ಹಾಥರಸ (ಉತ್ತರ ಪ್ರದೇಶ) ಇಲ್ಲಿನ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಬಲವಂತವಾಗಿ ನಮಾಜ್ ಪಠಣ !

ಪೋಷಕರು ಮತ್ತು ಹಿಂದೂ ಸಂಘಟನೆಗಳ ವಿರೋಧದ ನಂತರ ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರ ಅಮಾನತು

ಹಾಥರಸ (ಉತ್ತರ ಪ್ರದೇಶ) – ಏಪ್ರಿಲ್ ೧೮ ರಂದು ಇಲ್ಲಿನ ‘ಬಿ.ಎಲ್.ಎಸ್.’ ಇಂಟರ್ ನ್ಯಾಶನಲ್ ಸ್ಕೂಲ್”ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ನಮಾಜ್ ಮಾಡಲು ಒತ್ತಾಯಿಸಿದ ನಂತರ ಪೋಷಕರು ಆಕ್ರೋಶಗೊಂಡಿದ್ದರು. ಇದಕ್ಕೆ ಪ್ರತ್ಯುತ್ತರವೆಂದು ಹಿಂದೂ ಸಂಘಟನೆಗಳು ಶಾಲೆಯ ಪ್ರವೇಶ ದ್ವಾರದ ಹೊರಗೆ ಹನುಮಾನ್ ಚಾಲೀಸಾ ಪಠಿಸಿದರು. ಅವರ ಪ್ರತಿಭಟನೆಯ ನಂತರ, ಶಾಲಾ ಆಡಳಿತ ಮಂಡಳಿಯು ಪ್ರಾಂಶುಪಾಲರಾದ ಸೋನಿಯಾ ಮತ್ತು ಶಿಕ್ಷಕರಾದ ಇರ್ಫಾನ್ ಇಲಾಹಿ ಮತ್ತು ಕಂಬರ್ ರಿಜ್ವಾನ್ ಅವರನ್ನು ಅಮಾನತುಗೊಳಿಸಿದೆ.

ಮಕ್ಕಳ ಮಣಿಕಟ್ಟಿನ ಕೆಂಪು ದಾರವನ್ನೂ ತೆಗೆಯಲು ಅನಿವಾರ್ಯ ಪಡಿಸಲಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳು ತಿಲಕ ಹಚ್ಚುವುದನ್ನು ಹಾಗೂ ವಿದ್ಯಾರ್ಥಿನಿಯರು ಮದರಂಗಿ ತೆಗೆಯುವುದನ್ನು ಈಗಾಗಲೇ ನಿಷೇಧಿಸಲಾಗಿತ್ತು. ಪೋಷಕರು ಮತ್ತು ಹಿಂದೂ ಸಂಘಟನೆಗಳು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು. ಈ ಕುರಿತು ಜಿಲ್ಲಾಧಿಕಾರಿ ತನಿಖಾ ಸಮಿತಿ ರಚಿಸಿದ್ದು, ೫ ದಿನಗಳಲ್ಲಿ ವರದಿ ನೀಡಲಿದ್ದಾರೆ.

ಸಂಪಾದಕೀಯ ನಿಲುವು

ಮುಸ್ಲಿಂ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಹಿಂದೂಗಳ ಪ್ರಾರ್ಥನೆ, ಶ್ಲೋಕ, ಮಂತ್ರಗಳನ್ನು ಪಠಿಸಲು ಕೇಳಿದರೆ, ಜಾತ್ಯತೀತವಾದಿ, ಪ್ರಗತಿ(ಅಧೋಗತಿ)ಪರರು ಆಕಾಶ ಪಾತಾಳ ಒಂದು ಮಾಡುತಿದ್ದರು; ಆದರೆ ಈಗ ಅವರು ಶಾಂತವಾಗಿದ್ದಾರೆ, ಅದನ್ನು ಗಮನಿಸಿ !