ಹಿಂದೂತ್ವನಿಷ್ಠ ಕಾರ್ಯಕರ್ತನ ಹತ್ಯೆ ಮಾಡಿದವನ ಮಾಹಿತಿ ನೀಡಿದವರಿಗೆ ೫ ಲಕ್ಷ ರೂಪಾಯಿ ಬಹುಮಾನ ಘೋಷಣೆ !

ಹಿಂದೂತ್ವನಿಷ್ಠ ಸಂಘಟನೆಯ ಕಾರ್ಯಕರ್ತ ರುದ್ರೇಶ್

ಬೆಂಗಳೂರು : ಹಿಂದೂತ್ವನಿಷ್ಠ ಸಂಘಟನೆಯ ಕಾರ್ಯಕರ್ತ ರುದ್ರೇಶ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಗೌಸ್ ನಯಾಜಿ (೪೧ ವರ್ಷ) ಇವನ ಬಗ್ಗೆ ಮಾಹಿತಿ ನೀಡುವವರಿಗೆ ೫ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಯು ಘೋಷಿಸಿದೆ.

೧. ಅಕ್ಟೋಬರ್ ೧೬, ೨೦೧೬ ರಂದು ಬೆಳಗ್ಗೆ ೯ ಗಂಟೆಗೆ ಶಿವಾಜಿನಗರದ ಶ್ರೀನಿವಾಸ್ ಮೆಡಿಕಲ್ ಸ್ಟೋರ್ ಎದುರು ಸ್ನೇಹಿತರ ಜೊತೆ ನಿಂತಿದ್ದ ರುದ್ರೇಶ್ ಅವರನ್ನು ಇಬ್ಬರು ಬೈಕ್ ನಲ್ಲಿ ಬಂದ ಜಿಹಾದಿಗಳು ಮಾರಕಾಯುಧಗಳಿಂದ ಇರಿದು ಹತ್ಯೆ ಮಾಡಿದ್ದರು.

೨. ಎನ್.ಐ.ಎ. ಯ ಅಧಿಕಾರಿಗಳು ಈ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಗೌಸ್ ನಯಾಜಿಗಾಗಿ ಅನೇಕ ವರ್ಷಗಳಿಂದ ಹುಡುಕುತ್ತಿದ್ದಾರೆ; ಆದರೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ.

೩. ನಯಾಜಿ ಈತನು ನಿಷೇಧಿತ ಪಿ.ಎಫ್.ಐ ಈ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳನ್ನು ಜೈಲಿನಲ್ಲಿಡಲಾಗಿದೆ. ನಯಾಜಿ ಹಿಂದೂಗಳ ಮೇಲಿನ ದಾಳಿಯ ಹಲವು ಘಟನೆಗಳಲ್ಲಿ ಭಾಗಿಯಾಗಿರುವ ಸಂದೇಹ ಇದೆ.