ವಸಂತ ಋತುನಲ್ಲಿ ಸಂಭವಿಸುವ ಚರ್ಮ ರೋಗಗಳನ್ನು ತಡೆಯಲು ಮಾಡಬೇಕಾದ ಉಟಣೆಯನ್ನು ಬಳಸಿ !

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಈಗ ವಸಂತ ಋತು ಪ್ರಾರಂಭವಾಗಿದೆ. ಈ ದಿನಗಳಲ್ಲಿ ಕಫದ ಪ್ರಮಾಣವು ಹೆಚ್ಚಾಗುತ್ತದೆ. ಇದರಿಂದ ಶರೀರಕ್ಕೆ ತುರಿಕೆ, ಚರ್ಮದ ಸೊಂಕು (ಫಂಗಲ್ ಇನ್‌ಫೆಕ್ಷನ್) ನಂತಹ ಸಮಸ್ಯೆಗಳು ಉಂಟಾಗುತ್ತವೆ. ಇದನ್ನು ತಡೆಗಟ್ಟಲು, ಮುಂದಿನಂತೆ ಪ್ರತಿದಿನ ಶರೀರಕ್ಕೆ ಉಟಣೆ ಹಚ್ಚಿ ಸ್ನಾನ ಮಾಡಬೇಕು. ಕಾಲು ಕೆಜಿ ಕಡಲೆಬೇಳೆ ಅಥವಾ ಮಸೂರಬೇಳೆಯಲ್ಲಿ ೫೦ ಗ್ರಾಂ ಉಟಣೆ ಮಿಶ್ರಣ ಮಾಡಿ ಡಬ್ಬಿಯಲ್ಲಿ ತುಂಬಿಡಬೇಕು. ಸ್ನಾನದ ಸಮಯದಲ್ಲಿ ದೇಹಕ್ಕೆ ನೀರನ್ನು ಸುರಿದ ನಂತರ, ಈ ಮಿಶ್ರಣದ ೧-೨ ಚಮಚ ಒಣ ಪುಡಿಯನ್ನು ದೇಹಕ್ಕೆ ಸರಿಯಾಗಿ ತಿಕ್ಕಿ ಹಚ್ಚಬೇಕು. ಉಟಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ಅನಗತ್ಯ ಕೊಬ್ಬು ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ಚರ್ಮವು ಕಾಂತಿಯುತವಾಗುತ್ತದೆ. ಸಾಬೂನು ಹಚ್ಚಿದರೆ ಉಟಣೆ ಹಚ್ಚುವ ಅಗತ್ಯವಿಲ್ಲ. (ಅತ್ಯಂತ ಎಣ್ಣೆಯುಕ್ತವಾಗಿರುವ ಭಾಗಗಳಿಗೆ ಸಾಬೂನು ಹಚ್ಚಲು ಅಡಚಣೆಯಿಲ್ಲ.)

ತಿಂಡಿ ತಿನಿಸುಗಳನ್ನು ‘ಸಹಜವಾಗಿ ಕಾಣಿಸುವಂತೆ, ಇಡಬಾರದು !

ವೈದ್ಯ ಮೇಘರಾಜ ಪರಾಡಕರ್

ಮನೆಯಲ್ಲಿ ಬಿಸ್ಕತ್ತು, ಶೇವು, ಚೂಡಾ ಇಂತಹ ತಿಂಡಿ ತಿನಿಸುಗಳನ್ನು ‘ಸಹಜವಾಗಿ ಕಾಣಿಸುವಂತೆ, ಇಟ್ಟರೆ ಯಾವಾಗ ಆ ಪದಾರ್ಥಗಳ ಕಡೆಗೆ ಗಮನ ಹೋಗುತ್ತದೆಯೋ, ಆಗ ಅದನ್ನು ತಿನ್ನಬೇಕೆನಿಸುತ್ತದೆ. ಆದ್ದರಿಂದ ಅಕಾಲದಲ್ಲಿ ಇಂತಹ ಪದಾರ್ಥಗಳನ್ನು ತಿನ್ನಲಾಗುತ್ತವೆ. ಅಯೋಗ್ಯ ಸಮಯದಲ್ಲಿ ಸೇವಿಸಿದ ಆಹಾರವು ಜೀರ್ಣವಾಗುವುದಿಲ್ಲ ಮತ್ತು ಆಹಾರವು ಜೀರ್ಣವಾಗದಿದ್ದರೆ ರೋಗಗಳುಂಟಾಗುತ್ತವೆ.ಆದ್ದರಿಂದ ಇಂತಹ ಪದಾರ್ಥಗಳನ್ನು ‘ಸಹಜವಾಗಿ ಕಾಣಿಸುವಂತೆ, ಇಡಬಾರದು.

ಬೇಸಿಗೆಯ ದಿನಗಳಲ್ಲಾಗುವ ಆಯಾಸಕ್ಕೆ ಮನೆಮದ್ದು

‘ಬೇಸಿಗೆಯ ದಿನಗಳಲ್ಲಿ ಉಷ್ಣತೆಯಿಂದ ಬಸವಳಿದಂತಾಗುತ್ತದೆ. ಆಯಾಸ ಆಗುತ್ತದೆ. ಇದಕ್ಕೆ ಉಪಾಯವೆಂದು ೩ ಬಟ್ಟಲು ಗೋದಿ ಹಿಟ್ಟನ್ನು ಚಾಕಲೆಟ್ ಬಣ್ಣವಾಗುವವರೆಗೂ ಹುರಿಯಬೇಕು. ಈ ಹಿಟ್ಟು ತಣ್ಣಗಾದ ನಂತರ ಅದರಲ್ಲಿ ೧ ಬಟ್ಟಲು ಸಕ್ಕರೆಪುಡಿಯನ್ನು ಸರಿಯಾಗಿ ಬೆರೆಸಬೇಕು. ಈ ಮಿಶ್ರಣವನ್ನು ಭರಣಿಯಲ್ಲಿ ತುಂಬಿ ಇಡಬೇಕು. ಇದರಲ್ಲಿ ೨-೪ ಚಮಚದಷ್ಟು ಮಿಶ್ರಣವನ್ನು ಸ್ವಲ್ಪ ನೀರಿನಲ್ಲಿ ಸೇರಿಸಿ ಕುಡಿದರೆ ತಕ್ಷಣ ಉತ್ಸಾಹ ಬರುತ್ತದೆ. ಮಧುಮೇಹ ಇರುವವರು ಸಕ್ಕರೆಯನ್ನು ಹಾಕದೇ ಕೇವಲ ಹುರಿದ ಹಿಟ್ಟನ್ನು ಉಪಯೋಗಿಸಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೭.೩.೨೦೨೩)