ಭಾಗ್ಯನಗರ (ತೆಲಂಗಾಣ) – ಇಲ್ಲಿನ ಅಂಬರಪೇಟ್‌ದ ಗೋಲಂಕಾ ಬಳಿಯ ಮೂಸಿ ನದಿಯ ದಡದಲ್ಲಿ ಅಕ್ರಮ ತಾತ್ಕಾಲಿಕ ಮಸೀದಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಕಬ್ಬಿಣದ ಕ್ಯಾಬಿನ್ ತಂದು ಅದಕ್ಕೆ ಮಸೀದಿಯ ರೂಪವನ್ನು ನೀಡಲಾಗಿತ್ತು. ಅಲ್ಲಿ ನಮಾಜ ಮಾಡಲು ಆರಂಭಿಸಿದ್ದರು. ೩ ದಿನಗಳ ನಂತರ ಈ ಬಗ್ಗೆ ಬಜರಂಗ ಸೇನೆಯವರಿಗೆ ಮಾಹಿತಿ ಸಿಕ್ಕ ನಂತರ ಅವರು ಇತರೆ ಹಿಂದೂ ಸಂಘಟನೆಗಳಿಗೆ ಇದರ ಮಾಹಿತಿ ನೀಡಿದರು. ತದನಂತರ ಎಲ್ಲ ಸಂಘಟನೆಗಳು ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು, ವಿಭಾಗೀಯ ಆಯುಕ್ತರು ಮೊದಲಾದವರಿಗೆ ಈ ಕುರಿತು ಮನವಿ ನೀಡಿ ಮಸೀದಿಯನ್ನು ತೆರುವುಗೊಳಸಲು ಒತ್ತಾಯಿಸಿದರು. ಇದಾದ ಬಳಿಕ ಆಡಳಿತವು ಕಾಯರ್ಯಾಚರಣೆ ನಡೆಸಿ ಮಸೀದಿಯನ್ನು ಇಲ್ಲಿಂದ ತೆಗೆದು ಹಾಕಿದರು.
ಹಿಂದು ಸಂಘಟನೆಗಳು ಆಡಳಿತಾಧಿಕಾರಿಗಳಿಗೆ ಮನವಿ
ತಾತ್ಕಾಲಿಕ ಮಸೀದಿ ಇದ್ದ ಜಾಗವನ್ನು ನೀರಾವರಿಗೆ ಬಳಸಿಕೊಳ್ಳಲು ನ್ಯಾಯಾಲಯವು ಆದೇಶ ನೀಡಿದೆ. ಬೇರೆ ಯಾವುದೇ ಕಾಮಗಾರಿಯಲ್ಲಿ ನಿಷೇಧಿಸಲಾಗಿದೆ. ಆದರೂ ಅಲ್ಲಿ ಈ ಪ್ರಕಾರ ಅಕ್ರಮ ಮಸೀದಿಯನ್ನು ನಿರ್ಮಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಬಜರಂಗ ಸೇನೆ, ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಸಂಘಟನೆ ಏಕತಾ ಮಂಚ್, ಹಿಂದೂ ವಾಹಿನಿ, ಜೈ ಶ್ರೀರಾಮ ಸೇನೆ, ರಾಷ್ಟ್ರೀಯ ಶಿವಜಿ ಸೇನೆ ಮತ್ತು ಹಿಂದೂ ಜಾಕ್ ಸಂಘಟನೆಗಳು ಒಗ್ಗೂಡಿ ವಿರೋಧ ವ್ಯಕ್ತಪಡಿಸಿದ್ದರಿಂದ ಆಡಳಿತದವರಿಗೆ ಕ್ರಮ ಕೈಗೊಳ್ಳಬೇಕಾಯಿತು.
ಸಂಪಾದಕರ ನಿಲುವು
|