ಅಮೇರಿಕಾದಲ್ಲಿ ‘ರಹಸ್ಯ ಪೊಲೀಸ ಠಾಣೆ’ ನಿರ್ಮಿಸಿದ ಚೀನಿ ನಾಗರಿಕರ ಬಂಧನ

ನ್ಯೂಯಾರ್ಕ್ – ಮ್ಯಾನಹೆಂಟನ್ ಇಲ್ಲಿಯ ಚೈನಾಟೌನ್ ನಲ್ಲಿ ರಹಸ್ಯವಾಗಿ ‘ಚೀನಾ ಪೊಲೀಸ ಠಾಣೆ’ ನಿರ್ಮಿಸಿರುವ ೨ ಚೀನಾ ಮೂಲದ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ. ೬೧ ವರ್ಷದ ಲಿಯು ಜಿಯಾನವಾಂಗ ಮತ್ತು ೫೯ ವರ್ಷದ ಚೆನ ಜಿನಪಿಂಗ ಎಂದು ಬಂಧಿಸಿರುವ ವ್ಯಕ್ತಿಗಳ ಹೆಸರುಗಳಾಗಿವೆ. ಇವರಿಬ್ಬರೂ ‘ಚೈನಾಟೌನ್’ ನಲ್ಲಿ ಚೀನಾ ಪೋಲಿಸ್ ಠಾಣೆ ಆರಂಭಿಸಿ ಅದರ ಮೂಲಕ ಚೀನಾಗೆ ರಹಸ್ಯ ಮಾಹಿತಿ ಪೂರೈಸಿದರು. ಈ ಇಬ್ಬರು ಚೀನಾ ಸರಕಾರದ ಜೊತೆ ನೇರ ಸಂಪರ್ಕ ಹೊಂದಿದ್ದಾರೆ, ಎಂದು ಅಮೇರಿಕಾದ ಪೊಲೀಸರು ಹೇಳಿದರು. ಅಮೇರಿಕಾದಲ್ಲಿರುವ ಚೀನಾ ನಾಗರಿಕರಿಗೆ ಪ್ರಚೋದಿಸುವ ಕೆಲಸ ಮಾಡುವ ಜಿಯಾನವಾಂಗ ಮತ್ತು ಜಿನಪಿಂಗ ಇವರು ಬಂಧಿತರಲ್ಲಿ ಇದ್ದರೆ. ಈ ಇಬ್ಬರು ‘ತಮ್ಮ ವಿಚಾರಣೆ ನಡೆಯುವುದು’ ಇದು ತಿಳಿದ ತಕ್ಷಣ ಅವರು ಸಾಕ್ಷಿಗಳನ್ನು ನಾಶ ಮಾಡುವ ಪ್ರಯತ್ನ ಮಾಡಿದರು, ಎಂದು ಕೂಡ ಪೊಲೀಸ ಅಧಿಕಾರಿಗಳು ಮಾಹಿತಿ ನೀಡಿದರು.