ಗೋಕಳ್ಳಸಾಗಾಣಿಕೆ ತಡೆಯುವ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸಹಿತ ೪ ಜನರ ಬಂಧನ

ಹಿಂದೂಗಳಲ್ಲಿ ಆಕ್ರೋಶ

ಪುನೀತ್ ಕೆರೆಹಳ್ಳಿ ಮಧ್ಯಭಾಗದಲ್ಲಿ

ರಾಮನಗರ – ಗೋವುಗಳ ಸಾಗಾಣಿಕೆ ಮಾಡಿ ಗೋಹತ್ಯೆಗಾಗಿ ಒಂದು ವಾಹನದಿಂದ ಕೊಂಡೊಯ್ಯುವಾಗ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರು ೧೬ ಗೋವುಗಳ ರಕ್ಷಣೆ ಮಾಡಿರುವ ಘಟನೆ ನಡೆದಿದೆ. ಆದರೆ ರಾಮನಗರ ಪೊಲೀಸರು ಅಕ್ರಮವಾಗಿ ಗೋಕಳ್ಳ ಸಾಗಾಣಿಕೆ ಮಾಡುವ ವ್ಯಕ್ತಿಯ ಹತ್ಯೆಯ ಮಾಡಿರುವ ಆರೋಪ ಮಾಡಿ ರಾಷ್ಟ್ರ ರಕ್ಷಣ ಪಡೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸಹಿತ ೪ ಕಾರ್ಯಕರ್ತರನ್ನು ರಾಜಸ್ಥಾನದಿಂದ ಬಂಧಿಸಿದ್ದಾರೆ. ಗೋವುಗಳ ಸಾಗಾಣಿಕೆ ಮಾಡುವ ವಾಹನದಲ್ಲಿನ ವ್ಯಕ್ತಿ ವಾಹನವನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದನು. ನಂತರ ಅವನ ಶವ ಅನುಮಾನಾಸ್ಪದವಾಗಿ ದೊರೆತಿತ್ತು. ಈ ಪ್ರಕರಣದಲ್ಲಿ ಅವರ ಕುಟುಂಬದವರು ನೀಡಿರುವ ದೂರಿನ ಆಧಾರದ ಮೇರೆಗೆ ಈ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಹಿಂದೂಗಳು ಸಾಮಾಜಿಕ ಮಾಧ್ಯಮದಿಂದ ಪುನೀತ್ ಕೆರೆಹಳ್ಳಿ ಇವರ ಬಂಧನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಘಟನೆಯ ಹಿಂದೆ ಷಡ್ಯಂತ್ರ ಇರುವುದೆಂದು ಅದರ ವಿಚಾರಣೆ ನಡೆಸಿರಿ ! – ಶ್ರೀ. ಪ್ರಮೋದ ಮುತಾಲಿಕ

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಇವರು ಪತ್ರಿಕಾಗೋಷ್ಠಿಯಲ್ಲಿ, ಪುನೀತ್ ಕೆರೆಹಳ್ಳಿ ಗುಂಪಿನ ಜನರು ಕಂಟೇನರ್ ನಲ್ಲಿ ಇದ್ದ ಹಸುಗಳನ್ನು ಬಿಡುಗಡೆಗೊಳಿಸಿ ಗೋಮಾತೆಯ ರಕ್ಷಣೆ ಮಾಡಿದರು. ಯಾವಾಗಲೂ ಮುಸಲ್ಮಾನ ಸಾವನ್ನಪಪ್ಇದ್ದರೇ ಅವರ ಪರ ಮಾತನಾಡುವ ಹಾಗೂ ‘ನಾವು ರೈತರ ಪರ ಇರುವುದಾಗಿ ‘ಸತತವಾಗಿ ಹೇಳುವ ಕಾಂಗ್ರೆಸ್ ನ ಮುಖಂಡ ಸಿದ್ದರಾಮಯ್ಯ ಮತ್ತು ಜನತಾದಳ (ಸೆಕ್ಯುಲರ್) ಪಕ್ಷದ ನಾಯಕ ಕುಮಾರಸ್ವಾಮಿ ಕಂಟೇನರನಲ್ಲಿ ದೊರೆತಿರುವ ಹಸುಗಳ ಬಗ್ಗೆ ಏನು ಮಾತನಾಡುವುದಿಲ್ಲ ? ಅವರು ಮುಸಲ್ಮಾನರ ಓಲೈಕೆ ಮಾಡುತ್ತಿರುವುದರಿಂದ ಈ ಘಟನೆಯ ಹಿಂದೆ ಷಡ್ಯಂತ್ರ ಇದೆ. ಇದರ ಆಳವಾಗಿ ತನಿಖೆಯಾಗಬೇಕು. ಕಂಟೇನರನಲ್ಲಿ ದೊರೆತಿರುವ ಹಸುಗಳು ಎಲ್ಲಿಂದ ಬಂದವು ? ಎಲ್ಲಿಗೆ ಸಾಗಿಸಲಾಗುತ್ತಿತ್ತು ? ಇದರ ವಿಚಾರಣೆ ಕೂಡ ನಡೆಸಬೇಕು ಎಂದು ಹೇಳಿದರು.

(ಸೌಜನ್ಯ – Dighvijay 24X7 News)

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಭಾಜಪ ಸರಕಾರ ಇರುವುದರಿಂದ ಈ ಪ್ರಕರಣದ ಹಿಂದೆ ಏನಾದರೂ ಷಡ್ಯಂತ್ರ ಇದ್ದರೆ, ಅದನ್ನು ಆಳವಾಗಿ ವಿಚಾರಣೆ ನಡೆಸಿ ಸತ್ಯ ಜನರೆದುರು ತರುವುದು ಅವಶ್ಯಕವಾಗಿದೆ !