ಕೇರಳದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಪ್ರವಾಸಿಗರಿಗೆ ಬೆಂಕಿ ಹಚ್ಚಿದ ಘಟನೆಯ ಹಿಂದೆ ಉಗ್ರ ಸಂಘಟನೆಯ ಕೈವಾಡ !

  • ರಾಷ್ಟ್ರೀಯ ತನಿಖಾ ದಳ ಮತ್ತು ಗುಪ್ತಚರ ಇಲಾಖೆಯ ತೀರ್ಮಾನ

  • ಮುಖ್ಯ ಸಂಶಯಿತ ಆರೋಪಿ ಶಾಹರೂಖ ಸೈಫಿನನ್ನು ರತ್ನಾಗಿರಿಯಿಂದ ಬಂಧನ

ರತ್ನಾಗಿರಿ – ಕೇರಳದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಪ್ರವಾಸಿಗರ ಮೇಲೆ ಜ್ವಲನಶೀಲ ಪದಾರ್ಥವನ್ನು ಎಸೆದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಪ್ರಕರಣದ ಹಿಂದೆ ಭಯೋತ್ಪಾದಕ ಸಂಘಟನೆಯ ಕೈವಾಡವಿದೆಯೆಂದು ರಾಷ್ಟ್ರೀಯ ತನಿಖಾ ದಳ( ಎನ್.ಐ.ಎ.) ಮತ್ತು ಗುಪ್ತಚರ ಇಲಾಖೆ (ಐ.ಬಿ) ಈ ಸಂಸ್ಥೆಗಳು ತೀರ್ಮಾನಕ್ಕೆ ಬಂದಿವೆ. ಆ ದಿಸೆಯಲ್ಲಿ ಇಲ್ಲಿ ಬಂಧಿಸಲ್ಪಟ್ಟಿರುವ ಆರೋಪಿ ಶಾಹರೂಖ ಸೈಫಿಯ ವಿಚಾರಣೆಯನ್ನು ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ 3 ಜನರು ಸಾವನ್ನಪ್ಪಿದ್ದು, 9 ಜನರು ಗಾಯಗೊಂಡಿದ್ದರು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎ.ಟಿ.ಎಸ್.) ರಾಷ್ಟ್ರೀಯ ತನಿಖಾ ದಳವು ರತ್ನಾಗಿರಿಯ ಪೊಲೀಸರ ಸಹಕಾರದಿಂದ ಶಾಹರೂಖ ಸೈಫಿಯನ್ನು ಎಪ್ರಿಲ್ 4 ರಂದು ರಾತ್ರಿ 11.30 ಗಂಟೆಗೆ ಅಲ್ಲಿಯ ರೇಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದರು ಮತ್ತು ಬಳಿಕ ಅವನನ್ನು ಕೇರಳ ಉಗ್ರವಿರೋಧಿದಳದ ವಶಕ್ಕೆ ಒಪ್ಪಿಸಿದರು.

1. ಪೊಲೀಸರು ನೀಡಿರುವ ಮಾಹಿತಿಯನುಸಾರ ಮುಖ್ಯ ಸಂಶಯಿತ ಆರೋಪಿ ಶಾಹರೂಖ ಸೈಫಿಯು ದೆಹಲಿಯ ಶಾಹೀನ ಬಾಗನ ನಿವಾಸಿಯಾಗಿದ್ದು, ಅವನು ಜೂನ 2022 ರಿಂದ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಂಡಿದ್ದನು. ನಮಾಜ ಮಾಡಲು ಹೆಚ್ಚು ಸಮಯವನ್ನು ವ್ಯಯಿಸುವುದರೊಂದಿಗೆ ಅವನು ಕಟ್ಟಾ ಧಾರ್ಮಿಕತೆಯೆಡೆಗೆ ವಾಲಿದ್ದನು ಎಂದು ಅಂದಾಜಿಸಲಾಗಿದೆ.

2. ಅವನು ವ್ಯವಹಾರದಿಂದ `ಯೂ ಟ್ಯೂಬರ’ ಆಗಿದ್ದು, ಅವನ `ಯೂ ಟ್ಯೂಬ ಚಾನೆಲ’ ಮೇಲೆ ಕೆಲವೇ ಕೆಲವು `ಸಬ್ ಸ್ಕ್ರೈಬರ’ಗಳು ಇದ್ದರೂ. ಸೈಫಿಯನ್ನು ಕಟ್ಟರನಾಗಲು ಅವನನ್ನು ಸಂಪರ್ಕಿಸಿರಬಹುದು ಎಂದು ಅವರ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ.

3. `ಕೇರಳದ ರೈಲು ಸುಟ್ಟಿರುವ ಪ್ರಕರಣದಲ್ಲಿ ತಾನೊಬ್ಬನೇ ಈ ಆಕ್ರಮಣವನ್ನು ಮಾಡಿದ್ದೇನೆ’ ಎಂದು ಶಾಹರೂಖ ಹೇಳುತ್ತಿದ್ದರೂ, ರೈಲಿಗೆ ಬೆಂಕಿ ಹಚ್ಚುವ ಘಟನೆಯಲ್ಲಿ ಇತರೆ ಜನರೂ ಭಾಗಿಗಳಾಗಿರುವ ಸಂಶಯವಿದೆ.

4. `ಶಾಹರೂಖನಲ್ಲಿ ಧಾರ್ಮಿಕ ಕಟ್ಟರತೆಯ ಯಾವುದೇ ಚಿಹ್ನೆಗಳಿಲ್ಲ’, ಎಂದು ಅವನ ಸಂಬಂಧಿಕರು ಹೇಳುತ್ತಿದ್ದರೂ, `ಶಾಹರೂಕ ಕೇರಳದಿಂದ ಹೇಗೆ ಅಕಸ್ಮಿಕವಾಗಿ ಕಾಣೆಯಾದನು?’ ಮತ್ತು `ಅವನು ಅದೇ ಗಾಡಿಯಲ್ಲಿ ಏಕೆ ಹತ್ತಿದನು?’ ಎನ್ನುವ ತನಿಖೆ ಮುಂದುವರಿದಿದೆ.

ಸಂಪಾದಕೀಯ ನಿಲುವು

ಭಯೋತ್ಪಾದಕರು ಸಮಾಜಘಾತುಕ ಕೃತ್ಯಗಳನ್ನು ನಡೆಸಲು ವಿವಿಧ ಸಾಧನಗಳನ್ನು ಬಳಸುತ್ತಿರುವುದು ಇದರಿಂದ ಕಂಡು ಬರುತ್ತದೆ. ಇಂತಹ ಉಗ್ರ ಸಂಘಟನೆಗಳ ಮೂಲಸಹಿತ ನಷ್ಟಗೊಳಿಸುವುದು ಆವಶ್ಯಕವಾಗಿದೆ !