ಉತ್ತರ ಪ್ರದೇಶ ಶಿಕ್ಷಣ ಮಂಡಳಿಯು ಪುಸ್ತಕಗಳಿಂದ ಮೊಘಲರನ್ನು ವೈಭವೀಕರಿಸುವ ಪಾಠಗಳಿಗೆ ಕತ್ತರಿ !

ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರದ ಶ್ಲಾಘನೀಯ ನಿರ್ಧಾರ ! ದೇಶಾದ್ಯಂತ ಈ ರೀತಿ ನಿರ್ಧಾರವನ್ನು ತೆಗೆದುಕೊಂಡು, ಪಠ್ಯಪುಸ್ತಕದಿಂದ ಆಗುವ ಆಕ್ರಮಣಕಾರರ ವೈಭವಿಕರಣ ನಿಲ್ಲಿಸಬೇಕು !

ಲಕ್ಷ್ಮಣಪುರಿ – ಉತ್ತರ ಪ್ರದೇಶದ ೧೨ ನೇ ತರಗತಿ ವಿದ್ಯಾರ್ಥಿಗಳಿಗೆ ಮೊಘಲರ ಇತಿಹಾಸವನ್ನು ಕಲಿಸಲಾಗುವುದಿಲ್ಲ. ಉತ್ತರ ಪ್ರದೇಶದ ಶಿಕ್ಷಣ ಮಂಡಳಿ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ.ಬಿ.ಎಸ್.ಇ.) ಪಠ್ಯಕ್ರಮವು ಬದಲಾಯಿಸಿದ್ದರಿಂದ ಅದರಲ್ಲಿ ಮೊಘಲರ ಇತಿಹಾಸವನ್ನು ತೆಗೆಯಲಾಗಿದೆ. ಹೊಸ ನೀತಿಯ ಪ್ರಕಾರ ೧೨ನೇ ತರಗತಿಯ ‘ಭಾರತದಲ್ಲಿ ಮೊಘಲ್‌ರ ಇತಿಹಾಸ’ ಈ ಪುಸ್ತಕದಿಂದ ‘ಮೊಘಲ್ ದರಬಾರ’ ಈ ಪಾಠವನ್ನು ತಗೆದು ಹಾಕಲಾಗಿದೆ. ಇದರೊಂದಿಗೆ ೧೧ನೇ ತರಗತಿಯ ಪುಸ್ತಕದಿಂದ ‘ಇಸ್ಲಾಂನ ಉದಯ’, ‘ಸಂಸ್ಕೃತಿಯಲ್ಲಾದ ವ್ಯತ್ಯಾಸಗಳು’, ‘ಕೈಗಾರಿಕಾ ಕ್ರಾಂತಿ’ ಎಂಬ ಪಾಠಗಳನ್ನೂ ಅಳಿಸಲಾಗಿದೆ. ಇದನ್ನು ೨೦೨೩-೨೪ ರಿಂದ ಬದಲಾಯಿಸಲಾಗಿದೆ.

ಹೊಸ ಪೀಳಿಗೆಗೆ ನಮ್ಮ ಪರಂಪರೆಯನ್ನು ಕಲಿಸುವುದು ಅಗತ್ಯ ! – ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್

ನಮ್ಮ ಸಂಸ್ಕೃತಿ ನಮ್ಮ ಸಾಂಸ್ಕೃತಿಕ ಪರಂಪರೆಯಾಗಿದೆ. ‘ಈ ಪರಂಪರೆ ಏನು?’, ಇದನ್ನು ನಾವು ಹೊಸ ಪೀಳಿಗೆಗೆ ಕಲಿಸಬೇಕು. ಪ್ರಾಚೀನ ಕಾಲದ ಜನರ ಸಂಸ್ಕೃತಿ ಏನಾಗಿತ್ತು ? ಅದನ್ನು ಕಲಿಸಲೇ ಇಲ್ಲ ಎಂದು ಹೇಳಿದರು.

ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್

‘ಮೊಘಲರ ಕಾಲದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ !’(ಅಂತೆ) – ನವಾಬ್ ಇಕ್ಬಾಲ್, ಮಾಜಿ ಶಿಕ್ಷಣ ಸಚಿವ

ಸಮಾಜವಾದಿ ಪಕ್ಷದ ಶಾಸಕ ಮತ್ತು ಉತ್ತರ ಪ್ರದೇಶದ ಮಾಜಿ ಮಾಧ್ಯಮಿಕ ಶಿಕ್ಷಣ ಸಚಿವ ನವಾಬ್ ಇಕ್ಬಾಲ್ ಮೆಹಮೂದ್ ಇವರು, “ಭಾಜಪ ಸರಕಾರವು ಮುಸ್ಲಿಂ ಸಮುದಾಯದ ವಿರುದ್ಧ ಏನು ಮಾಡಬಹುದೋ ಎಲ್ಲವನ್ನೂ ಮಾಡುತ್ತಿದೆ; ಆದರೆ ಪಠ್ಯಕ್ರಮ ಮಾತ್ರ ಇತಿಹಾಸದಿಂದ ತಗೆದು ಹಾಕಿದರೆ ಏನಾಗುತ್ತದೆ ? ಮೊಘಲರ ಕಾಲದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿತ್ತು, ಎಂಬುದನ್ನು ಮರೆಯಲು ಹೇಗೆ ಸಾಧ್ಯ ? ಭಾಜಪದಿಂದ ಕೇವಲ ಮತಗಳ ರಾಜಕೀಯಕ್ಕಾಗಿ ಈ ಕೆಲಸ ಮಾಡಲಾಗುತ್ತಿದೆ. ತಾಜ್ ಮಹಲ್, ಕೆಂಪು ಕೋಟೆ, ಕುತುಬ್ ಮಿನಾರ್ ಇತಿಹಾಸ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ಇಡೀ ಜಗತ್ತಿಗೆ ಈ ಇತಿಹಾಸ ತಿಳಿದಿದೆ.