‘ಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಈ ಮುಂಬರುವ ಚಲನಚಿತ್ರದ ಹಾಡಿನಲ್ಲಿ ದೇವಸ್ಥಾನದ ಪರಿಸರದಲ್ಲಿ ಶೂ ಧರಿಸಿ ಅಶ್ಲೀಲ ನೃತ್ಯ !

  • ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂಗಳ ವಿರೋಧ

  • ಸೆನ್ಸಾರ್ ಮಂಡಳಿಯು ನಿರ್ಮಾಪಕರ ವಿರುದ್ಧ ಕ್ರಮಕೈಗೊಳ್ಳುವಂತೆ ಮಾಜಿ ಕ್ರಿಕೆಟಗಾರ ಶಿವರಾಮಕೃಷ್ಣನ್ ಆಗ್ರಹ !

ಮುಂಬಯಿ – ‘ಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಈ ಮುಂಬರುವ ಹಿಂದಿ ಚಲನಚಿತ್ರದ ‘ಯೆಂಟಮ್ಮಾ’ ಹಾಡಿಗೆ ಹಿಂದೂ ದೇವಾಲಯದಲ್ಲಿ ಲುಂಗಿ, ಚಪ್ಪಲಿ ಮತ್ತು ಬೂಟುಗಳನ್ನು ಧರಿಸಿ ಕುಣಿಯುತ್ತಿರುವ ನಟ ಸಲ್ಮಾನ್ ಖಾನ್, ವೆಂಕಟೇಶ್ ಮತ್ತು ರಾಮ್ ಚರಣ್ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲ್ಲಿ ವೈರಲ್ ಆದ ನಂತರ ಹಿಂದೂಗಳಿಂದ ವಿರೋಧವಾಗಲು ಪ್ರಾರಂಭವಾಗಿದೆ. ಈ ನೃತ್ಯವು ಅಶ್ಲೀಲ ಮತ್ತು ಅಸಭ್ಯವಾಗಿದೆ ಎಂದು ವಿರೋಧಿಸಲಾಗುತ್ತಿದೆ. ಮಾಜಿ ಕ್ರಿಕೆಟಗಾರ ಶಿವರಾಮಕೃಷ್ಣನ್ ಮತ್ತು ತಮಿಳುನಾಡಿನ ವಿಮರ್ಶಕ ಪ್ರಶಾಂತ್ ರಂಗಸ್ವಾಮಿ ಇವರು ಈ ಹಾಡಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿದ್ದಾರೆ. ‘ಈ ಚಲಣಚಿತ್ರವು ದಕ್ಷಿಣ ಭಾರತದ ಸಂಸ್ಕೃತಿಗೆ ಅವಮಾನ ಮಾಡಿದೆ’ ಎಂದು ಅವರು ಹೇಳಿದ್ದಾರೆ. ಈ ಚಿತ್ರದ ನಿರ್ದೇಶಕರು ಫರ್ಹಾದ್ ಸಮಜಿ ಆಗಿದ್ದಾರೆ (ಮಸೀದಿಯಲ್ಲಿ ನಟರು ನೃತ್ಯ ಮಾಡುವ ಮೂಲಕ ಫರ್ಹಾದ್ ಸಾಮಜಿ ಹಾಡನ್ನು ನಿರ್ದೇಶಿಸುತ್ತಾರೆಯೇ ? ಅಂತಹ ಹಾಡುಗಳನ್ನು ದೇವಾಲಯಗಳಲ್ಲಿ ಮಾತ್ರ ಏಕೆ ಚಿತ್ರೀಕರಿಸಲಾಗುತ್ತದೆಯೇ ? – ಸಂಪಾದಕರು)

ಕೇಂದ್ರ ಚಲನಚಿತ್ರ ತಪಾಸಣಾ ಮಂಡಳಿಯು ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ದೇವಸ್ಥಾನದಲ್ಲಿ ಪಾದರಕ್ಷೆ ಹಾಕಿಕೊಂಡು ಕುಣಿಯುವುದು ತಪ್ಪು. ನಟರು ಧರಿಸುವ ಲುಂಗಿಯು ಲುಂಗಿಯಾಗಿರದೇ ಧೋತಿಯಾಗಿದೆ. ಸಾಂಸ್ಕೃತಿಕ ಉಡುಪನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಸಿನಿಮಾ ನೋಡಿ ಸರ್ಟಿಫಿಕೇಟ್ ಕೊಡುವಾಗ ಸೆನ್ಸಾರ್ ಮಂಡಳಿ ನಿದ್ದೆ ಮಾಡುತ್ತಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಹಿಂದೂಗಳ ಬಗ್ಗೆ ನಿರ್ಲಕ್ಷ ಮಾಡುತ್ತಿದೆಯೇ ?

ಕೇಂದ್ರದ ಭಾಜಪ ಸರಕಾರವು ಈಗಲಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಚಲನಚಿತ್ರಗಳ ಮೂಲಕ ಹಿಂದೂ ಧರ್ಮವನ್ನು ನಿರಂತರವಾಗಿ ಅವಮಾನಿಸಲಾಗುತ್ತದೆ ಮತ್ತು ಪ್ರತಿ ಬಾರಿ ಹಿಂದೂಗಳು ಅದರ ವಿರುದ್ಧ ಪ್ರತಿಭಟಿಸಬೇಕು, ಇದನ್ನು ಹಿಂದೂಗಳಿಗೆ ಅಪೇಕ್ಷಿತವಿಲ್ಲ !