ವಿದೇಶಿ ಹಣ ಪೂರೈಕೆಯ ಪ್ರಕರಣದಲ್ಲಿ ‘ಬಿಬಿಸಿ ಇಂಡಿಯಾ’ದ ವಿರುದ್ಧ ದೂರು ದಾಖಲು !

ನವ ದೆಹಲಿ – ವಿದೇಶದಿಂದ ಬರುವ ಹಣ ಪೂರೈಕೆ ಪ್ರಕರಣ ಜಾರಿ ನಿರ್ದೇಶನಾಲಯದಿಂದ (‘ಈಡಿ’ಯಿಂದ) ‘ಬಿಬಿಸಿ ಇಂಡಿಯ’ ಮೇಲೆ ‘ಫೇಮಾ’ (ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಅಕ್ಟ್) ಕಾನೂನಿನ ಅಡಿಯಲ್ಲಿ ದೂರು ದಾಖಲಿಸಿದೆ. ಈ ದೂರ 2 ವಾರಗಳ ಹಿಂದೆ ದಾಖಲಿಸಲಾಗಿತ್ತು ಮತ್ತು ಇಲ್ಲಿಯವರೆಗೆ ‘ಈಡಿ’ಯಿಂದ ‘ಬಿಬಿಸಿ ಇಂಡಿಯಾ’ದ ಒಬ್ಬ ಸಂಚಾಲಕ ಹಾಗೂ ೬ ಕಾರ್ಮಿಕರ ವಿಚಾರಣೆ ನಡೆಸಲಾಗಿದೆ, ಎಂದು ಅಧಿಕಾರಿಗಳು ಈಗ ಹೇಳಿದ್ದಾರೆ.

ಈಡಿ ‘ಬಿಬಿಸಿ ಇಂಡಿಯಾ’ ದ ಮೂಲಕ ನಡೆದಿರುವ ತಥಾಕಥಿತ ವಿದೇಶಿ ಹೂಡಿಕೆಯ (ಎಫ್.ಡಿ.ಐ.ನ) ನಿಯಮದ ಉಲ್ಲಂಘನೆಯ ಬಗ್ಗೆ ಕೂಡ ವಿಚಾರಣೆ ನಡೆಸುತ್ತಿದೆ. ಈ ಹಿಂದೆ ತೆರೆಗೆ ಇಲಾಖೆಯಿಂದ ಬಿಬಿಸಿಯ ದೆಹಲಿ ಮತ್ತು ಮುಂಬಯಿ ಕಚೇರಿಯ ಮೇಲೆ ದಾಳಿ ನಡೆಸಿತ್ತು.

ಸಂಪಾದಕೀಯ ನಿಲುವು

ಮೂಲತಃ ಭಾರತ ಮತ್ತು ಹಿಂದೂ ದ್ವೇಷಿ ಬಿಬಿಸಿಯ ಮೇಲೆ ಭಾರತದಲ್ಲಿ ನಿಷೇಧ ಹೇರುವುದೇ ಅಗತ್ಯ !