ಪ್ರಧಾನಿ ಮೋದಿಯನ್ನು ಹೊಗಳಿದ ಬ್ರಿಟನ್ ಸಂಸದ ಹಾಗೂ ಅರ್ಥಶಾಸ್ತ್ರಜ್ಞ ಸ್ಟರ್ನ್ !

ನಿಕೋಲಸ್ ಸ್ಟರ್ನ ಮತ್ತು ಪ್ರಧಾನಿ ಮೋದಿ

ನವ ದೆಹಲಿ – ಪ್ರಧಾನಿ ಮೋದಿ ಇವರು ಜಗತ್ತಿನೆದುರು ವಿಕಾಸದ ‘ಮಾಡೆಲ್’ ಪ್ರಸ್ತುತಪಡಿಸಿದ್ದಾರೆ. ಜಗತ್ತಿಗೆ ಅದರ ಬಹಳ ಅವಶ್ಯಕತೆ ಇದೆ. ವಿಕಾಸ ಮತ್ತು ವೃದ್ಧಿ ಇದಕ್ಕಾಗಿ ಒಂದು ಹೊಸ ಅಧ್ಯಾಯ ಭಾರತ ಜಗತ್ತಿನೆದುರು ಇಟ್ಟಿದೆ, ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅರ್ಥಶಾಸ್ತ್ರಜ್ಞ ಮತ್ತು ಬ್ರಿಟಿಷ್ ಸಂಸದ ಪ್ರಾ. ನಿಕೋಲಸ್ ಸ್ಟರ್ನ ಇವರು ಹೇಳಿದರು. ವಿಕಾಸದ ಸಂದರ್ಭದಲ್ಲಿ ಮೋದಿ ಅವರ ವಿಚಾರ ಸ್ಪಷ್ವಾವಾಗಿವೆ. ‘ಜಿ ೨೦’ ಯ ನೇತೃತ್ವ ವಹಿಸುವಾಗಲೂ ಕೂಡ ಅದು ಕಂಡು ಬರುತ್ತದೆ. ಜಲವಾಯು ಪರಿವರ್ತನೆಯ ಸಂದರ್ಭದಲ್ಲಿ ಭಾರತವು ಒಂದು ‘ಮಾಡೆಲ್’ ಪ್ರಸ್ತುತಪಡಿಸಿತ್ತು. ಈ ಮಾಡೆಲ್ ಬಗ್ಗೆ ಸ್ಟರ್ನ್ ಇವರು ಹೊಗಳಿದರು. ಈ ‘ಮಾಡೆಲ್’ ಪ್ರಕಾರ ವಿಶ್ವ ಮಟ್ಟದಲ್ಲಿ ಕೃತಿ ಮಾಡಿದರೆ ಜನರು ವಾಯು ಮಾಲಿನ್ಯದಿಂದ ಸಾವನ್ನಪ್ಪುವುದಿಲ್ಲ ಎಂದು ಹೇಳಿದರು.