‘ಮುಸ್ಲಿಂ ಯುವಕರು ಆತ್ಮರಕ್ಷಣೆಗಾಗಿ ಬಾಂಬ್‌ಗಳನ್ನು ತಯಾರಿಸುತ್ತಿದ್ದರು !’ (ಅಂತೆ) – ಜನತಾದಳದ ಶಾಸಕ ಮುಹಮ್ಮದ್ ನೆಹಾಲುದ್ದೀನ್

ಬಿಹಾರದಲ್ಲಿ ಆಡಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಮುಹಮ್ಮದ್ ನೆಹಾಲುದ್ದೀನ್ ಇವರ ಕಾನೂನುದ್ರೋಹಿ ಹೇಳಿಕೆ !

ಜನತಾದಳದ ಶಾಸಕ ಮುಹಮ್ಮದ್ ನೆಹಾಲುದ್ದೀನ್

ಪಾಟ್ಲಿಪುತ್ರ (ಬಿಹಾರ) – ರಾಮನವಮಿಯ ಪ್ರಯುತ್ತ ನಡೆದ ಶೋಭಾಯಾತ್ರೆಯ ಮೇಲೆ ಬಿಹಾರದ ಸಾಸಾರಾಂ, ಭಾಗಲ್ಪುರ್ ಮತ್ತು ಬಿಹಾರಶರೀಫನಲ್ಲಿ ಮತಾಂಧ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಮತಾಂಧರು ಬಾಂಬ್ ಸ್ಫೋಟಗಳನ್ನೂ ನಡೆಸಿದ್ದಾರೆ. ಒಂದು ಮಸೀದಿ ಬಳಿ ಬಾಂಬ್ ತಯಾರಿಸುತ್ತಿರುವಾಗ ಸಂಭವಿಸಿದ ಸ್ಫೋಟದಲ್ಲಿ ೬ ಮಂದಿ ಮತಾಂಧರು ಗಾಯಗೊಂಡಿದ್ದಾರೆ. ಈ ಗಲಭೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ರಾಷ್ಟ್ರೀಯ ಜನತಾ ದಳದ ಶಾಸಕ ಮೊಹಮ್ಮದ್ ನೆಹಾಲುದ್ದೀನ್ ಇವರು ಬಾಂಬ್ ತಯಾರಿಸುವ ಮತಾಂಧ ಮಸಲ್ಮಾನರನ್ನು ಬೆಂಬಲಿಸಿದ್ದಾರೆ. ನೆಹಾಲುದ್ದೀನ್ ‘ಇಂಡಿಯಾ ಟಿವಿ’ಯ ಪ್ರತಿನಿಧಿಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ, ‘ಸಾಯುವುದಕ್ಕಿಂತ ಏನಾದರೂ ಮಾಡುವುದು ಉತ್ತಮವಾಗಿದೆ. ಮುಸ್ಲಿಂ ಯುವಕರು ಆತ್ಮರಕ್ಷಣೆಗಾಗಿ ಬಾಂಬ್ ತಯಾರಿಸುತ್ತಿದ್ದರು.’ (ಬಿಹಾರನಲ್ಲಿ ಮತಾಂಧ ಮುಸಲ್ಮಾನರಿಂದ ರಾಮನವಮಿಯ ಶೋಭಾಯಾತ್ರೆಯ ಮೇಲೆ ಆಕ್ರಮಣ ಮಾಡಿ ಬಾಂಬ್ ತಯಾರಿಸುವವರನ್ನು ಬೆಂಬಲಿಸುವುದು ಅಂದರೆ ‘ಕಳ್ಳಗಿನೊಂದು ಪಿಳ್ಳೆನೇವಾ’ ಎಂದಾಗಿದೆ. -ಸಂಪಾದಕರು)

ಮುಖ್ಯಮಂತ್ರಿ ನಿತೀಶ್ ಕುಮಾರ್ ಇಫ್ತಾರ್ ಔತಣಕೂಟದಲ್ಲಿ ಮಗ್ನ !

ರಾಜ್ಯದಲ್ಲಿ ಒಂದು ಕಡೆ ಗಲಭೆ ಸೃಷ್ಟಿಯಾಗುತ್ತಿದ್ದರೆ, ಇನ್ನೊಂದೆಡೆ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟಲಿಪುತ್ರದ ಫುಲ್ವಾರಿ ಷರೀಫ್‌ನಲ್ಲಿ ನಡೆದ ‘ಇಸ್ಲಾಮಿಯಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್’ನ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. (ಈ ರೀತಿ ಔತಣಕೂಟದಲಿ ಪಾಲ್ಗೊಳ್ಳುವ ಮೂಲಕ ನಿತೀಶ್ ಕುಮಾರ್ ಅವರು ‘ನಾನು ಸಂತ್ರಸ್ತ ಹಿಂದೂಗಳೊಂದಿಗೆ ಇಲ್ಲ ಬದಲಾಗಿ ಗಲಭೆಕೋರರೊಂದಿಗಿದ್ದೇನೆ’ ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ಈ ಪರಿಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂಗಳು ಈಗ ಅದನ್ನೇ ಮಾಡಬೇಕಾ ? ಈ ರೀತಿ ಹೇಳಿಕೆ ನೀಡುವ ಮೂಲಕ ಶಾಸಕ ನೆಹಾಲುದ್ದೀನ್ ಬಾಂಬ್ ತಯಾರಿಸಲು ಬೆಂಬಲ ನೀಡುತ್ತಿದ್ದಾರೆ. ಇಂತಹ ಶಾಸಕ ಮತ್ತು ಅವರ ಪಕ್ಷವನ್ನು ನಿಷೇಧಿಸಬೇಕು !

ಇಂತಹ ಹೇಳಿಕೆಯನ್ನು ಭಾಜಪ ಶಾಸಕರು ನೀಡಿದ್ದರೆ, ದೇಶ ವಿದೇಶಗಳಲ್ಲಿನ ಜಾತ್ಯತೀತರು ಆಕಾಶ ಪಾತಾಳ ಒಂದು ಮಾಡುತ್ತಿದ್ದರು ಮತ್ತು ಹಿಂದೂಗಳನ್ನು ತಾಲಿಬಾನಿಯರೆಂದು ಘೋಷಿಸುತ್ತಿದ್ದರು; ಆದರೆ ನೆಹಾಲುದ್ದೀನ್ ಬಗ್ಗೆ ಎಲ್ಲವೂ ಶಾಂತವಾಗಿದೆ !