ಬೇಮೇತರಾ (ಛತ್ತಿಸ್ಗಢ)ದಲ್ಲಿ ವಿಶ್ವ ಹಿಂದೂ ಪರಿಷತ್ತಿನಿಂದ ಮುಸಲ್ಮಾನ ಮತ್ತು ಕ್ರೈಸ್ತರ ಮೇಲೆ ಆರ್ಥಿಕ ಬಹಿಷ್ಕಾರದ ಪ್ರತಿಜ್ಞೆ !

ಸಣ್ಣಪುಟ್ಟ ಕಾರಣದಿಂದ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿ ಒಬ್ಬ ಹಿಂದೂವಿನ ಹತ್ಯೆ !

ವಿಶ್ವ ಹಿಂದೂ ಪರಿಷತ್ತಿನಿಂದ ಮುಸಲ್ಮಾನ ಮತ್ತು ಕ್ರೈಸ್ತರ ಮೇಲೆ ಆರ್ಥಿಕ ಬಹಿಷ್ಕಾರದ ಪ್ರತಿಜ್ಞೆ

ಬೇಮತರಾ (ಛತ್ತಿಸ್ಗಢ) – ಇಲ್ಲಿ ಏಪ್ರಿಲ್ ೮ ರಂದು ಮತಾಂಧ ಮುಸಲ್ಮಾನರು ಸಣ್ಣಪುಟ್ಟ ಕಾರಣದಿಂದ ಹಿಂದೂಗಳ ಮೇಲೆ ದಾಳಿ ನಡೆಸಿದ್ದರು. ಇದರಲ್ಲಿ ಒಬ್ಬ ಹಿಂದೂ ಯುವಕ ಸಾವನ್ನಪ್ಪಿದ್ದನು. ಇದರ ನಂತರ ವಿಶ್ವ ಹಿಂದೂ ಪರಿಷತ್ತಿನಿಂದ ಬೇಮತರಾ ಬಂದಗೆ ಕರೆ ಕೂಡ ನೀಡಿದ್ದರು. ಹಾಗೂ ಪ್ರತಿಭಟನೆ ಕೂಡ ನಡೆಸಲಾಯಿತು. ಈಗ ವಿಶ್ವ ಹಿಂದೂ ಪರಿಷತ್ತಿನಿಂದ ಮುಸಲ್ಮಾನ ಮತ್ತು ಕ್ರೈಸ್ತರ ಮೇಲೆ ಆರ್ಥಿಕ ಬಹಿಷ್ಕಾರ ಹಾಕುವ ಪ್ರತಿಜ್ಞೆ ಮಾಡಿರುವ ಒಂದು ವಿಡಿಯೋ ಪ್ರಸಾರವಾಗುತ್ತಿದೆ. ಅದರಲ್ಲಿ ಭಾಜಪದ ಮಾಜಿ ಸಂಸದರು ಕೂಡ ಉಪಸ್ಥಿತರಿದ್ದಾರೆ, ಎಂದು ಕಾಂಗ್ರೆಸ್ ನಿಂದ ದಾವೆ ಮಾಡಲಾಗಿದೆ.

೧. ವಿಶ್ವ ಹಿಂದೂ ಪರಿಷತ್ತಿನಿಂದ ನಡೆಸಲಾದ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಮುಖೇಶ್ ಚಾಂಡಕ ಇವರು ಪ್ರತಿಭಟನೆಯಲ್ಲಿ ಸಹಭಾಗಿಯಾಗಿರುವವರಿಗೆ ಮುಸಲ್ಮಾನ ಮತ್ತು ಕ್ರೈಸ್ತರ ಮೇಲೆ ಆರ್ಥಿಕ ಬಹಿಷ್ಕಾರ ಹೇರುವ ಪ್ರತಿಜ್ಞೆ ಮಾಡಿಸಿದರು.

೨. ಈ ಸಂದರ್ಭದಲ್ಲಿ ಭಾಜಪದ ನಾಯಕ ರೂಪಸಿಂಹ ಮಾಂಡವಿ ಇವರು ಈ ವಿಷಯದ ಬಗ್ಗೆ ಮಾತನಾಡುತ್ತಾ, ವಿಶ್ವ ಹಿಂದೂ ಪರಿಷತ್ತಿನಿಂದ ಬಂದಗೆ ಕರೆ ನೀಡಿರುವುದು ನಾವು ಬೆಂಬಲ ನೀಡಿದ್ದೆವು; ಆದರೆ ಈ ಪ್ರತಿಜ್ಞೆಯ ಬಗ್ಗೆ ಏನು ತಿಳಿದಿಲ್ಲ ಎಂದು ಹೇಳಿದರು.

‘ವಿರೋಧಿಗಳಿಂದ ಧಾರ್ಮಿಕ ಬಣ್ಣ ನೀಡುವ ಪ್ರಯತ್ನ !’ (ಅಂತೆ) – ಮುಖ್ಯಮಂತ್ರಿ ಭೂಪೇಶ ಬಘೇಲ

ರಾಜ್ಯದ ಮುಖ್ಯಮಂತ್ರಿ ಭೂಪೇಶ ಬಗ್ಗೆ ಇವರು ಮಾತನಾಡುತ್ತಾ, ”ಬೆಮತರಾ ಪ್ರದೇಶದಲ್ಲಿ ನಡೆದ ೨ ಹುಡುಗರ ಜಗಳದಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ. ಈ ಘಟನೆ ದುರಾದೃಷ್ಟಕರವಾಗಿದೆ; ಆದರೆ ಈ ಘಟನೆಗೆ ವಿರೋಧಿಗಳಿಂದ ಧಾರ್ಮಿಕ ಬಣ್ಣ ನೀಡುವ ಪ್ರಯತ್ನ ಮಾಡಲಾಗುತ್ತಿದೆ.

ವಿರೋಧಿಗಳಿಂದ ಕೇವಲ ರಾಜಕೀಯ ನಡೆಯುತ್ತದೆ. (ಬಘೇಲ ಇವರು ಹೀಗೆ ಹೇಳಿ ಮತಾಂಧ ಮುಸಲ್ಮಾನರನ್ನು ರಕ್ಷಿಸುತ್ತಿದ್ದಾರೆ. ಕಾಂಗ್ರೆಸ್ಸಿನವರು ಇಲ್ಲಿಯವರೆಗೆ ಇದನ್ನೇ ಮಾಡುತ್ತಾ ಬಂದಿದ್ದಾರೆ. ಹಿಂದೂಗಳು ಅದನ್ನು ಕೇಂದ್ರದ ಅಧಿಕಾರದಿಂದ ದೂರ ತಳ್ಳಿದರೂ ಅದರ ಅರಿವು ಕಾಂಗ್ರೆಸ್ಸಿನವರಿಗೆ ಇಲ್ಲ, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು)