ಭೂಪಾಲ್ (ಮಧ್ಯಪ್ರದೇಶ)ನಲ್ಲಿ ಧ್ವನಿವರ್ಧಕದ ಕುರಿತು ದೇವಸ್ಥಾನದ ವ್ಯವಸ್ಥಾಪಕರಿಗೆ ಉಪವಿಭಾಗಾಧಿಕಾರಿಗಳಿಂದ ನೋಟಿಸ್ !

ಭೋಪಾಲ್ (ಮಧ್ಯಪ್ರದೇಶ) – ಅವಧಪುರಿ ಪ್ರದೇಶದಲ್ಲಿನ ದೇವಸ್ಥಾನಗಳಲ್ಲಿ ದೊಡ್ಡ ಧ್ವನಿಯಲ್ಲಿ ಧ್ವನಿವರ್ಧಕ ಹಾಕಿದ್ದರಿಂದ ಉಪವಿಭಾಗಾಧಿಕಾರಿ ರಾಜೇಶ್ ಗುಪ್ತಾ ಅವರು ದೇವಸ್ಥಾನದ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಿದ್ದು, ಭೋಂಗಾಗಳನ್ನು ತೆಗೆಯುವಂತೆ ಹೇಳಿದ್ದಾರೆ. ಹೀಗಾಗಿ ಕಳೆದ ೨ ದಿನಗಳಿಂದ ದೇವಸ್ಥಾನದಲ್ಲಿ ಭಜನೆ, ಕೀರ್ತನೆಗಳನ್ನು ಧ್ವನಿವರ್ಧಕನಿಂದ ಕೇಳಿಸುವುದು ನಿಂತಿದೆ. ಜನರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಉಪವಿಭಾಗಾಧಿಕಾರಿ ರಾಜೇಶ್ ಗುಪ್ತಾ ಇವರು, ದೇವಸ್ಥಾನದ ಬಳಿಯ ನಾಗರಿಕರು ಹಾಗೂ ಕಾರ್ಪೊರೇಟರ್ ಶಕ್ತಿ ರಾವ್ ಅವರು ಜಿಲ್ಲಾಧಿಕಾರಿ ಹಾಗೂ ನಮ್ಮ ಕಚೇರಿಗೆ ದೂರು ನೀಡಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನೂ ಉಲ್ಲಂಘಿಸಲಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಮಸೀದಿಯ ಬೊಂಗಾಗಳ ಕುರಿತು ದೂರುಸಲ್ಲಿಸಿದರೆ ಉಪವಿಭಾಗದ ಅಧಿಕಾರಿ ಹೀಗೆಯೇ ತ್ವರಿತತೆಯಿಂದ ಕೃತಿ ಮಾಡುವರೇ ?