ಬೆಚ್ಚಿಬಿದ್ದ ರಾಜಧಾನಿ ದೆಹಲಿ
ನವ ದೆಹಲಿ: ದೇಶದ ರಾಜಧಾನಿ ನವದೆಹಲಿಯ ನ್ಯಾಯಾಲಯದಲ್ಲಿ ಇಂದು ಮಹಿಳೆಯೊಬ್ಬಳ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಘಟನೆ ನವದೆಹಲಿಯ ಸಾಕೇತ್ ಕೋರ್ಟ್ ಪ್ರದೇಶದಲ್ಲಿ ನಡೆದಿದೆ. ನವದೆಹಲಿಯ ಸಾಕೇತ್ ಕೋರ್ಟ್ ಪ್ರದೇಶದಲ್ಲಿ ದಾಳಿಕೋರ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ. ಇದರಲ್ಲಿ ಮಹಿಳೆಗೆ ಮೂರು ಗುಂಡು ತಗುಲಿದೆ. ಮಹಿಳೆಯ ಹೊಟ್ಟೆಗೆ ಎರಡು ಗುಂಡುಗಳು ಮತ್ತು ಆಕೆಯ ಕೈಗೆ ಒಂದು ಗುಂಡು ತಗುಲಿದೆ. ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ, ಎಂದು ಎಎನ್ಐ. ವರದಿ ಮಾಡಿದೆ.
(ಸೌಜನ್ಯ : Oneindia Kannada)
ದಾಳಿಕೋರರು ವಕೀಲರ ವೇಷ ಧರಿಸಿ ಬಂದಿದ್ದರು
ಆರೋಪಿಗಳು ವಕೀಲರ ಉಡುಪಿನಲ್ಲಿ ಕೋರ್ಟ್ ಪ್ರವೇಶಿಸಿದ್ದರು. ಆರೋಪಿ ಮಹಿಳೆಯ ಮೇಲೆ ಗುಂಡು ಹಾರಿಸಿದ ಬಳಿಕ ಆತ ಪರಾರಿಯಾಗಿದ್ದ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೆಹಲಿ ಪೊಲೀಸ್ನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Politics erupts over Saket court firing; AAP says Delhi law & order in shambles. @tweets_amit with more details. #ITVideo | @snehamordani pic.twitter.com/bY1EhIEwCP
— IndiaToday (@IndiaToday) April 21, 2023