ನೋಯ್ಡಾ (ಉತ್ತರ ಪ್ರದೇಶ) ಇಲ್ಲಿ ಬಾರ್ ನಲ್ಲಿ ‘ರಾಮಾಯಣ’ ಧಾರವಾಹಿಯ ‘ರಿಮಿಕ್ಸ್’ !

ಮಾಲಿಕ ಮತ್ತು ವ್ಯವಸ್ಥಾಪಕರ ಬಂಧನ

(ರಿಮಿಕ್ಸ್ ಎಂದರೆ ಮೂಲ ಹಾಡು, ಪ್ರಸಂಗ, ಸಂವಾದ, ಅದರ ರಾಗ, ಸಂಗೀತ ಮುಂತಾದರಲ್ಲಿ ಬದಲಾವಣೆ ಮಾಡುವುದು)

ನೋಯ್ಡಾ ( ಉತ್ತರಪ್ರದೇಶ ) – ಇಲ್ಲಿಯ ‘ಗಾರ್ಡನ್ ಗ್ಯಾಲೇರಿಯ’ ‘ಮಾಲ’ನಲ್ಲಿ (ದೊಡ್ಡ ವ್ಯಾಪಾರಿ ಸಂಕೀರ್ಣ) ‘ಲಾರ್ಡ್ ಆಫ್ ದಿ ಡ್ರಿಂಕ್ಸ್ ರೇಸ್ಟೋ’ ಈ ಬಾರನ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿದೆ. ಇದರಲ್ಲಿ ಸಾರಾಯಿ ಪಾರ್ಟಿಯಲ್ಲಿ ರಾಮಾನಂದ ಸಾಗರ್ ಇವರ ‘ರಾಮಾಯಣ’ ಧಾರವಾಹಿಯನ್ನು ರಿಮಿಕ್ಸ್ ಮಾಡಿ ತೋರಿಸಲಾಗಿದೆ. ಆ ಸಮಯದಲ್ಲಿ ಕೆಲವು ಜನರು ಕುಣಿಯುತ್ತಿದ್ದರು ಮತ್ತು ಹಾಡುತ್ತಿರುವುದು ಕಾಣಿಸುತ್ತದೆ. ಧಾರಾವಾಹಿಯಲ್ಲಿನ ಶ್ರೀರಾಮ ಮತ್ತು ರಾವಣ ಇವರಲ್ಲಿನ ಯುದ್ಧದ ದೃಶ್ಯ ದೊಡ್ಡ ಪರದೆಯ ಮೇಲೆ ಕಾಣಿಸುತ್ತದೆ. ಧಾರವಾಹಿಯಲ್ಲಿನ ಸಂವಾದ ಕೇಳಿಸಲಾಗುವಾಗ ಸಂಗೀತ ಕೂಡ ನಡೆಯುತ್ತಿತ್ತು. ಈ ಪ್ರಕರಣದಲ್ಲಿ ನೋಯ್ಡಾದ ಪೊಲೀಸರು ತಾವಾಗಿಯೇ ದೂರು ದಾಖಲಿಸಿ ಬಾರ್ ಮಾಲೀಕ ಮಾಣಿಕ್ ಅಗ್ರವಾಲ್ ಮತ್ತು ವ್ಯವಸ್ಥಾಪಕ ಅಭಿಷೇಕ ಸೋನಿ ಇವರನ್ನು ಬಂಧಿಸಿದ್ದಾರೆ, ಜೊತೆಗೆ ಸಂಗೀತ ನುಡಿಸುವ ಡಿಜೆ (ಡಿಸ್ಕ್ ಜಾಕಿ) ಇವನ ಹುಡುಕಾಟ ನಡೆಯುತ್ತಿದೆ.

ಟ್ವಿಟರ್ ನಲ್ಲಿ ಈ ವಿಡಿಯೋ ಪ್ರಸಾದವಾಗಿತ್ತು. ಇದರಲ್ಲಿ ಪೊಲೀಸರಿಗೆ “ಟ್ಯಾಗ್ ಮಾಡಿ (ಸೂಚಿಸಿ), ‘ನೋಯ್ಡಾದಲ್ಲಿ ಬಹಿರಂಗವಾಗಿ ಹಿಂದೂ ಧರ್ಮದ ವಿಡಂಬನೆ ಮಾಡಲಾಗುತ್ತದೆ. ಇದರ ಮೇಲೆ ತ್ವರಿತ ಕ್ರಮ ಕೈಗೊಳ್ಳುವುದು, ಇಲ್ಲವಾದರೆ ವಿದ್ವಾಂಸ ನಡೆದರೆ ಅದಕ್ಕೆ ಅವರೇ (ಬಾರ್ ಮಾಲಿಕ) ಹೊಣೆಯಾಗುವರು.’ ಎಂದು ಬರೆಯಲಾಗಿತ್ತು.

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ಸಂಪಾದಕರ ನಿಲುವು

ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂ ಧರ್ಮ, ದೇವತೆಗಳು, ಧರ್ಮಗ್ರಂಥ, ಸಂತರು ಮತ್ತು ರಾಷ್ಟ್ರ ಪುರುಷರ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ಇಲ್ಲದಿರುವುದರಿಂದ ಯಾರಬೇಕಿದ್ದರು ಈ ರೀತಿ ಅಸಭ್ಯವಾಗಿ ಹಿಂದೂ ದೇವತೆಗಳ ವಿಡಂಬನೆ ಮಾಡುವ ಧೈರ್ಯ ತೋರುತ್ತಾರೆ ! ಅದನ್ನು ತಡೆಯುವದಕ್ಕಾಗಿ ಸರಕಾರ ಇಂತಹವರ ಮೇಲೆ ಅಂಕುಶ ಇಡಲು ತಕ್ಷಣ ಕಾನೂನು ರೂಪಿಸಬೇಕು !