ನವಿ ಮುಂಬಯಿ – ಖಾರಘರದಲ್ಲಿ ಹಿರಿಯ ನಿರೂಪಣಕಾರರಾದ ಪೂ. ಡಾ. ಅಪ್ಪಾಸಾಹೇಬ ಧರ್ಮಾಧಿಕಾರಿ ಇವರಿಗೆ ಇತ್ತೀಚಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಲಾಯಿತು. ನಡು ಮಧ್ಯಾಹ್ನ ನಡೆದಿರುವ ಈ ಕಾರ್ಯಕ್ರಮದಲ್ಲಿ ಉಷ್ಮಘಾತದಿಂದ ೧೪ ಶ್ರೀ ಸೇವಕರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಷ್ಠ ನಿರೂಪಣಕಾರರಾದ ಪೂ. ಡಾ. ಅಪ್ಪಾಸಾಹೇಬ ಧರ್ಮಾಧಿಕಾರಿ ಇವರ ವಿರುದ್ಧ ನರಮೇಧ ಅಪರಾಧದ ತಪ್ಪಿತಸ್ಥ ಎಂದು ದಾಖಲಿಸಲು ಕೆಲವು ಬ್ರಿಗೇಡಿ ಮತ್ತು ತಥಾಕಥಿತ ಇತಿಹಾಸ ಸಂಶೋಧಕರು ಒತ್ತಾಯಿಸಿದ್ದಾರೆ. ಇಂತಹ ಬೇಡಿಕೆ ಸಲ್ಲಿಸುವವರು ಕಾಂಗ್ರೆಸ್ಸಿನ ಮುಖಂಡ ರಾಹುಲ್ ಗಾಂಧಿ ಇವರ ‘ಭಾರತ ಜೋಡೋ’ ಯಾತ್ರೆಯಲ್ಲಿ ಪಂಜಾಬದಲ್ಲಿನ ಕಾಂಗ್ರೆಸ್ಸಿನ ಶಾಸಕ ಸಂತೋಷ ಸಿಂಹ ಚೌದರಿ, ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ ಸೇವಾ ದಳದ ಮಹಾಸಚಿವ ಕೃಷ್ಣಕಾಂತ ಪಾಂಡೆ ಸಹಿತ ಅನೇಕರು ಸಾವನ್ನಪ್ಪಿದ್ದರು, ಆಗ ರಾಹುಲ ಗಾಂಧಿಯವರ ಮೇಲೆ ನರಮೇಧ ಅಪರಾಧದ ತಪ್ಪಿತಸ್ಥ ಎಂದು ದೂರು ದಾಖಲಿಸಬೇಕೆಂದು ಏಕೆ ಒತ್ತಾಯಿಸಲಿಲ್ಲ ? ಎಂದು ಹಿಂದೂ ಜನಜಾಗೃತಿ ಸಮಿತಿಯು ಪ್ರಶ್ನೆ ಉಪಸ್ಥಿತಗೊಳಿಸಿದೆ. ಈ ಬೇಡಿಕೆ ಕೇವಲ ಜನಾಂಹೀಯ ದ್ವೇಷದಿಂದ ಸಲ್ಲಿಸಲಾಗಿದೆ. ಆದ್ದರಿಂದ ಸಮಿತಿಯು ಇದನ್ನು ಕಠೋರ ಶಬ್ದದಲ್ಲಿ ಖಂಡಿಸುತ್ತದೆ ಎಂದು ಕೂಡ ಹೇಳಿದೆ.
ಸಮಿತಿಯು, ಪ್ರತಿಯೊಂದು ಘಟನೆಯ ಕಡೆಗೆ ಜನಾಂಗೀಯ ದ್ವೇಷ ಮತ್ತು ರಾಜಕೀಯ ಲಾಭ ಇದರ ಮೂಲಕ ನೋಡುವವರ ಈ ಸಂಘಟನೆಯ ಇತಿಹಾಸವು ವಿವಾದದಿಂದ ಕೂಡಿದೆ. ಠಾಣೆದಲ್ಲಿ ಇತ್ತೀಚಿಗೆ ಒಂದು ಪಕ್ಷದ ಆಂದೋಲನದ ಸಮಯದಲ್ಲಿ ಒಬ್ಬ ಮಹಿಳಾ ಕಾರ್ಯಕರ್ತೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೆ ಅನೇಕ ರಾಜಕೀಯ ಪಕ್ಷದ ಆಂದೋಲನದಲ್ಲಿ ಅಥವಾ ಕಾರ್ಯಕ್ರಮದ ಸಮಯದಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತವೆ. ಆ ಸಮಯದಲ್ಲಿ ಇಂತಹ ಬೇಡಿಕೆ ಯಾರೂ ಮಾಡುವುದಿಲ್ಲ. ಆದರೆ ದೊಡ್ಡ ಮಟ್ಟದಲ್ಲಿ ಸೇವಾಕಾರ್ಯ ಮಾಡುವ ಆಧ್ಯಾತ್ಮಿಕ ಸಂಸ್ಥೆಯನ್ನು ಗುರಿ ಮಾಡುವುದಕ್ಕಾಗಿ ಅದರ ಪ್ರಮುಖರ ವಿರುದ್ಧ ದೂರು ದಾಖಲಿಸಲು ಆಗ್ರಹಿಸುವುದು, ಇದು ಜನಾಂಗೀಯ ದ್ವೇಷವಾಗಿದೆ.
ಖಾರಘರದಲ್ಲಿ ನಡೆದಿರುವ ಪ್ರಕರಣದಲ್ಲಿ ಸ್ವತಃ ಹಿರಿಯ ನಿರೂಪಣಕಾರಾದ ಪೂ. ಧರ್ಮಾಧಿಕಾರಿ ಇವರು ದುಃಖ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ರಾಜ್ಯ ಸರಕಾರವು ಈ ರೀತಿಯ ಘಟನೆ ಮತ್ತೆ ನಡೆಯಬಾರದು, ಇದಕ್ಕಾಗಿ ವಿವಿಧ ಉಪಾಯ ಯೋಜನೆ ಮಾಡಲು ಪ್ರಾರಂಭಿಸಿದರು. ಆಡಳಿತ ಈ ಪ್ರಕರಣದ ವಿಚಾರಣೆಗಾಗಿ ಸಮಿತಿ ಕೂಡ ರಚಿಸಿದೆ. ಆದ್ದರಿಂದ ಆರೋಪ ಪ್ರತ್ಯಾರೋಪ ಮಾಡುವ ಬದಲು ಸಕಾರಾತ್ಮಕ ರೀತಿಯಿಂದ ಹೇಗೆ ಸಹಾಯ ಮಾಡಬಹುದು ? ಇದಕ್ಕಾಗಿ ನೇತೃತ್ವ ವಹಿಸುವ ಅವಶ್ಯಕತೆ ಇದೆ, ಎಂದು ಕೂಡ ಸಮಿತಿ ಹೇಳಿದೆ.
ಸಂಪಾದಕೀಯ ನಿಲುವುಹಾಗಾದರೆ ರಾಹುಲ ಗಾಂಧಿ ವಿರುದ್ಧ ದೂರು ದಾಖಲಿಸಲು ಯಾರಾದರೂ ಒತ್ತಾಯಿಸಿದ್ದಾರೆಯೇ ? – ಹಿಂದೂ ಜನಜಾಗೃತಿ ಸಮಿತಿಯ ಜನಾಂಗೀಯ ದ್ವೇಷಿಗಳಿಗೆ ಪ್ರಶ್ನೆ |