ಸುಪ್ರಸಿದ್ಧ ಲೇಖಕ ತಾರೇಕ ಫತೇಹರವರ ನಿಧನ

ಲೇಖಕ ತಾರೇಕ ಫತೇಹ

ಟೊರಾಂಟೊ (ಕೆನಡಾ) – ಏಪ್ರಿಲ್ ೨೪ರಂದು ಪಾಕಿಸ್ತಾನಿ ಮೂಲದ ಪ್ರಸಿದ್ಧ ಕೆನಡಿಯನ್ ಲೇಖಕ ಮತ್ತು ಪತ್ರಕರ್ತರಾದ ತಾರೇಕ ಫತೇಹರವರ ನಿಧಾನವಾಯಿತು. ಅವರಿಗೆ ೭೩ ವರ್ಷವಾಗಿತ್ತು. ಕರ್ಕ ರೋಗದಿಂದ ಬಳಲುತ್ತಿದ್ದ ಫತೇಹರವರ ನಿಧನದ ಮಾಹಿತಿಯನ್ನು ಅವರ ಮಗಳಾದ ನತಾಷಾರವರು ಟ್ವೀಟ್ ಮಾಡಿ ನೀಡಿದ್ದಾರೆ. ಅವರು ಕಟ್ಟರ ಇಸ್ಲಾಮೀ ಮತಾಂಧತೆಯ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಿದ್ದರು. ಫತೇಹರವರು ಯಾವಾಗಲೂ ತಾವು ಭಾರತೀಯ ಮೂಲದವರು ಎಂಬುದನ್ನು ಅಭಿಮಾನದಿಂದ ಹೇಳುತ್ತಿದ್ದರು. ಅನೇಕ ಸಂದರ್ಶನಗಳಲ್ಲಿ ಅವರು ತಾನು ಮೂಲತಃ ರಜಪೂತನಾಗಿದ್ದು ೧೮೪೦ರ ದಶಕದಲ್ಲಿ ನನ್ನ ಪೂರ್ವಜರಿಗೆ ಬಲಾತ್ಕಾರದಿಂದ ಇಸ್ಲಾಮನ್ನು ಸ್ವೀಕರಿಸುವಂತೆ ಮಾಡಲಾಯಿತು ಎಂದು ಹೇಳಿದ್ದರು.

೧. ಫತೇಹರವರು ಪಾಕಿಸ್ತಾನದ ಕರಾಚಿಯಲ್ಲಿ ನವೆಂಬರ್ ೨೦, ೧೯೪೯ರಂದು ಜನಿಸಿದರು. ಅವರು ಸಾಮ್ಯವಾದಿ ವಿಚಾರಸರಣಿಯ ವಿದ್ಯಾರ್ಥಿ ನಾಯಕನಾಗಿ ೧೯೬೦ ರಿಂದ ೭೦ರ ದಶಕದಲ್ಲಿ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಪಾಕಿಸ್ತಾನದಲ್ಲಿನ ಸೈನ್ಯ ಸರಕಾರವು ಅವರನ್ನು ೨ ಬಾರಿ ಬಂಧಿಸಿತ್ತು. ೧೯೮೭ರಲ್ಲಿ ಅವರು ಕೆನಡಾಗೆ ಹೋದರು. ಅಲ್ಲಿ ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಕಾರ್ಯನಿರತರಾದರು.

೨. ಇಸ್ಲಾಮೀ ಮತಾಂಧತೆಯನ್ನು ಟೀಕಿಸುತ್ತಿದ್ದರಿಂದ ಅವರ ಮೇಲೆ ಅನೇಕ ಬಾರಿ ಮತಾಂಧ ಮುಸಲ್ಮಾನರು ಹಲ್ಲೆ ಮಾಡಿದ್ದರು.

೩. ಅವರು ಇಸ್ಲಾಮಿ ಮೂಲತತ್ತ್ವವಾದದ ಮೇಲೆ ಬರೆದ `ಚೆಂಜಿಂಗ್ ಆ ಮಿರಾಜ್ : ದ ಟ್ರಾಜಿಕ್ ಇಲ್ಯೂಜನ್ ಆಫ್ ಎನ್ ಇಸ್ಲಾಮಿಕ್ ಸ್ಟೇಟ್’ (ಒಂದು ಮರೀಚಿಕೆಯ ಹಿಂದೆ : ಒಂದು ಇಸ್ಲಾಮಿ ರಾಜ್ಯದ ದುರಾದ್ರಷ್ಟಕರ ಭ್ರಮೆ) ಮತ್ತು `ದ ಜ್ಯು ಇಸ್ ನಾಟ್ ಮೈ ಎನಿಮಿ : ಅನವಿಲ್ಹಿಂಗ ದ ಮಿಥ್ಸ್ ದಟ್ ಪ್ಯುಯೆಲ್ ಮುಸ್ಲಿಂ ಎಂಟಿ ಸೆಮಿಟಿಸಮ್’ (ಜ್ಯು ನನ್ನ ಶತ್ರುವಲ್ಲ : ಮುಸಲ್ಮಾನರ ಜ್ಯು ದ್ವೇಷದ ಸಂದರ್ಭದಲ್ಲಿನ ಮಿಥ್ಯಗಳ ಅನಾವರಣ) ಈ ಪುಸ್ತಕಗಳು ಜಗತ್ಪ್ರಸಿದ್ಧವಾಗಿವೆ.

೪. ಅವರು ಅನೇಕ ವರ್ಷಗಳಿಂದ ಕೆನಡಾದ ಪ್ರಸಿದ್ಧ ದಿನಪತ್ರಿಕೆಯಾದ `ಟೊರೆಂಟೊ ಸನ್’ನಲ್ಲಿ ಸ್ಥಭಕಾರರಾಗಿ ಕಾರ್ಯನಿರತರಾಗಿದ್ದರು. ಕೆಲವು ವರ್ಷಗಳ ಹಿಂದೆ ಭಾರತೀಯ ವಾರ್ತಾವಾಹಿನಿಯಾದ `ಜಿ ನ್ಯೂಜ್’ನಲ್ಲಿ ನಡೆಯುತ್ತಿದ್ದ `ಫತೇಹ ಕ ಫತ್ವಾ’ ಎಂಬ ಕಾರ್ಯಕ್ರಮವು ಅತ್ಯಂತ ಜನಪ್ರಿಯವಾಗಿತ್ತು.