ದೆಹಲಿಯ ಜೆಹಂಗಿರಪುರಿಯಲ್ಲಿ ರಾಮಭಕ್ತರಿಂದ ಅನುಮತಿಯಿಲ್ಲದೆ ಶಾಂತಯುತವಾಗಿ ಮೆರವಣಿಗೆ !

ಕಾನೂನು ಹಾಗೂ ಸುವ್ಯವಸ್ಥೆಯ ಅಡಿಯಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು !

ನವ ದೆಹಲಿ – ದೆಹಲಿಯ ಮುಸ್ಲಿಂ ಬಹುಸಂಖ್ಯಾತ ಜಹಾಂಗೀರಪುರಿ ಪ್ರದೇಶದಲ್ಲಿ ಮಾರ್ಚ್ ೩೦ ರಂದು ರಾಮನವಮಿಯ ನಿಮಿತ್ತ ನಡೆಯಲಿರುವ ಮೆರವಣಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು; ಆದರೂ ಇಲ್ಲಿ ರಾಮ ಭಕ್ತರಿಂದ ಶಾಂತಿಯುತವಾಗಿ ಶೋಭಾಯಾತ್ರೆ ನಡೆಸಿದರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲೆಯಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡುತ್ತಾ ಅನುಮತಿ ನಿರಾಕರಿಸಿದ್ದರು. ಕಳೆದ ವರ್ಷ ಹನುಮಾನ ಜಯಂತಿಯಂದು ಇದೇ ಪ್ರದೇಶದ ಮಸೀದಿ ಬಳಿ ನಡೆದ ಶೋಭಾಯಾತ್ರೆಯ ಮೇಲೆ ಮುಸ್ಲಿಮರು ದಾಳಿ ನಡೆಸಿದ್ದರು.

ಸಂಪಾದಕೀಯ ನಿಲುವು

  • ಹಿಂದೂಗಳ ಧಾರ್ಮಿಕ ಮೆರವಣಿಗೆಗಳಲ್ಲಿ ಹಿಂದೂಗಳಿಂದಲ್ಲ, ಮತಾಂಧರಿಂದಲೇ ಯಾವಾಗಲೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನಗಳನ್ನು ಮಾಡಲಾಗುತ್ತದೆ; ಆದರೆ ಮತಾಂಧರ ಮೇಲೆ ಕಡಿವಾಣ ಹಾಕುವ ಬದಲು ಹಿಂದೂಗಳ ಮೇಲೆ ನಿರ್ಬಂಧಗಳನ್ನು ಹೇರಲಾಗುತ್ತದೆ, ಎಂಬುದನ್ನು ಗಮನಿಸಿ !
  • ಹಿಂದೂಗಳು ಯಾವಾಗಲೂ ಶಾಂತಿಯುತವಾಗಿ ಮೆರವಣಿಗೆ ನಡೆಸಿದರೂ ಪೊಲೀಸರು ನೇಮಿಸಿದ ಬಂದೋಬಸ್ತನಿಂದ ಮೆರವಣಿಗೆಯ ಮೇಲೆ ಮತಾಂಧರು ದಾಳಿ ಮಾಡಲಿಲ್ಲ, ಇದೆ ನೈಜಸ್ಥಿತಿ !