ಜಮ್ಶೆಡ್‌ಪುರದಲ್ಲಿ ನ್ಯಾಯವಾದಿ ಸಹಿತ ೮ ಹಿಂದೂ ಕಾರ್ಯಕರ್ತರ ಬಂಧನ !

  • ಜಮ್ಶೆಡ್‌ಪುರ (ಜಾರ್ಖಂಡ್) ಇಲ್ಲಿ ನಡೆದ ಧಾರ್ಮಿಕ ಹಿಂಸಾಚಾರದ ಪ್ರಕರಣ

  • ಹಿಂದೂತ್ವನಿಷ್ಠರ ಪರವಾಗಿ ಮನವಿ ಸಲ್ಲಿಸಲು ಹೋಗಿದ್ದ ಹಿಂದೂಗಳ ಮೇಲೆ ಕ್ರಮ !

 

ಜೆಮ್ಷೆಡ್ಪುರ ಬಾರ್ ಅಸೋಸಿಯೇಷನ್ ವಕೀಲರು ತಮ್ಮ ಸಹ ವಕೀಲ ಚಂದನ್ ಚೌಬೆ ಅವರನ್ನು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಮುಷ್ಕರ ನಡೆಸಿದರು

ಜಮ್ಶೆಡ್‌ಪುರ (ಜಾರ್ಖಂಡ್) – ಇಲ್ಲಿ ನಡೆದ ಧಾರ್ಮಿಕ ಹಿಂಸಾಚಾರದ ಪ್ರಕರಣದಲ್ಲಿ ಹಿಂದುತ್ವನಿಷ್ಠರನ್ನು ಬಂಧಿಸಿರುವ ಪ್ರಕರಣದಲ್ಲಿ ಮನವಿ ಸಲ್ಲಿಸುವುದಕ್ಕಾಗಿ ಪೊಲೀಸ ಅಧಿಕಾರಿಗಳನ್ನು ಭೇಟಿಯಾಗಲು ಹೋಗಿದ್ದ ಒಬ್ಬ ನ್ಯಾಯವಾದಿ ಸಹಿತ ೮ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರ ಮೇಲೆ ಕೊಲೆಯ ಪ್ರಯತ್ನದ ಜೊತೆಗೆ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಸ್ಪೋಟಕಗಳನ್ನು ಇಟ್ಟುಕೊಂಡಿರುವ ಆರೋಪ ಮಾಡಲಾಗಿದೆ. ಅವರಿಗೆ ಜೈಲಿಗೆ ಕಳುಹಿಸಲಾಗಿದೆ. ಜಮ್ಶೆಡ್‌ಪುರ ಪೊಲೀಸರ ಈ ಕ್ರಮದಿಂದ ಜಿಲ್ಲಾ ನ್ಯಾಯಾಲಯದಲ್ಲಿನ ನ್ಯಾಯವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಪ್ರತಿಭಟನೆಯ ಎಚ್ಚರಿಕೆ ಕೂಡ ನೀಡಿದ್ದಾರೆ.

(ಸೌಜನ್ಯ : TOWN POST)

ಒಂದು ವಾರ್ತಾವಾಹಿನಿ ನೀಡಿರುವ ಮಾಹಿತಿಯ ಪ್ರಕಾರ ನ್ಯಾಯವಾದಿ ಚಂದನ ಚತುರ್ವೇದಿ ಇವರ ನೇತೃತ್ವದಲ್ಲಿ ಹಿಂದೂ ಸಂಘಟನೆಯ ಒಂದು ಗುಂಪು ಜಮ್ಶೆಡ್‌ಪುರದ ಹಿರಿಯ ಪೊಲೀಸ ಅಧಿಕಾರಿಯನ್ನು ಭೇಟಿ ಮಾಡಲು ಅವರ ಕಾರ್ಯಾಲಯಕ್ಕೆ ಹೋಗಿದ್ದರು. ನ್ಯಾಯವಾದಿಯ ಹೇಳಿಕೆಯ ಪ್ರಕಾರ ವಿಶ್ವ ಹಿಂದೂ ಪರಿಷತ್ತಿನ ಕೆಲವು ಕಾರ್ಯಕರ್ತರನ್ನು ಕಡಮಾದಿಂದ ಪೊಲೀಸರು ಬಂಧಿಸಿದ್ದಾರೆ. ಇದರ ಬಗ್ಗೆ ಮನವಿ ನೀಡುವುದಕ್ಕಾಗಿ ಅವರು ಪೊಲೀಸ ಕಾರ್ಯಾಲಯಕ್ಕೆ ಹೋಗಿದ್ದರು.

(ಸೌಜನ್ಯ : TOWN POST)

ಜಮ್ಶೆಡ್‌ಪುರ ನ್ಯಾಯಾಲಯದಲ್ಲಿನ ನ್ಯಾಯವಾದಿಗಳಿಂದ ಪೊಲೀಸರ ಈ ಕಾರ್ಯಾಚರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯವಾದಿಗಳು ನ್ಯಾಯಾಲಯದ ಕೆಲಸ ನಿಲ್ಲಿಸಿ ‘ಪೊಲೀಸ ವ್ಯವಸ್ಥೆಯನ್ನು ಜಾಗೃತಗೊಳಿಸಬೇಕು’ ಎಂದು ಘೋಷಣೆ ನೀಡಿದರು. (ಪೊಲೀಸರ ಗುಂಪುಗಾರಿಕೆ ! ರಾಮನವಮಿಯ ಸಮಯದಲ್ಲಿ ಹಿಂಸಾಚಾರ ನಡೆಸಿ ಅಂಗಡಿ ಮತ್ತು ವಾಹನಗಳನ್ನು ಸುಟ್ಟಿರುವ ಮತಾಂಧರನ್ನು ಸ್ವತಂತ್ರವಾಗಿ ಬಿಟ್ಟು, ಅದರ ಬಗ್ಗೆ ಮನವಿ ನೀಡುವುದಕ್ಕಾಗಿ ಹೋಗಿರುವ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಮಾತ್ರ ಬಂಧಿಸಿದ್ದಾರೆ, ಇದು ಖಂಡನೀಯ ! – ಸಂಪಾದಕರು)

ಸಂಪಾದಕರ ನಿಲುವು

ಈ ಹಿಂದೂಗಳನ್ನು ಅನ್ಯಾಯವಾಗಿ ಬಂಧಿಸಿದ್ದರೆ ಅಂತಹ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !