ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಠಾಕೂರ ಇವರ `ಶ್ರೀರಾಮ ಚಾನೆಲ್ ತೆಲಂಗಾಣ’ಈ ಯೂ ಟ್ಯೂಬ್ ಚಾನೆಲ್ ಮೇಲೆ ನಿರ್ಬಂಧ !

ನಿಮ್ಮ ಚಾನೆಲನಿಂದ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುತ್ತಿತ್ತು !’ (ಅಂತೆ) – ಯೂ ಟ್ಯೂಬ್

ಭಾಗ್ಯನಗರ (ತೆಲಂಗಾಣ) – ಇಲ್ಲಿನ ಗೋಶಾಮಹಲ ಚುನಾವಣಾ ಕ್ಷೇತ್ರದ ಪ್ರಖರ ಹಿಂದುತ್ವನಿಷ್ಠ ಶಾಸಕ ಶ್ರೀ. ಟಿ. ರಾಜಾ ಸಿಂಹರವರ `ಶ್ರೀರಾಮ ಚಾನೆಲ್ ತೆಲಂಗಾಣ’ ಈ ಯೂ ಟ್ಯೂಬ್ ಅನ್ನು ಬಂದ್ ಮಾಡಲಾಗಿದೆ. ಟಿ. ರಾಜಾ ಸಿಂಹರವರಿಗೆ ಬೆಳಗ್ಗಿನ ಜಾವ ೪ ಗಂಟೆಗೆ ಈ-ಮೇಲ್ ಕಳುಹಿಸಿ `ನಿಮ್ಮ ಚಾನೆಲ್ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ವಿಷಯಗಳು ಇವರುವುದರಿಂದ ಅದನ್ನು ಮುಚ್ಚುತ್ತಿದ್ದೇವೆ’ ಎಂದು ಹೇಳುತ್ತಾ ಯೂ ಟ್ಯೂಬ್ ಚಾನೆಲ್ ನಿಂದ ನಿರ್ಬಂಧವನ್ನು ಹೇರಲಾಗಿದೆ’ ಎಂದು ಟಿ. ರಾಜಾ ಸಿಂಹ ಇವರು ಒಂದು ವಿಡಿಯೊ ಪ್ರಸಾರ ಮಾಡಿ ಈ ಮಾಹಿತಿ ನೀಡಿದ್ದಾರೆ. ಈ ಯೂ ಟ್ಯೂಬ್ ಚಾನೆಲ್ ಗೆ ೫ ಲಕ್ಷದ ೬೯ ಸಾವಿರ ಸದಸ್ಯರಿದ್ದರು. ಇದರ ಮೂಲಕ ರಾಜಾ ಸಿಂಹರವರ ವಿವಿಧ ಕಾರ್ಯಕ್ರಮಗಳು, ಮಾರ್ಗದರ್ಶನಗಳ ನೇರಪ್ರಸಾರವಾಗುತ್ತಿತ್ತು. ಈ ಹಿಂದೆ ರಾಜಾ ಸಿಂಹರವರ ಫೇಸ್ಬುಕ್ ಖಾತೆಯನ್ನೂ ಮುಚ್ಚಲಾಗಿತ್ತು.

(ಸೌಜನ್ಯ – Q17 NEWS)

ಹಿಂದೂಗಳ ದೇವತೆಗಳ ಅಪಮಾನ ಮಾಡುವ ಯೂ ಟ್ಯೂಬ್ ಚಾನೆಲ್ ಗಳ ಮೇಲೆ ಕಾರ್ಯಾಚರಣೆ ನಡೆಯುವುದಿಲ್ಲ ! – ಟಿ. ರಾಜಾ ಸಿಂಹ

ಟಿ. ರಾಜಾ ಸಿಂಹರವರು ಮಾತನಾಡುತ್ತಾ, ಜಾವೇದ ಕರೀಂ, ಸ್ಟೀಫನ್ ಚೆನ್ ಹಾಗೂ ಒನ್ನೊಬ್ಬರು ಯೂ ಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಅವರಿಂದ ನಡೆಸಲಾಗುವ ವಾಹಿನಿಗಳಿಂದ ಜಗತ್ತಿನಾದ್ಯಂತ ಹಾಗೂ ಭಾರತದಿಂದಲೂ ಕೋಟ್ಯಾಂತರ ರೂಪಾಯಿಗಳನ್ನು ಗಳಿಸಲಾಗುತ್ತದೆ. ‘ನಾನು ಈ ವಾಹಿನಿಯಿಂದ ಏನು ಹೇಳಿದೆ, ಏನು ಹೇಳುತ್ತಿದ್ದೆನು’, ಎಂಬುದು ಹಿಂದೂಗಳಿಗೆ ತಿಳಿದಿದೆ; ಆದರೆ ಹಿಂದೂಗಳ ದೇವತೆಗಳು, ಪ್ರಧಾನ ಮಂತ್ರಿ ಮೋದಿ, ಭಾಜಪದ ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಯೂ ಟ್ಯೂಬ್ ಚಾನೆಲ್ ಗಳು ನಡೆಯುತ್ತಿರುವಾಗಲೂ ನನ್ನ ಚಾನೆಲನ್ನು ಏಕೆ ಮುಚ್ಚಲಾಯಿತು ?
ಇದರ ಹಿಂದೆ ಜಾವೇದ್ ಕರೀಂನ ಕೈವಾಡವಿರುವುದರಿಂದ ಅದನ್ನು ಮುಚ್ಚಲಾಗಿದೆ ಎಂದು ಅನಿಸುತ್ತದೆ. ಈ ಘಟನೆಗಳಿಂದ ಭಾರತದಲ್ಲಿಯೂ ಸಾಮಾಜಿಕ ಮಾಧ್ಯಮಗಳ ಒಂದು ಸ್ವತಂತ್ರ ವ್ಯವಸ್ಥೆ ಇರಬೇಕು. ನಾವು ಇಂತಹ ಮಾಧ್ಯಮಗಳನ್ನು ಬೆಂಬಲಿಸಿ ಸಹಾಯ ಮಾಡೋಣ. ಇಂತಹ ಯಾವುದೇ ಮಾಧ್ಯಮವಿದ್ದಲ್ಲಿ ನನಗೆ ತಿಳಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಯೂ ಟ್ಯೂಬ್ ‘ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು ಉಂಟುಮಾಡುವ ಎಷ್ಟು ಚಾನೆಲಗಳ ಮೇಲೆ ನಿರ್ಬಂಧ ಹೇರಿದೆ ?’, ಎಂಬುದರ ಮಾಹಿತಿಯನ್ನು ನೀಡಬೇಕು !

ಹಿಂದೂ ನಾಯಕರು ಹಾಗೂ ಅವರ ಸಂಘಟನೆಗಳ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಭಂಧ ಹೇರಲಾಗುತ್ತದೆ; ಏಕೆಂದರೆ ಈ ಮಾಧ್ಯಮಗಳು ವಿದೇಶಿಯಾಗಿದ್ದು ಇವುಗಳ ಮಾಲೀಕರು ಕ್ರೈಸ್ತರು ಅಥವಾ ಮುಸಲ್ಮಾನರಾಗಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !