ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ’

ಸೌ. ರಾಘವಿ ಕೊನೆಕರ

ಜೀವಾಮೃತವು ದೇಶಿ ಹಸುವಿನ ಸೆಗಣಿ, ಗೋಮೂತ್ರ, ಬೇಸನ್ ಮತ್ತು ಬೆಲ್ಲ ಇವುಗಳಿಂದ ತಯಾರಿಸಿದ ಒಂದು ಮಿಶ್ರಣವಾಗಿದೆ. ಗೃಹೋಪಯೋಗಿ ಕೈದೋಟಕ್ಕಾಗಿ ೫ ಲೀಟರ್ ಜೀವಾಮೃತವನ್ನು ಮಾಡುವುದಾದರೆ, ಅರ್ಧ ಬಟ್ಟಲು ಬೆಲ್ಲ ಮತ್ತು ಅರ್ಧ ಬಟ್ಟಲು ಬೇಸನ್ ಬೇಕಾಗುತ್ತದೆ. ಅವುಗಳ  ಪರ್ಯಾಯವನ್ನು ಕೆಳಗೆ ಕೊಡಲಾಗಿದೆ.

ಜೀವಾಮೃತವನ್ನು ತಯಾರಿಸುವಾಗ ಬೆಲ್ಲ ಮತ್ತು ಕಡಲೆಹಿಟ್ಟಿಗೆ (ಬೆಸನ್) ಪರ್ಯಾಯವಾಗಿ ಯಾವುದನ್ನು ಉಪಯೋಗಿಸಬೇಕು ?

೧. ಕಡಲೆಹಿಟ್ಟಿಗೆ (ಬೆಸನ್) ಪರ್ಯಾಯ

ಇಲ್ಲಿ ಕೇವಲ ಕಡಲೆಬೆಳೆಯೇ (ಬೆಸನ್) ಬೇಕು ಎಂದೇನಿಲ್ಲ. ಹೆಸರುಬೇಳೆ, ತೊಗರಿಬೇಳೆ, ಚನ್ನಂಗಿಬೇಳೆ, ಅಲಸಂಡೆ, ಇಂತಹ ಯಾವುದೇ ದ್ವಿದಳ ಧಾನ್ಯಗಳ ಹಿಟ್ಟನ್ನು ತೆಗೆದುಕೊಳ್ಳಬಹುದು. ಅಡುಗೆಮನೆಯಲ್ಲಿನ ಒಳ್ಳೆಯ ಬೆಸನ್ ಹಿಟ್ಟನ್ನು ತೆಗೆದುಕೊಳ್ಳುವ ಬದಲು ಬೇಳೆಗಳು, ದ್ವಿದಳಧಾನ್ಯಗಳನ್ನು ಆರಿಸುವಾಗ ಅವುಗಳಲ್ಲಿನ ತೂತು ಬಿದ್ದಿರುವ ಬೇಳೆ ಅಥವಾ ದ್ವಿದಳ ಧಾನ್ಯಗಳನ್ನು ಆರಿಸಿ ಬದಿಗೆ ತೆಗೆದು ಅವುಗಳನ್ನು ಸಂಗ್ರಹಿಸಿಡಬೇಕು. ಮಿಕ್ಸಿಯಲ್ಲಿ ಹಿಟ್ಟು ಮಾಡಲು ಬರುತ್ತದೆ. ಈ ಹಿಟ್ಟನ್ನು ಜೀವಾಮೃತಕ್ಕಾಗಿ ಬಳಸಬೇಕು.

೨. ಬೆಲ್ಲಕ್ಕೆ ಪರ್ಯಾಯ 

ಬೆಲ್ಲದ ಬದಲಾಗಿ ಅಷ್ಟೇ ಪ್ರಮಾಣದಲ್ಲಿ ಸಿಹಿ ಹಣ್ಣುಗಳನ್ನು ತೆಗೆದುಕೊಳ್ಳಬಹುದು. ಬಾಳೆಹಣ್ಣು, ಪಪ್ಪಾಯಿ, ಚಿಕ್ಕು, ಮಾವು, ಇಂತಹ ಸಿಹಿ ಹಣ್ಣುಗಳ ತಿರುಳನ್ನು ಉಪಯೋಗಿಸಬೇಕು. ಕೆಲವೊಮ್ಮೆ ಮನೆಯಲ್ಲಿ ತಂದಿರುವ ಈ ಹಣ್ಣುಗಳು ಹೆಚ್ಚು ಪ್ರಮಾಣದಲ್ಲಿ ಹಣ್ಣಾಗಿರುತ್ತವೆ ಹಾಗೂ ಮೆತ್ತಗಾಗುತ್ತವೆ.

ಇಂತಹ ಸಮಯದಲ್ಲಿ ಅವುಗಳ ತಿರುಳನ್ನು ಜೀವಾಮೃತವನ್ನು ಮಾಡಲು ಉಪಯೋಗಿಸಬೇಕು. ಕಬ್ಬಿನ ರಸವನ್ನು ಸಹ ಉಪಯೋಗಿಸಬಹುದು. ಅದನ್ನು ಬೆಲ್ಲದ ನಾಲ್ಕುಪಟ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು, ಉದಾ. ಅರ್ಧ ಬಟ್ಟಲು ಬೆಲ್ಲ ಇದ್ದರೆ, ೨ ಬಟ್ಟಲು ಕಬ್ಬಿನ ರಸವನ್ನು ತೆಗೆದುಕೊಳ್ಳಬೇಕು.’

ಸೌ. ರಾಘವೀ ಮಯುರೇಶ್ವರ ಕೊನೆಕರ, ಢವಳಿ, ಫೋಂಡಾ, ಗೋವಾ. (೮.೩.೨೦೨೩)

ನಿಮಗೆ ಈ ಲೇಖಮಾಲಿಕೆ ಹೇಗೆ ಎನಿಸಿತು, ಎಂಬುದನ್ನು ನಮಗೆ ತಿಳಿಸಿರಿ !

ವಿ-ಅಂಚೆ[email protected]