ಚಲನಚಿತ್ರದ ಟೀಸರ್ ನಲ್ಲಿ ಆಕ್ಷೇಪಾರ್ಹ ಚಿತ್ರಣ ಹಾಗೂ ಸಂಭಾಷಣೆ
ಈ ಚಿತ್ರವನ್ನು ಯಾರ ಧಾರ್ಮಿಕ ಭಾವನೆಗೆ ನೋವಾಗಬೇಕೆಂದೆಂದು ಪ್ರಕಾಶಿಸಿಲ್ಲ, ಬದಲಾಗಿ ಹೇಗೆ ವಿಡಂಬನೆ ಮಾಡಲಾಗಿದೆ ಎಂಬುದು ತಿಳಿಸಲು ಪ್ರಕಾಶಿಸಿದ್ದೇವೆ. – ಸಂಪಾದಕರು |
ಬೆಂಗಳೂರು – ವಿಕಾಸ್ ಪಂಪಾಪತಿ ನಿರ್ದೇಶನದ ಹಾಗೂ ನಾಯಕ ರಿಷಿ ನಟನೆಯ `ರಾಮನ ಅವತಾರ’ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಅದರಲ್ಲಿ ಶ್ರೀರಾಮನನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ. ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಮರೇಜ್ ಸೂರ್ಯವಂಶಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದರ ಬಗ್ಗೆ ಮಾತನಾಡಿದ ನಿರ್ದೇಶಕ ವಿಕಾಸ್ ಪಂಪಾಪತಿ, `ರಾಮನ ಅವತಾರ’ ಈ ಚಿತ್ರ ಕಲಿಯುಗದ ರಾಮನ ಕಥೆಯಾಗಿದ್ದು, ಸಿನಿಮಾ ನೋಡುವಾಗ ಅಲ್ಲಲ್ಲಿ ಪೌರಾಣಿಕ ರಾಮಾಯಣದ ನೆನಪು ಮಾಡಿಕೊಡುತ್ತದೆ, ಎಂದಿದ್ದಾರೆ. (ಎಲ್ಲಿ ದೇವತೆಗಳ ವಿಡಂಬನೆ ಮಾಡುವ ಈ ಚಿತ್ರದ ಟೀಸರ್ ಮತ್ತು ಎಲ್ಲಿ ಜನರಲ್ಲಿ ಭಕ್ತಿಭಾವ ಹೆಚ್ಚಿಸುವ ಪೌರಾಣಿಕ ರಾಮಾಯಣದ ಪ್ರಸಂಗ. ಈ ರೀತಿ ಹೇಳುವ ಮೂಲಕ ಹಿಂದೂ ದೇವತೆಗಳ ವಿಡಂಬನೆ ಮಾಡುತ್ತಿದ್ದಾರೆ – ಸಂಪಾದಕರು) ಜೂನ್ ಮೊದಲ ವಾರ ಸಿನಿಮಾವನ್ನು ತೆರೆಗೆ ತರುವ ಸಾಧ್ಯತೆ ಇದೆ
ಈ ಟೀಸರ್‍ನಲ್ಲಿನ ದೃಶ್ಯಾವಳಿ ಹಾಗೂ ಸಂಭಾಷಣೆಗಳು ಮುಂದಿನಂತಿದೆರಾಮ ಪಾತ್ರಧಾರಿಯನ್ನು ಉದ್ದೇಶಿಸಿ `ಹೆಸರು ಮಾತ್ರ ರಾಮ ಮಾಡೋದೆಲ್ಲ ಕೃಷ್ಣಲೀಲೆಗಳೇ’ ಎನ್ನುವ ಮೂಲಕ ಹಾಸ್ಯ ಮಾಡಲಾಗಿದೆ ಇದರಲ್ಲಿನ ನಾಯಕಿ ಪ್ರಣೀತಾ ಸುಭಾಶ್ ಇವರನ್ನು ಉದ್ದೇಶಿಸಿ ರಾಮಾಯಣದಲ್ಲಿರುವ ಸೀತೆಯ ಕ್ಯಾರೆಕ್ಟರ್ ನೋಡೋಕೆ ನಿಮ್ಮ ತರಹದ್ದೇ ಇದ್ರು ಎಂದು ನಾಯಕನು ಹೇಳುತ್ತಾನೆ ಊರಲ್ಲಿ ಆಡುವ ನಾಟಕದಲ್ಲಿ ಶ್ರೀರಾಮನ ವೇಷ ಹಾಕಿಕೊಂಡ ನಾಯಕನಟನು ವೇದಿಕೆ ಏರುವುದು ಬಿಟ್ಟು ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿರುವಂತೆ ತೋರಿಸಲಾಗಿದೆ ರಾಮನ ಪಾತ್ರಧಾರಿಯು ವ್ಯಕ್ತಿಗಳೊಂದಿಗೆ ಅದೇ ರೀತಿ ಪೊಲೀಸರೊಂದಿಗೆ ಕಾದಾಡುವ, ವ್ಯಕ್ತಿಗಳಿಗೆ ಕಾಲಿನಿಂದ ಒದೆಯುವ, ನೀರೆರಚುವಂತೆ ತೋರಿಸಲಾಗಿದೆ ರಾವಣನ ಬಗೆಗಿನ ವರ್ಣನೆಯಲ್ಲಿ ರಾವಣನಿಗೆ 10 ತಲೆ ಅಂದರೆ 20 ಕಣ್ಣುಗಳಿತ್ತು ಹಾಗಾಗಿ ರಾವಣನು ಐ-20(ಐ-ಅಂದರೆ ಆಂಗ್ಲದಲ್ಲಿ ಕಣ್ಣು-20) ಈ ವಾಹನದಲ್ಲಿ ಓಡಾಡುತ್ತಿದ್ದನು ಎಂದು ಹಾಸ್ಯ ಮಾಡಲಾಗಿದೆ. |
ಸಂಪಾದಕರ ನಿಲುವು* ಹಿಂದೂ ದೇವತೆಗಳ ವಿಡಂಬನೆ ಮಾಡುವವರು ಇತರ ಇತರ ಪಂಥೀಯರ ಶ್ರದ್ಧಾಸ್ಥಾನಗಳ ಬಗ್ಗೆ ಹೀಗೆ ವಿಡಂಬನೆ ಮಾಡಲು ಧೈರ್ಯ ಮಾಡುವುದಿಲ್ಲ ಏಕೆಂದರೆ ಆ ರೀತಿ ಮಾಡಿದರೆ ಪರಿಣಾಮ ಏನಾಗುವುದು ಎಂದು ಎಲ್ಲರಿಗೆ ತಿಳಿದಿದೆ * ಹಿಂದೂಗಳೇ, ಈ ರೀತಿ ದೇವತೆಗಳ ವಿಡಂಬನೆ ಮಾಡುವವರ ವಿರುದ್ಧ ಕಾನೂನುಬದ್ಧ ಕ್ರಮಕೈಗೊಳ್ಳಲು ಸಂಘಟಿತರಾಗಿ * ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂ ಧರ್ಮ, ದೇವತೆಗಳು, ಧರ್ಮಗ್ರಂಥ, ಸಂತರು ಮತ್ತು ರಾಷ್ಟ್ರ ಪುರುಷರ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ಇಲ್ಲದಿರುವುದರಿಂದ ಯಾರಬೇಕಿದ್ದರು ಈ ರೀತಿ ಅಸಭ್ಯವಾಗಿ ಹಿಂದೂ ದೇವತೆಗಳ ವಿಡಂಬನೆ ಮಾಡುವ ಧೈರ್ಯ ತೋರುತ್ತಾರೆ ! ಅದನ್ನು ತಡೆಯುವುದಕ್ಕಾಗಿ ಸರಕಾರ ಇಂತಹವರ ಮೇಲೆ ಅಂಕುಶ ಇಡಲು ತಕ್ಷಣ ಕಾನೂನು ರೂಪಿಸಬೇಕು ! |