ನೀವು ಜವಾನನಾಗಲೂ ಅರ್ಹರಲ್ಲ ! – ಉಚ್ಚ ನ್ಯಾಯಾಲಯದ ನ್ಯಾಯಾಧಿಶರಿಂದ ಉಪನಿರ್ದೇಶಕರಿಗೆ ಛೀಮಾರಿ

ಉಚ್ಚ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿದ ಪ್ರಕರಣ !

ನ್ಯಾಯಮೂರ್ತಿ ರೋಹಿತ್ ಆರ್ಯ

ಗ್ವಾಲಿಯರ್ (ಮಧ್ಯಪ್ರದೇಶ) – ಮಧ್ಯಪ್ರದೇಶ ಉಚ್ಚನ್ಯಾಯಾಲಯದ ಗ್ವಾಲಿಯರ್ ನ್ಯಾಯಪೀಠದ ನ್ಯಾಯಮೂರ್ತಿ ರೋಹಿತ್ ಆರ್ಯ ಅವರು ಗಣಿ ಇಲಾಖೆಯ ಉಪ ನಿರ್ದೇಶಕರ ಕಿವಿ ಹಿಂಡಿದರು. ಅಕ್ರಮ ಮರಳುಗಾರಿಕೆ ಪ್ರಕರಣದ ವಿಚಾರಣೆ ವೇಳೆ ಉಪನಿರ್ದೇಶಕರಿಗೆ ನ್ಯಾಯಾಧೀಶರು, ‘ನೀವು ಸೈನಿಕನಾಗಲೂ ಯೋಗ್ಯರಲ್ಲ. ನಿಮ್ಮನ್ನು ಅಧಿಕಾರಿಯನ್ನಾಗಿ ಯಾರು ಮಾಡಿದ್ದು ?’, ಇಂದು ಕಿವಿ ಹಿಂಡಿದರು. ಭಿಂಡ್ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳುಗಾರಿಕೆ ಪ್ರಕರಣದಲ್ಲಿ ಉಚ್ಚನ್ಯಾಲಯವು ಹಲವು ವರ್ಷಗಳ ಹಿಂದೆಯೇ ಆದೇಶ ನೀಡಿದೆ. ಮರಳು ಸಾಗಣೆಗೆ ಸಂಬಂಧಿಸಿದಂತೆ ಕಳೆದ ವರ್ಷವೇ ಜಿಲ್ಲಾಧಿಕಾರಿ ಇಂತಹ ಆದೇಶ ಹೊರಡಿಸಿದ್ದರು. ಹೀಗಿದ್ದರೂ ಮರಳು ಸಾಗಣೆ ಕುರಿತು ಗಣಿ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ. ಈ ವಿಚಾರವಾಗಿ ನ್ಯಾಯಾಧೀಶರು ಉಪ ನಿರ್ದೇಶಕರಿಗೆ ಛೀಮಾರಿ ಹಾಕಿದರು.

ಹಲವು ಬಾರಿ ಆದೇಶ ನೀಡಿದರೂ ಗಣಿ ಇಲಾಖೆಯು ಸಾರಿಗೆ ಪಾಸ್ ನೀಡಿಲ್ಲ ಏಕೆ ?’ ಎಂದು ಉಪನಿರ್ದೇಶಕರನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಅವರು ಯಾವುದೇ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ. ಇದನ್ನು ನೋಡಿದ ನ್ಯಾಯಾಧೀಶರು ಆಕ್ರೋಶಗೊಂಡರು. ಮರಳು ಮಾಫಿಯಾದೊಂದಿಗೆ ಸರಕಾರಿ ಇಲಾಖೆಗಳು ಶಾಮೀಲಾಗಿವೆ ಎಂದು ಆರೋಪಿಸುತ್ತಾ, “ನಿಮ್ಮಂತಹ ಅಧಿಕಾರಿಗಳು ಲಂಚ ಪಡೆಯದೇ ಯಾವುದೇ ಕೆಲಸ ಮಾಡುವುಲ್ಲ. ಈ ಕಾರಣಕ್ಕೆ ಈ ಪ್ರಕರಣದಲ್ಲಿ ಪಾಸ್ ನೀಡಿಲ್ಲ.” ನ್ಯಾಯಾಧೀಶರು ಈಷ್ಟಕ್ಕೆ ನಿಲ್ಲದೇ, ‘ನಿಮ್ಮಿಂದ ಪಾಸ ಕೊಡಲು ಸಾಧ್ಯವಾಗದಿದ್ದರೆ ನಿಮ್ಮ ಉತ್ತರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಎಂದು ಅವರು ಉಪನಿರ್ದೇಶಕರಿಗೆ ತಿಳಿಸಿದರು. ಅಧಿಕಾರಿಗೆ ಸಲಹೆ ನೀಡಿದ ಅವರು, ನಿಮ್ಮ ಅಭ್ಯಾಸವನ್ನು ಬದಲಿಸಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಕೆಲಸವನ್ನು ಅಮಾನತುಗೊಳಿಸುವುದರ ಜೊತೆಗೆ ನಿಮ್ಮ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವ ಕಾನೂನುದ್ರೋಹಿ ಅಧಿಕಾರಿಗಳಿಗೆ ಕೇಲವ ಛೀಮಾರಿ ಹಾಕದೇ ಶಿಕ್ಷೆಗೆ ಒಳಗಾಗಿಸಬೇಕೆಂದು ಸಾಮಾನ್ಯ ಜನರು ನಿರೀಕ್ಷಿಸುತ್ತಾರೆ !