ಭೂತಾನ ಪ್ರಧಾನ ಮಂತ್ರಿ ಚೀನಾದ ಪರ ವಹಿಸುವ ಪ್ರಯತ್ನ !
ಥಿಂಪೂ (ಭೂತಾನ) – ಡೋಕ್ಲಾಮ ವಿವಾದವನ್ನು ಬಗೆಹರಿಸುವಲ್ಲಿ ಚೀನಾದ ಪಾತ್ರವೂ ಸಮಾನ ಮಹತ್ವದ್ದಾಗಿದೆಯೆಂದು ಭೂತಾನ ಪ್ರಧಾನ ಮಂತ್ರಿ ಲೊಟೆ ಶೇರಿಂಗ ಇವರು ಒಂದು ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಹೇಳಿಕೆಯಿಂದ ಭೂತಾನ ಚೀನಾದ ಪರ ವಾಲುತ್ತಿದೆಯೆಂದು ಹೇಳಲಾಗುತ್ತಿದೆ. ಭೂತಾನ ಗಡಿಯಲ್ಲಿ ಚೀನಾ ನುಸುಳಿ 10 ಗ್ರಾಮಗಳನ್ನು ನಿರ್ಮಾಣ ಮಾಡಿದೆ. ಈ ಹಿಂದೆ ಪ್ರಸಾರವಾಗಿದ್ದ ಈ ಸುದ್ದಿಯನ್ನು ಭೂತಾನ ನಿರಾಕರಿಸಿತ್ತು. ಇದನ್ನು ಗಮನಿಸಿದಾಗ ಭೂತಾನ ಚೀನಾದೊಂದಿಗೆ ಸಾಮಿಪ್ಯವನ್ನು ಹೊಂದಿರುವುದು ಗಮನಕ್ಕೆ ಬರುತ್ತಿದೆ. ಡೊಕ್ಲಾಮ ಭಾಗವು ಭೂತಾನ ಗಡಿಯಲ್ಲಿದೆ.
Bhutan Prime Minister Lotay Tshering, in a recent interview, said he was open to a three-way resolution on the Doklam issue, and that Beijing has an equal say in finding a resolutionhttps://t.co/xkMWndxIHY
— WION (@WIONews) March 29, 2023
1. ಈ ಸಂದರ್ಶನದಲ್ಲಿ ಪ್ರಧಾನಮಂತ್ರಿ ಶೇರಿಂಗ ಮಾತು ಮುಂದುವರೆಸಿ, ಸಮಸ್ಯೆಯನ್ನು ನಿವಾರಿಸುವುದು ಕೇವಲ ಭೂತಾನ ಕೈಯಲ್ಲಿಲ್ಲ. ಇದರಲ್ಲಿ ಮೂರು ದೇಶಗಳ ಪಾತ್ರವೂ ಇದೆ. ಇಲ್ಲಿ ಯಾರೂ ದೊಡ್ಡವರು ಅಥವಾ ಸಣ್ಣವರು ಅಲ್ಲ. ಮೂವರೂ ಸಮಾನರಾಗಿದ್ದಾರೆ. ಮತ್ತು ಒಂದು ತೃತೀಯಾಂಶ ಸಹಭಾಗಿತ್ವ ಮೂವರದೂ ಇದೆಯೆಂದು ಹೇಳಿದರು.
2. ಚೀನಾವು ಡೋಕ್ಲಾಮ ಹತ್ತಿರದ ಭೂತಾನ ಗಡಿಯಲ್ಲಿ ಗ್ರಾಮ ನಿರ್ಮಿಸಿ ರಸ್ತೆಗಳನ್ನು ನಿರ್ಮಾಣ ಮಾಡಿದೆ. ಇದರಿಂದ ಭಾರತಕ್ಕೆ ಈ ಕ್ಷೇತ್ರದಲ್ಲಿ ಸಂರಕ್ಷಣೆಯ ದೃಷ್ಟಿಯಿಂದ ಸವಾಲಾಗಿ ಪರಿಣಮಿಸಿದೆ. ಭಾರತ ಡೊಕ್ಲಾಮ ಪ್ರದೇಶದಲ್ಲಿ ಚೀನಾದ ಹೆಚ್ಚುತ್ತಿರುವ ವಿಸ್ತರಣಾವಾದಿ ಧೋರಣೆಯನ್ನು ವಿರೋಧಿಸುತ್ತಲೇ ಬಂದಿದೆ. ಡೊಕ್ಲಾಮ ಇದು ಭೂತಾನ ದೇಶದ ಭಾಗವಾಗಿದ್ದು, ಭಾರತ ಅನೇಕ ದಶಕಗಳಿಂದ ಭೂತಾನ ದೇಶವನ್ನು ಸೈನ್ಯದ ಹಂತದಲ್ಲಿ ರಕ್ಷಣೆ ಮಾಡುತ್ತಿದೆ. 2017 ರಲ್ಲಿ ಡೋಕ್ಲಾಮನಲ್ಲಿ ಚೀನಾ ಮತ್ತು ಭಾರತ ಸೈನಿಕರು 2 ತಿಂಗಳವರೆಗೆ ಎದುರುಬದರು ನಿಂತಿದ್ದರು. ಚೀನಾ ಇಲ್ಲಿ ಅನಧಿಕೃತವಾಗಿ ರಸ್ತೆಯ ನಿರ್ಮಾಣ ಮಾಡುತ್ತಿದ್ದಾಗ ಭಾರತ ಅದನ್ನು ವಿರೋಧಿಸಿತ್ತು.
ಸಂಪಾದಕೀಯ ನಿಲುವುಭಾರತದ ವಿದೇಶಾಂಗ ನೀತಿಯಲ್ಲಿ ಏನಾದರೂ ತಪ್ಪಾಗುತ್ತಿದೆಯೇ ಅಥವಾ ಚೀನಾ ಹೆಚ್ಚು ಪ್ರಭಾವಶಾಲಿಯಾಗುತ್ತಿದೆಯೇ ? ಎಂದು ವಿಚಾರ ಮಾಡುವುದು ಆವಶ್ಯಕವಾಗಿದೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ ! |