ದೇವಸ್ಥಾನಗಳ ಭೂಮಿಯನ್ನು ಹರಾಜು ಮಾಡುವ ಹಕ್ಕು ಕೇವಲ ಅರ್ಚಕರಿಗೆ ಇದೆ ಹೊರತು ಅಧಿಕಾರಿಗಳಿಗೆ ಇಲ್ಲ!

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಘೋಷಣೆ

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶ ಸರಕಾರವು ಯಾವುದೇ ದೇವಸ್ಥಾನಗಳ ವ್ಯವಹಾರಗಳನ್ನು ನಿಯಂತ್ರಿಸುವುದಿಲ್ಲ. ಹಾಗಾಗಿ ದೇವಸ್ಥಾನಗಳ ಹೆಸರಲ್ಲಿ ಇರುವಷ್ಟು ಜಮೀನನ್ನು ಜಿಲ್ಲಾಧಿಕಾರಿಗಳು ಹರಾಜು ಮಾಡಲು ಸಾಧ್ಯವಿಲ್ಲ. ಅರ್ಚಕರು ಮಾತ್ರ ಆ ಭೂಮಿಯನ್ನು ಹರಾಜು ಹಾಕಬಹುದು. ಇದಲ್ಲದೇ ಖಾಸಗಿ ದೇವಸ್ಥಾನಗಳಲ್ಲಿ ಹಾಗೂ ಟ್ರಸ್ಟ್ ಬೋರ್ಡ್ ಇರುವಲ್ಲಿ ಅರ್ಚಕರಿಗೆ ಗೌರವಧನ ನೀಡುವ ನಿಯಮಗಳನ್ನು ಜಾರಿಗೊಳಿಸವಂತೆ ಸೂಚನೆ ನೀಡಲಾಗುವುದು, ಎಂದು ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಅಲ್ಲಿ ನಡೆದ ಒಂದು ಸಭೆಯಲ್ಲಿ ಮಾಹಿತಿ ನೀಡಿದರು.ಬ್ರಾಹ್ಮಣರು ಧರ್ಮವನ್ನು ರಕ್ಷಿಸಿದರು !ಶಿವರಾಜ ಸಿಂಗ ಚೌಹಾಣ ಇವರು ಮಾತನ್ನು ಮುಂದುವರೆಸುತ್ತಾ, ಬ್ರಾಹ್ಮಣರು ಧರ್ಮ, ಆಧ್ಯಾತ್ಮ, ಜ್ಞಾನ, ವಿಜ್ಞಾನ, ಯೋಗ, ಆಯುರ್ವೇದ, ಪರಂಪರೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಶ್ರಮಿಸಿದ್ದಾರೆ, ಯಜ್ಞ, ಹವನ, ಶಾಸ್ತ್ರ ಇತ್ಯಾದಿ ಎಲ್ಲವನ್ನೂ ಸುರಕ್ಷಿತವಾಗಿಡುವ ಕೆಲಸ ಮಾಡಿದರು. ಸಂಸ್ಕೃತಿ ರಕ್ಷಣೆಗೆ ಶ್ರಮಿಸಿದರು ಎಂದು ಹೇಳಲು ನನಗೆ ಅಭಿಮಾನವೆನಿಸುತ್ತದೆ, ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದರು.ಬ್ರಾಹ್ಮಣರ ಕಲ್ಯಾಣಕ್ಕಾಗಿ ಮಂಡಳಿ ಸ್ಥಾಪನೆ !ವ್ಯಾಸ ಮಹಷರ್ಷಿಯವರು ಮಹಾಭಾರತವನ್ನು ಬರೆದರು, ಸಂತ ತುಳಸೀದಾಸರು ರಾಮಾಯಣವನ್ನು ಬರೆದರು. ಪ್ರತಿಯೊಂದು ಕ್ಷೇತ್ರದಲ್ಲೂ ಇಂತಹ ಬ್ರಾಹ್ಮಣ ವಿದ್ವಾಂಸರು ಇದ್ದಾರೆ. ಹಾಗಾಗಿ ನಮ್ಮ ಧರ್ಮ ಮತ್ತು ಸಂಸ್ಕೃತಿಯ ರಕ್ಷಕರು ಬ್ರಾಹ್ಮಣರಾಗಿದ್ದಾರೆ. ಅವರ ಕಲ್ಯಾಣಕ್ಕಾಗಿ ‘ಬ್ರಹ್ಮಣ ಕಲ್ಯಾಣ ಮಂಡಳಿ’ ಸ್ಥಾಪಿಸುವುದಾಗಿ ಶಿವರಾಜ್ ಸಿಂಗ್ ಚೌಹಾಣ್ ಈ ಸಂದರ್ಭದಲ್ಲಿ ಘೋಷಿಸಿದರು.

ಸಂಪಾದಕರ ನಿಲುವು

ಮಧ್ಯಪ್ರದೇಶ ಸರಕಾರವು ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬಹುದಾದರ, ದೇಶದ ಇತರ ರಾಜ್ಯ ಸರಕಾರಗಳು ಇಂತಹ ನಿಧರ್ಧಾರ ಕೈಗೊಳ್ಳಲು ಏಕೆ ಸಾಧ್ಯವಿಲ್ಲ ?ಮಧ್ಯಪ್ರದೇಶ ಸರಕಾರವು ಇನ್ನೂ ಮುಂದಿನ ಹೆಜ್ಜೆ ಇಡುತ್ತಾ ದೇವಸ್ಥಾನಗಳ ಸರಕಾರಿಕರಣವನ್ನುರದ್ದುಗೊಳಿಸಿ ಎಲ್ಲಾ ದೇವಸ್ಥಾನಗಳನ್ನು ಭಕ್ತರಿಗೆ ಒಪ್ಪಿಸಬೇಕು !