ಅತಿಕ ಅಹಮದ್ ನ ಗೋರಿಯ ಮೇಲೆ ರಾಷ್ಟ್ರಧ್ವಜ ಹೊದಿಸಿದ !

  • ಕಾಂಗ್ರೆಸ್ಸಿನ ನಾಯಕ ರಾಜಕುಮಾರ ಸಿಂಹ ಇವನ ಆಕ್ರೋಶಕಾರಿ ಕೃತ್ಯ !

  • ಕಾಂಗ್ರೆಸ್ ನಿಂದ ೬ ವರ್ಷಕ್ಕಾಗಿ ಅಮಾನತು !

ಕಾಂಗ್ರೆಸ್ಸಿನ ನಾಯಕ ರಾಜಕುಮಾರ ಸಿಂಹ

ಪ್ರಯಾಗರಾಜ (ಉತ್ತರಪ್ರದೇಶ) – ಕುಖ್ಯಾತ ಗೂಂಡ ಅತಿಕ ಅಹಮದ ಮತ್ತು ಅವನ ಸಹೋದರ ಅಶ್ರಫ ಇವರು ಪೊಲೀಸರ ವಶದಲ್ಲಿರುವಾಗ ಗುಂಡು ಹಾರಿಸಿ ಹತ್ಯೆ ಆದ ನಂತರ ಇಬ್ಬರನ್ನು ಪ್ರಯಾಗರಾಜದಲ್ಲಿ ಹೂಳಲಾಯಿತು. ಕಾಂಗ್ರೆಸ್ಸಿನ ಸ್ಥಳೀಯ ಮುಖಂಡ ರಾಜಕುಮಾರ ಸಿಂಹ ಅಲಿಯಾಸ್ ರಜ್ಜು ಇವನು ಅವರ ಗೋರಿಯ ಮೇಲೆ ಭಾರತದ ರಾಷ್ಟ್ರಧ್ವಜ ಹೊದಿಸಿದ್ದಾನೆ. ಇದರ ಜೊತೆಗೆ ‘ಅತಿಕ ಅಹಮದ ಅಮರ ರಹೇ’ ದ ಘೋಷಣೆ ನೀಡಿದ. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರ ಬಗ್ಗೆ ಕಾಂಗ್ರೆಸ್ ನಿಂದ ಸ್ಪಷ್ಟೀಕರಣ ನೀಡುತ್ತಾ ಈ ಘಟನೆಯ ಜೊತೆ ಪಕ್ಷದ ಯಾವುದೇ ಸಂಬಂಧ ಇಲ್ಲ’, ಎಂದಿದೆ. ರಜ್ಜು ಇಲ್ಲಿ ಮಹಾನಗರ ಪಾಲಿಕೆಯ ವಿಭಾಗ ಕ್ರಮಾಂಕ ೪೩ ರಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಆಗಿದ್ದನು ಈ ಘಟನೆಯ ನಂತರ ಕಾಂಗ್ರೆಸ್ ನ

ಆತನನ್ನು ಪಕ್ಷದಿಂದ ೬ ವರ್ಷಕ್ಕಾಗಿ ಅಮಾನತುಗೊಳಿಸಿದೆ. ವಿಡಿಯೋ ಪ್ರಸಾರವಾದ ನಂತರ ಪ್ರಯಾಗರಾಜ ಪೊಲೀಸರು ರಾಜಕುಮಾರ ಸಿಂಹ ಇವನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಮಾಡಲಾಗುತ್ತಿದೆ.

(ಸೌಜನ್ಯ : Oneindia News)

೧. ರಜ್ಜು ಇವನು ಗೋರಿಯ ಸ್ಥಳದಲ್ಲಿ ಕುರಾನಿನ ವಾಕ್ಯಗಳನ್ನು ಹೇಳಿ, ಹಾಗೂ ಅತಿಕ ಅಹಮದನಿಗೆ ‘ ಭಾರತ ರತ್ನ ‘ ನೀಡಲು ಮತ್ತು ಹುತಾತ್ಮರ ಸ್ಥಾನ ನೀಡಲು ಒತ್ತಾಯಿದ್ದಾನೆ. ಅತಿಕ ಮತ್ತು ಅಶ್ರಫ್ ಇವರ ಗೋರಿಯ ನಂತರ ರಜ್ಜು ಇವನು ಅತಿಕನ ಮಗ ಆಸದ ಇವನ ಗೋರಿಯ ಮೇಲೆ ಕೂಡ ರಾಷ್ಟ್ರಧ್ವಜ ಹೊದಿಸಿದನು.

೨. ಈ ಘಟನೆಯ ನಂತರ ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುವಾಗ ರಜ್ಜು ಇವನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರೆ ಆತಿಕ ಅಹಮದ್ ಇವನ ಹತ್ಯೆ ಮಾಡಿದ್ದಾನೆಂದು ಆರೋಪ ಮಾಡುತ್ತಾ ಅವರ ರಾಜೀನಾಮೆಗೆ ಆಗ್ರಹಿಸಿದ್ದಾನೆ.

(ಮೇಲೆ ಪ್ರಕಟಿಸಲಾದ ಚಿತ್ರವನ್ನು ಯಾರ ರಾಷ್ಟ್ರೀಯ ಭಾವನೆಗಳಿಗೆ ನೋವನ್ನು ತರುವುದಕ್ಕಾಗಿ ಮಾಡಿರದೇ ನಿಜ ಸ್ಥಿತಿ ತಿಳಿಸಲು ಪ್ರಕಟಿಸಲಾಗಿದೆ – ಸಂಪಾದಕರು)

ಸಂಪಾದಕೀಯ ನಿಲುವು

ಇಂತಹವನ ಮೇಲೆ ದೇಶದ್ರೋಹದ ಅಪರಾಧ ದಾಖಲಿಸಿ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !