ಮೆಕ್ಸಿಕೋದ ‘ವಾಟರ್ ಪಾರ್ಕ್’ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೭ ಮಂದಿ ಸಾವು

ನ್ಯಾಷನಲ್ ಗಾರ್ಡ್ ಮತ್ತು ಮೆಕ್ಸಿಕನ್ ಪೊಲೀಸರ ಸದಸ್ಯರು

ಮೆಕ್ಸಿಕೋ ಸಿಟಿ (ಮೆಕ್ಸಿಕೋ) – ಅಮೇರಿಕಾದ ಸಮೀಪವಿರುವ ಮೆಕ್ಸಿಕೋದ ಗ್ವಾನಾಜುವಾಟೊ ರಾಜ್ಯದ ಕೊರ್ಟಜಾರ್ ನಗರದ ‘ವಾಟರ್ ಪಾರ್ಕ್’ನಲ್ಲಿ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ೭ ವರ್ಷದ ಹುಡುಗಿ ಸೇರಿದಂತೆ ೭ ಮಂದಿ ಸಾವನ್ನಪ್ಪಿದ್ದಾರೆ. ರಜೆ ನಿಮಿತ್ತ ಅನೇಕ ಜನರು ಇಲ್ಲಿ ಸೇರಿದ್ದರು. ಆ ವೇಳೆ ಏಕಾಏಕಿ ದಾಳಿಕೋರರು ಇಲ್ಲಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಕೋರರನ್ನು ಇನ್ನೂ ಬಂಧಿಸಿಲ್ಲ, ದಾಳಿಯ ಹಿಂದಿನ ಉದ್ದೇಶವೂ ತಿಳಿದುಬಂದಿಲ್ಲ.