ಕ್ರೈಸ್ತ ಧರ್ಮ ಸ್ವೀಕರಿಸಿರುವ ದಲಿತರಿಗೆ ಮೀಸಲಾತಿಯ ಲಾಭ ಸಿಗಬೇಕು ! – ತಮಿಳುನಾಡು ವಿಧಾನಸಭೆಯಲ್ಲಿ ಅನುಮೋದನೆ

ಚೆನ್ನೈ – ಕ್ರೈಸ್ತ ಧರ್ಮವನ್ನು ಸ್ವೀಕರಿಸಿರುವ ದಲಿತರಿಗೂ ಹಿಂದುಳಿದ ವರ್ಗದ ಮೀಸಲಾತಿ ದೊರೆಯಬೇಕೆಂಬ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ನಿರ್ಣಯದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟ್ಯಾಲಿನ್ ಇವರು ಕೇಂದ್ರದಲ್ಲಿರುವ ಮೋದಿ ಸರಕಾರಕ್ಕೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಿರುವ ಆದಿ ದ್ರವಿಡರಿಗೆ ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ. ಮತಾಂತರಗೊಂಡಿರುವುದರಿಂದ ದ್ರವಿಡರ ವಿಶೇಷಾಧಿಕಾರ ಮುಗಿಯುವದಿಲ್ಲ ಎಂದು ಈ ನಿರ್ಣಯದಲ್ಲಿ ಹೇಳಲಾಗಿದೆ. ೨೦೧೫ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಒಂದು ತೀರ್ಪಿನಲ್ಲಿ `ಓರ್ವ ವ್ಯಕ್ತಿಯು ಹಿಂದೂ ಧರ್ಮವನ್ನು ತ್ಯಜಿಸಿ ಕ್ರೈಸ್ತ ಧರ್ಮ ಸ್ವೀಕರಿಸಿದಾಗ ಆತನಿಗೆ ಹಿಂದೂ ಧರ್ಮದಿಂದ ದೊರೆಯುವ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯಗಳು ಸಿಗುವುದಿಲ್ಲ’ ಎಂದು ಹೇಳಿದೆ.

ಮುಖ್ಯಮಂತ್ರಿ ಸ್ಟಾಲಿನ್ ರವರು ಮುಂದುವರಿದು,

೧. ಸಂವಿಧಾನದ (ಅನುಸೂಚಿತ ಜಾತಿ) ಆದೇಶ ೧೯೫೦ರ ಅನುಸಾರ ಕೇವಲ ಹಿಂದೂಗಳನ್ನು ಹಿಂದೂಳಿದವರು ಎಂದು ವರ್ಗಿಕರಿಸಲು ಸಾಧ್ಯವಿದೆ. ಆದರೂ ೧೯೫೬ ರಲ್ಲಿ ಶಿಕ್ಖರ ಮತ್ತು ೧೯೯೦ರಲ್ಲಿ ಬೌದ್ಧರನ್ನು ಸೇರಿಸಲು ಅದರಲ್ಲಿ ತಿದ್ದುಪಡಿ ಮಾಡಲಾಯಿತು.

೨. ಕ್ರೈಸ್ತ ಧರ್ಮ ಸ್ವೀಕರಿಸಿರುವ ಆದಿ ದ್ರಾವಿಡರಿಗೂ ಈ ಲಾಭ ದೊರೆಯಲು, ಇದೆ ರೀತಿಯಲ್ಲಿ ಸಂವಿಧಾನದ ತಿದ್ದುಪಡಿ ಮಾಡುವುದು ಅಪೇಕ್ಷಿತವಿದೆ. (ಮತಾಂತರವನ್ನು ಪ್ರೋತ್ಸಾಹಿಸುವುದು ಸಂವಿಧಾನದ ಅನುಸಾರ ಅಪರಾಧವಾಗಿದೆ. ಆದುದರಿಂದ ಇಂತಹ ಬೇಡಿಕೆ ಸಲ್ಲಿಸುವವರ ವಿರುದ್ಧ ಮತಾಂತರಕ್ಕೆ ಪ್ರೋತ್ಸಾಹ ನೀಡಿರುವ ಕಾರಣದಿಂದ ಮೊಕದ್ದಮೆ ದಾಖಲಿಸುವುದೆ ಯೋಗ್ಯವಾಗಿದೆ ! – ಸಂಪಾದಕರು)

೩. ಮತಾಂತರವಾಗುವವರು ಹಿಂದುಳಿದ ಜಾತಿ ಮತ್ತು ಪಂಗಡದವರಾಗಿದ್ದು ಅವರಿಗೆ ಹಿಂದುಳಿದ ಜಾತಿಯ ಸ್ಥಾನ ನೀಡುವುದು ಯೋಗ್ಯವಾಗಿದೆ. ಇದರಿಂದ ಅವರಿಗೆ ಶಿಕ್ಷಣ, ಉದ್ಯೋಗ ಮುಂತಾದ ಕಡೆಗಳಲ್ಲಿ ಸಾಮಾಜಿಕ ನ್ಯಾಯದ ಲಾಭ ಪಡೆಯಲು ಸಹಾಯವಾಗುತ್ತದೆ. ಬೇರೆ ಧರ್ಮಕ್ಕೆ ಮತಾಂತರ ಮಾಡಿದ್ದರಿಂದ ಅವರ ಅಧಿಕಾರವನ್ನು ನಿರಾಕರಿಸಲಾಗುವುದಿಲ್ಲ.’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ದ್ರಮುಕ ಸರಕಾರವು ಒಂದು ರೀತಿಯಲ್ಲಿ ಇಂತಹ ನಿರ್ಣಯವನ್ನು ಅಂಗೀಕರಿಸಿ ಮತಾಂತರವನ್ನು ಪ್ರೋತ್ಸಾಹಿಸಿದೆ. ಇದರಿಂದಾಗಿ ಕ್ರೈಸ್ತ ಧರ್ಮ ಪ್ರಚಾರಕರು ಹೆಚ್ಚಿನ ಸಂಖ್ಯೆಯಲ್ಲಿ ದಲಿತರ ಮತಾಂತರ ಮಾಡುವರು. ಹಿಂದೂ ಧರ್ಮದ ಮೂಲವನ್ನು ನಾಶ ಮಾಡಲು ಹೊರಟಿರುವ ದ್ರಮುಕ ಸರಕಾರವನ್ನು ಕಿತ್ತೆಸೆಯಲು ಈಗ ಅಲ್ಲಿನ ಹಿಂದೂಗಳೇ ಪ್ರಯತ್ನಿಸುವುದು ಅವಶ್ಯಕವಾಗಿದೆ !