ರಪ್ರೇಮಿಗಳಿಗೂ ಅದರಿಂದ ಸಮಾಧಾನವಾಗಿದೆ.

ಜಾಗತಿಕ ಸ್ತರದಲ್ಲಿ ಈ ವೈಚಾರಿಕ ಯುದ್ಧ ಮಾಡಲು ಭಾರತದ ಜನಪ್ರತಿನಿಧಿಗಳಿಗೆ ಹೀಗೆಯೇ ಶಕ್ತಿ ಹಾಗೂ ಪ್ರೇರಣೆ ನೀಡಲಿ ಹಾಗೂ ಭಾರತ ಎಲ್ಲ ಸ್ತರದಲ್ಲಿನ ಅಭಿವೃದ್ಧಿ ಹೆಚ್ಚಾಗಿ ಶೀಘ್ರದಲ್ಲಿಯೆ ವಿಶ್ವಗುರು ಆಗಲಿ, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !