ಪ್ರಾಚೀನ ಹೇಮಾಡಪಂಥಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನು ಉದ್ದೇಶಪೂರ್ವಕ ಕಸದ ರಾಶಿ ಕೆಳಗೆ ಮುಚ್ಚಲು ಪ್ರಯತ್ನ !

  • ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಬೀಡ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

  • ದೇವಸ್ಥಾನದ ಪರಿಸರದಲ್ಲಿ ಮುಸಲ್ಮಾನ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ದೇವಸ್ಥಾನದ ಕಡೆಗೆ ದುರ್ಲಕ್ಷ

 

ಕಸದ ರಾಶಿಯಲ್ಲಿ ಮುಚ್ಚಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನ

ಬೀಡ – ಚಂಪಾವತಿನಗರಿ ಎಂದು ಗುರುತಿಸಲಾಗುವ ಬೀಡ ನಗರದಲ್ಲಿನ ಕಿಲ್ಲಾ ಗೇಟ್ ಪರಿಸರದಲ್ಲಿರುವ ಪ್ರಾಚೀನ ಹೇಮಾಡಪಂಥಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಸದ ರಾಶಿಯ ಕೆಳಗೆ ಮುಚ್ಚುವ ಪ್ರಯತ್ನ ಮಾಡಲಾಗುತ್ತಿದೆ. ಈ ಐತಿಹಾಸಿಕ ದೇವಸ್ಥಾನದಲ್ಲಿ ಕಸದ ಜೊತೆಗೆ ಡ್ರೈನೇಜ್ ನೀರು ಹರಿಸಿ ದೇವಸ್ಥಾನವನ್ನು ಉದ್ದೇಶಪೂರ್ವಕವಾಗಿ ವಿಡಂಬನೆ ಮಾಡಲಾಗುತ್ತಿದೆ, ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಆರೋಪಿಸಿದೆ. ಈ ದೇವಸ್ಥಾನ ವಿಡಂಬನೆಯಿಂದ ಮತ್ತು ಅತಿಕ್ರಮಣದಿಂದ ತಕ್ಷಣ ಮುಕ್ತಗೊಳಿಸಬೇಕು. ಬರುವ ೧೫ ದಿನಗಳಲ್ಲಿ ಸರಕಾರದಿಂದ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳದೆ ಇದ್ದರೆ ಮನಸೇ ಈ ದೇವಸ್ಥಾನ ಅತಿಕ್ರಮಣದಿಂದ ಮುಕ್ತಗೊಳಿಸುವುದು, ಎಂದು ಮನಸೇಯ ರಾಜ್ಯ ಉಪಾಧ್ಯಕ್ಷ ಅಶೋಕ್ ತಾವರೆ ಇವರು ಇತ್ತೀಚಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು. (ಸರಕಾರಕ್ಕೆ ಈ ರೀತಿ ಎಚ್ಚರಿಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ಸ್ವತಃ ಏಕೆ ಕ್ರಮ ಕೈಗೊಳ್ಳುವುದಿಲ್ಲ ? ದೇವಸ್ಥಾನ ಹಿಂದೂಗಳದಾಗಿದ್ದರಿಂದ ಈ ರೀತಿಯ ತಾತ್ಸಾರ ಏಕೆ ? – ಸಂಪಾದಕರು)

೧. ಅಶೋಕ ತಾವರೆ ಇವರು, ನಾವು ದೇವಸ್ಥಾನದ ಬಗ್ಗೆ ತಿಳಿದಿರುವ ಹಿರಿಯ ನಾಗರೀಕರಿಗೆ ಕೇಳಿದಾಗ ಅವರು, ಈ ದೇವಸ್ಥಾನ ಕಂಕಾಲೇಶ್ವರ ದೇವಸ್ಥಾನದ ಸಮಕಾಲಿನ ಶ್ರೀ ಮಹಾಲಕ್ಷ್ಮಿ ದೇವಿಯ ದೇವಸ್ಥಾನವಾಗಿದೆ; ಆದರೆ ದೇವಸ್ಥಾನದ ಪರಿಸರದಲ್ಲಿ ಮುಸಲ್ಮಾನ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ದೇವಸ್ಥಾನದ ಕಡೆಗೆ ದುರ್ಲಕ್ಷ ಆಗಿದೆ. ಈ ವಾಸ್ತು ೧೮ ನೇ ಶತಮಾನದ್ದಾಗಿದ್ದು ಎಂದು ಕೆಲವು ನಾಗರಿಕರು ಹೇಳಿದರು.

೨. ಈ ಪ್ರಕರಣದಲ್ಲಿ ಮನಸೇ ಜಿಲ್ಲಾಡಳಿತದ ಬಳಿ ಐತಿಹಾಸಿಕ ವಾಸ್ತುಗಳ ದುರಾವಸ್ಥೆ ನಿಲ್ಲಿಸಬೇಕೆಂದು ಮನವಿ ಕೂಡ ನೀಡಿದೆ. ಮನವಿಯ ನಂತರ ನಗರ ಪರಿಷತ್ತಿನ ಮುಖ್ಯ ಅಧಿಕಾರಿ ನೀತಾ ಅಂಧಾರೆ ಇವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

೩. ಕಟ್ಟಡಕ್ಕೆ ಭೇಟಿ ನೀಡಿದ ನಂತರ ನೀತಾ ಅಂಧಾರೆ ಇವರು, ಆಡಳಿತದಿಂದ ಬೇಗನೆ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗುವುದು. ಅದರ ನಂತರ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಿ ಈ ವಾಸ್ತು ನಿಖರವಾಗಿ ಯಾವ ಕಾಲದ್ದು ಎಂದು ಸ್ಪಷ್ಟಪಡಿಸುವುದು, ಎಂದು ಹೇಳಿದರು.

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿಯನ್ನು ತೋರಿಸುವುದಾಗಿದೆ – ಸಂಪಾದಕರು

ಸಂಪಾದಕರ ನಿಲುವು

  • ಹಿಂದೂಗಳ ಪ್ರಾಚೀನ ದೇವಸ್ಥಾನದ ಜೀರ್ಣಾವಸ್ಥೆಗೆ ಜವಾಬ್ದಾರ ಇರುವ ಆಡಳಿತದಲ್ಲಿನ ಸಂಬಂಧಪಟ್ಟವರಿಗೆ ಜೈಲಿಗೆ ಅಟ್ಟಿ !
  • ಮುಸಲ್ಮಾನರ ಭಾವನೆಗಳನ್ನು ಕಾಪಾಡುವುದಕ್ಕಾಗಿ ಅವರ ಪರಿಸರದಲ್ಲಿನ ದೇವಸ್ಥಾನದ ಕಡೆಗೆ ದುರ್ಲಕ್ಷ ಏಕೆ ? ಈ ದೇವಸ್ಥಾನದಲ್ಲಿ ಕಸ ಹಾಕಿ ಅದನ್ನು ಯಾರು ಭ್ರಷ್ಟ ಮಾಡುತ್ತಿದ್ದಾರೆ ಇದು ಕೂಡ ಬೆಳಕಿಗೆ ಬಂದು ಅವರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕ !