ಜೈಪುರ (ರಾಜಸ್ಥಾನ) – ರಂಜಾನ ಈದ್ ದಿನದಂದು ಇಲ್ಲಿಯ ಒಂದು ರಸ್ತೆಯನ್ನು ಮುಸಲ್ಮಾನರು ಬಂದ್ ಮಾಡಿ ನಮಾಜ ಮಾಡುತ್ತಿರುವುದು ಮತ್ತು ಅದರಿಂದ ಸುಮಾರು ೫ ಕಿಲೋಮೀಟರ ವರೆಗೆ ಸಂಚಾರ ಸ್ಥಗಿತಗೊಂಡಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಭಾಜಪ ಟೀಕಿಸುತ್ತಾ ‘ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗಿದೆ’, ಎಂದು ಹೇಳಿದ್ದಾರೆ. ಎಲ್ಲಿ ನಮಾಜ ನಡೆಯಿತೋ ಅಲ್ಲಿ ಈದ್ಗಾದ ಸ್ಥಳ ಇದೆ. ಅಲ್ಲಿ ನಮಾಜ ಮಾಡಲು ಸ್ಥಳ ಸಿಗದೇ ಇರುವುದರಿಂದ ಮುಸಲ್ಮಾನರು ರಸ್ತೆಯಲ್ಲಿ ನಾಮಾಜ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಪೊಲೀಸ ಮತ್ತು ಸರಕಾರಿ ಅಧಿಕಾರಿ ಉಪಸ್ಥಿತರಿದ್ದರು. ಆದರೂ ಕೂಡ ಅವರು ರಸ್ತೆಯಲ್ಲಿ ನಮಾಜ ಮಾಡುವುದನ್ನು ತಡೆಯಲಿಲ್ಲ. ಭಾಜಪದ ಶಾಸಕರಾದ ಕಿರೋಡಿ ಲಾಲ ಮೀನಾ ಇವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಓಲೈಕೆಯ ಪರಾಕಾಷ್ಠೆ ತಲುಪಿದೆ ಎಂದು ಹೇಳಿದರು.
ಸಂಪಾದಕರ ನಿಲುವುಕಾಂಗ್ರೆಸ್ಸಿನ ರಾಜ್ಯದಲ್ಲಿ ಜನರಿಗೆ ಕಿರುಕುಳ ನೀಡುವ ಮುಸಲ್ಮಾನ ಮತ್ತು ಅದನ್ನು ನೋಡಿಕೊಂಡು ಸ್ಮಶಾನಮೌನ ತಾಳುವ ಪೊಲೀಸರು ಮತ್ತು ಸರಕಾರ ! ಇದರ ಬಗ್ಗೆ ಯಾವುದೇ ಕಪಟಿ ಜಾತ್ಯತೀತರು ಮತ್ತು ಕಾನೂನು ಪ್ರೇಮಿ ರಾಜಕೀಯ ಪಕ್ಷ ಬಾಯಿ ಬಿಡುವುದಿಲ್ಲ ! |