ಭಾರತೀಯ ಮಹಿಳೆಯಿಂದ `ಮ್ಯಾಂಚೆಸ್ಟರ ಮ್ಯಾರಥಾನ್’ ಸ್ಪರ್ಧೆಯಲ್ಲಿ ಸೀರೆ ಧರಿಸಿ 42.5 ಕಿ.ಮೀ ಓಟ !

ಲಂಡನ್ (ಬ್ರಿಟನ್) – ಬ್ರಿಟನ್ ನಲ್ಲಿ ವಾಸಿಸುವ ಭಾರತೀಯ ವಂಶದ ಓರ್ವ ಮಹಿಳೆ ಸಂಬಲಪುರಿ ಸೀರೆಯನ್ನು ಧರಿಸಿ `ಮ್ಯಾರಥಾನ್ ಸ್ಪರ್ಧೆಯಲ್ಲಿ ಓಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಧುಸ್ಮಿತಾ ಜೆನಾ ದಾಸ ಹೆಸರಿನ ಈ ಮಹಿಳೆಯು ಎಪ್ರಿಲ್ 16 ರಂದು ಮ್ಯಾಂಚೆಸ್ಟರನಲ್ಲಿ ನಡೆದ `ಮ್ಯಾಂಚೆಸ್ಟರ ಮ್ಯಾರೆಥಾನ್’ ಸ್ಪರ್ಧೆಯಲ್ಲಿ 42.5 ಕಿ.ಮಿ ದೂರವನ್ನು 4 ಗಂಟೆ 50 ನಿಮಿಷಗಳಲ್ಲಿ ಓಡಿ ಪೂರ್ಣಗೊಳಿಸಿದರು. ಈ ಸ್ಪರ್ಧೆಯು ಯುನೈಟೆಡ್ ಕಿಂಗ್ ಡಮ್ ನ ಎರಡನೇಯ ಅತಿ ದೊಡ್ಡ ಮ್ಯಾರಥಾನ್ ಸ್ಪರ್ಧೆಯಾಗಿದೆ.

(ಸೌಜನ್ಯ – Times Of India)

1. ಸೀರೆ ಧರಿಸಿದ್ದ 41 ವರ್ಷದ ಮಧುಸ್ಮಿತಾ ಇವರು ಸ್ಪರ್ಧೆಯಲ್ಲಿ ಓಡುತ್ತಿರುವ ವಿಡಿಯೋ ಅನ್ನು `ಫ್ರೆಂಡ್ಸ ಆಫ್ ಇಂಡಿಯಾ ಸೊಸಾಯಟಿ ಇಂಟರನ್ಯಾಶನಲ್ ಯು.ಕೆ’ ಈ ಸಂಘಟನೆಯು ಟ್ವೀಟ ಮಾಡಿದೆ.

2. ಮಧುಸ್ಮಿತಾ ವಿಶ್ವಾದ್ಯಂತ ಅನೇಕ `ಮ್ಯಾರೆಥಾನ್’ ಮತ್ತು `ಅಲ್ಟ್ರಾ ಮ್ಯಾರೆಥಾನ್’ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

3. ಮಧುಸ್ಮಿತಾರ ಈ ವಿಡಿಯೋ ನೋಡಿ ಒಬ್ಬ ವ್ಯಕ್ತಿಯು `ನಾವು ನಮ್ಮ ಸಂಸ್ಕೃತಿಯನ್ನು ಈ ರೀತಿ ಜಗತ್ತಿಗೆ ತೋರಿಸಬೇಕು. ಪಾಶ್ಚಿಮಾತ್ಯ ಉಡುಪು ಧರಿಸಲು ಇಚ್ಛಿಸುವವರು ದಯವಿಟ್ಟು ಮಧುಸ್ಮಿತಾರಿಂದ ಕಲಿಯಬೇಕು’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.