ಮೊಕದ್ದಮೆ ಹೂಡಲು ಸಂಬಂಧಪಟ್ಟ ರಾಜ್ಯಗಳ ಉಚ್ಚ ನ್ಯಾಯಾಲಯಗಳಿಗೆ ಹೋಗಿ ! – ಸರ್ವೋಚ್ಚ ನ್ಯಾಯಾಲಯ

ರಾಮ ನವಮಿಯಂದು ದೇಶಾದ್ಯಂತ ಮುಸ್ಲಿಂ ಮತಾಂಧರಿಂದ ಹಿಂಸಾಚಾರದ ಪ್ರಕರಣ

ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ರಾಮನವಮಿಯ ದಿನದಂದು ಮುಸ್ಲಿಂ ಮತಾಂಧರು ನಡೆಸಿದ ಹಿಂಸಾಚಾರದ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ‘ಈ ನಿಟ್ಟಿನಲ್ಲಿ ಗುಜರಾತ್, ಬಂಗಾಲ, ಬಿಹಾರ, ಜಾರ್ಖಂಡ್, ಕರ್ನಾಟಕ ಮತ್ತು ತೆಲಂಗಾಣದ ಉಚ್ಚ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿ’ ಎಂದು ನ್ಯಾಯಾಲಯವು ಅರ್ಜಿದಾರರಾಗಿರುವ ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ನ ವಕ್ತಾರ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಇವರಿಗೆ ಆದೇಶಿಸಿದೆ.

ಅರ್ಜಿಯಿಂದ ಮತಾಂಧ ಮುಸ್ಲಿಮರ ವಿರುದ್ಧ ಗಂಭೀರ ಆರೋಪ !

ಜೈನ್ ಇವರು ಅರ್ಜಿಯಲ್ಲಿ, ಪ್ರತಿ ವರ್ಷ ಮತಾಂಧ ಮುಸ್ಲಿಮರು ಹಿಂದೂಗಳ ಮೆರವಣಿಗೆಯ ಮೇಲೆ ದಾಳಿ ಮಾಡುತ್ತಾರೆ. ಇದು ಹಿಂದೂಗಳ ರಾಮನವಮಿಯನ್ನು ಇಷ್ಟಪಡದ ಮುಸ್ಲಿಮರ ಗುಂಪಾಗಿದೆ. ಆದ್ದರಿಂದ ಅವರು ಯೋಜಿತ ರೀತಿಯಲ್ಲಿ ಹಿಂದೂಗಳ ಮೇರವಣಿಗೆಯ ಮೇಲೆ ದಾಳಿ ಮಾಡುತ್ತಾರೆ. ಹಿಂಸಾಚಾರ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ವರದಿ ನೀಡಬೇಕು ಎಂದು ಜೈನ್ ಇವರು ಅರ್ಜಿಯ ಮೂಲಕ ಆಗ್ರಹಿಸಿದ್ದರು. ಇದರೊಂದಿಗೆ ಹಿಂಸಾಚಾರದಿಂದ ಉಂಟಾದ ಜೀವಹಾನಿ ಅಥವಾ ಗಾಯಗಳ ಪ್ರಮಾಣವನ್ನು ಪರಿಶೀಲಿಸಲು ಸಂಬಂಧಪಟ್ಟ ರಾಜ್ಯ ಸರಕಾರಗಳಿಗೆ ನ್ಯಾಯಾಲಯ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

ಸಂಪಾದಕೀಯ ನಿಲುವು

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳ ಮೇಲೆ ಅಲ್ಪಸಂಖ್ಯಾತರು ಮಾಡುತ್ತಿರುವ ಹಿಂಸಾಚಾರದ ವಿರುದ್ಧ ಹಿಂದೂಗಳಿಗೇಕೆ ನ್ಯಾಯ ಕೇಳಬೇಕಾಗುತ್ತದೆ ? ಇದು ಎಲ್ಲಾ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ !