ಕಾಶ್ಮೀರದಲ್ಲಿನ ೧ ಸಾವಿರದ ೩೦೦ ವರ್ಷದ ಪ್ರಾಚೀನ ಮಾರ್ತಂಡ ಸೂರ್ಯ ದೇವಸ್ಥಾನದಲ್ಲಿ ಈದ್ ಪ್ರಯುಕ್ತ ಪಟಾಕಿ ಸಿಡಿತ !

ಮುಸಲ್ಮಾನ ಹುಡುಗರು ಈ ಕೃತ್ಯ ಮಾಡಿದ್ದರಿಂದ ಪೂರಾತತ್ವ ಇಲಾಖೆ ಮಾತ್ರ ಮೌನ

ಅನಂತನಾಗ (ಜಮ್ಮು ಕಾಶ್ಮೀರ) – ಇಲ್ಲಿಯ 1 ಸಾವಿರದ 300 ವರ್ಷಗಳಷ್ಟು ಪ್ರಾಚೀನವಾಗಿರುವ ಮಾರ್ತಂಡ ಸೂರ್ಯ ದೇವಸ್ಥಾನದಲ್ಲಿ ಈದ್ ಪ್ರಯುಕ್ತ ಪಟಾಕಿ ಸಿಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರವಾಗಿ, ಅದರಲ್ಲಿ ಮುಸಲ್ಮಾನ ಹುಡುಗರು ಪಟಾಕಿ ಸಿಡಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಈ ದೇವಸ್ಥಾನಕ್ಕೆ ಭಾರತೀಯ ಪುರಾತತ್ವ ಇಲಾಖೆಯಿಂದ ‘ಸಂರಕ್ಷಿತ ಸ್ಮಾರಕ’ ಎಂದು ಘೋಷಿಸಲಾಗಿದ್ದರು ಕೂಡ ಈ ಘಟನೆ ಬೆಳಕಿಗೆ ಬಂದ ನಂತರ ಕೂಡ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಾಗಿಲ್ಲ. ಈ ಹಿಂದೆ ದೇವಸ್ಥಾನದಲ್ಲಿ ಹಿಂದೂಗಳು ಪೂಜೆ ಮಾಡುವ ಪ್ರಯತ್ನದ ಬಗ್ಗೆ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. (ಪೂಜೆ ಮಾಡಿದರೆ ಪುರಾತತ್ವ ಇಲಾಖೆಗೆ ನಡೆಯುವುದಿಲ್ಲ; ಆದರೆ ದೇವಸ್ಥಾನದಲ್ಲಿ ಪಟಾಕಿ ಸಿಡಿಸಿದರೆ ನಡೆಯುತ್ತದೆಯೇ ? ಹಿಂದೂದ್ವೇಷಿ ಭಾರತೀಯ ಪುರಾತತ್ವ ಇಲಾಖೆಯನ್ನು ನಿಷೇಧಿಸಿ ! – ಸಂಪಾದಕರು)

ಮಾರ್ತಂಡ ಸೂರ್ಯ ದೇವಸ್ಥಾನದ ಇತಿಹಾಸ !

(ಸೌಜನ್ಯ : Parichaya ಪರಿಚಯ)

ಲಲಿತಾದಿತ್ಯ ಮುಕ್ತಾಪೀಡ ಹೆಸರಿನ ಗೌರವಶಾಲಿ ಹಿಂದೂ ರಾಜನು ೮ ನೇ ಶತಮಾನದಲ್ಲಿ ದೇವಸ್ಥಾನದ ನಿರ್ಮಾಣ ಮಾಡಲಾಗಿತ್ತು ಎಂದು ಹೇಳಲಾಗುತ್ತದೆ. ಈ ದೇವಸ್ಥಾನದ ಹತ್ತಿರ ೮೪ ಚಿಕ್ಕ ಚಿಕ್ಕ ದೇವಸ್ಥಾನಗಳು ಇತ್ತು. ಮಾರ್ತಂಡ ಸೂರ್ಯ ದೇವಸ್ಥಾನದ ಭವ್ಯತೆ ಎಷ್ಟು ಇದೆ ಎಂದರೆ, ಅಲೌಕಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಜೊತೆ ಅದರ ತುಲನೆ ಮಾಡಲಾಗುತ್ತಿತ್ತು. ಲಲಿತಾದಿತ್ಯ ಇವರ ಆಡಳಿತ ಇದು ಮಧ್ಯ ಏಶಿಯಾದಿಂದ ಇರಾನ ಮತ್ತು ಭಾರತದವರೆಗೆ ವಿಸ್ತಾರವಾಗಿತ್ತು. ಅದರ ನಂತರದ ರಾಜರ ಸಾಮರ್ಥ್ಯ ಮಾತ್ರ ಅಲ್ಪವಾಗಲು ಆರಂಭವಾಗುತ್ತಾ ಹೋಯಿತು. ಆದ್ದರಿಂದ ಇಸ್ಲಾಮಿ ಆಕ್ರಮಣಕಾರರು ಸಮಯ ಸಮಯದಲ್ಲಿ ಮಾರ್ತಂಡ ದೇವಸ್ಥಾನದ ಮೇಲೆ ದಾಳಿ ನಡೆಸಿದರು.೧೫ ನೇ ಶತಮಾನದಲ್ಲಿ ಮುಸಲ್ಮಾನರ ಒಂದು ಸೈನ್ಯ ಈ ದೇವಸ್ಥಾನದ ಮೇಲೆ ದಾಳಿ ಮಾಡಿತು. ದೇವಸ್ಥಾನವನ್ನು ಸಂಪೂರ್ಣವಾಗಿ ನಷ್ಟ ಮಾಡುವುದಕ್ಕಾಗಿ ಈ ಸೈನ್ಯಕ್ಕೆ ಒಂದು ವರ್ಷ ಬೇಕಾಯಿತು. ಇದರಿಂದ ಈ ದೇವಸ್ಥಾನದ ಭವ್ಯತೆಯ ಕಲ್ಪನೆ ನಾವು ಮಾಡಬಹುದು. ಈಗ ಈ ದೇವಸ್ಥಾನದ ಕೇವಲ ಅವಶೇಷ ಉಳಿದಿದೆ.

ಸಂಪಾದಕೀಯ ನಿಲುವು

ಮುಸಲ್ಮಾನ ಹುಡುಗರಿಗೆ ಮಸೀದಿಯಲ್ಲಿ ಪಟಾಕಿ ಸಿಡಿಸಬೇಕೆಂದು ಅನಿಸಲಿಲ್ಲ; ಆದರೆ ಹಿಂದೂಗಳ ದೇವಸ್ಥಾನದಲ್ಲಿ ಅಳಿವಿನ ಅಂಚಿನಲ್ಲಿರುವ ದೇವಸ್ಥಾನದಲ್ಲಿ ಅವುಗಳನ್ನು ಸಿಡಿಸಬೇಕೆಂದು ಅನಿಸಿತು, ಇದನ್ನು ತಿಳಿದುಕೊಳ್ಳಿ ! ಹಿಂದೂಗಳ ದೇವಸ್ಥಾನದ ಅವಶೇಷ ಕೂಡ ಉಳಿಯಬಾರದು, ಅದಕ್ಕಾಗಿ ಮಹಮ್ಮದ ಘೋರಿಯ ವಂಶಜರು ಇಂದುಗೂ ಕಾರ್ಯನಿರತವಾಗಿದ್ದಾರೆ, ಇದನ್ನು ತಿಳಿದುಕೊಳ್ಳಿ !

ಪುರಾತತ್ವ ಇಲಾಖೆ ನಿದ್ರಿಸುತ್ತಿದೆಯೇ ? ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳದ ರಕ್ಷಣೆ ಮಾಡಲು ಸಾಧ್ಯವಾಗದ ಪುರಾತತ್ವ ಇಲಾಖೆ ವಿಸರ್ಜನೆ ಮಾಡಿರಿ !