ದೆಹಲಿಯಲ್ಲಿನ ಮುಸಲ್ಮಾನ ಬಹುಸಂಖ್ಯಾತ ಜಹಾಂಗೀರಪುರಿಯ ಪ್ರದೇಶದಲ್ಲಿ ರಾಮನವಮಿಯ ಶೋಭಾಯಾತ್ರೆಗೆ ಪೊಲೀಸರಿಂದ ನಿರಾಕರಣೆ !

ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗಬಾರದೆಂದು, ದೆಹಲಿ ಪೋಲಿಸರಿಂದ ಈ ನಿರ್ಣಯ !

ಸಾಂದರ್ಭಿಕ ಚಿತ್ರ

ನವದೆಹಲಿ – ದೆಹಲಿ ಪೊಲೀಸರು ಉತ್ತರ ಪಶ್ಚಿಮ ದೆಹಲಿಯಲ್ಲಿನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶವಾಗಿರುವ ಜಹಾಂಗೀರಪುರಿಯಲ್ಲಿ ರಾಮನವಮಿಯ ಪ್ರಯುಕ್ತ ‘ಶ್ರೀರಾಮ ಭಗವಾನ್ ಪ್ರತಿಮಾ ಯಾತ್ರ’ ಆಯೋಜಿಸಲು ಕೋರಿದ್ದ ಅನುಮತಿಯನ್ನು ನಿರಾಕರಿಸಿದ್ದಾರೆ. ಸಹಾಯಕ ಪೊಲೀಸ ಆಯುಕ್ತರು ನೀಡಿರುವ ಲಿಖಿತ ಆದೇಶದಲ್ಲಿ, ಕಾನೂನು ಮತ್ತು ಸುವ್ಯಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಶೋಭಾಯಾತ್ರೆಗೆ ಅನುಮತಿ ನೀಡಲಾಗುವುದಿಲ್ಲ.

(ಸೌಜನ್ಯ : TV9 Bharatvarsh)

ಈ ಪ್ರದೇಶದಲ್ಲಿ ಕಳೆದ ವರ್ಷ ಏಪ್ರಿಲ್ ೧೬ ರಂದು ಹನುಮಾನ ಜಯಂತಿಯ ಶೋಭಾಯಾತ್ರೆಯ ಸಮಯದಲ್ಲಿ ಹಿಂಸಾಚಾರ ನಡೆದಿತ್ತು ಎಂದು ಹೇಳಿದರು. ಓರ್ವ ಹಿರಿಯ ಅಧಿಕಾರಿಯು, ರಮಜಾನ ಪ್ರಯುಕ್ತ ನೇತಾಜಿ ಸುಭಾಷ್ ಪ್ಲೇಸ್ ನ ಪಾರ್ಕ್ ನಲ್ಲಿ ನಮಾಜ್ ಮಾಡಲು ಕೂಡ ಅನುಮತಿ ನೀಡಿರಲಿಲ್ಲ ಎಂದು ಹೇಳಿದರು.

ಕಳೆದ ವರ್ಷ ಹನುಮಾನ ಜಯಂತಿಯ ಸಮಯದಲ್ಲಿ ಮತಾಂಧ ಮುಸಲ್ಮಾನರು ಗಲಭೆ ನಡೆಸಿದ್ದರು !

ಕಳೆದ ವರ್ಷ ಏಪ್ರಿಲ್ ೧೬ ರಂದು ಹನುಮಾನ ಜಯಂತಿಯ ಶೋಭಾಯಾತ್ರೆಯು ಜಹಾಂಗೀರಪುರಿ ಇಲ್ಲಿಯ ಜಾಮಾ ಮಸೀದಿಯ ಎದುರಿನಿಂದ ಶಾಂತಿಯುತವಾಗಿ ಹೋಗುವಾಗ ಅನ್ಸಾರ ಶೇಕ್ ಮತ್ತು ಅವನ ಮತಾಂಧ ಮುಸಲ್ಮಾನ ಸಹಚರರು ಇದ್ದಕ್ಕಿದ್ದಂತೆ ಶೋಭಾಯಾತ್ರೆಯನ್ನು ನಿಲ್ಲಿಸಿ ವಾದ ಆರಂಭಿಸಿದರು. ನಂತರ ಶೋಭಾಯಾತ್ರೆಯ ಮೇಲೆ ಕಲ್ಲು ತೂರಾಟ ಪ್ರಾರಂಭವಾಯಿತು. ಅದರಿಂದ ಘಟನಾ ಸ್ಥಳದಲ್ಲಿ ನೂಕುನೂಕಲು ನಡೆಯಿತು. ಮತಾಂಧರು ಹಿಂದೂ ಭಕ್ತರ ಮೇಲೆ ಕಲ್ಲು ತೂರಾಟದ ಜೊತೆಗೆ ಗಾಜಿನ ಬಾಟಲಿಗಳೂ ಸಹ ಎಸೆಯುತ್ತಿದ್ದರು. ಪೊಲೀಸರು ಮಧ್ಯಸ್ಥಿಕೆ ವಹಿಸುವ ಪ್ರಯತ್ನ ಮಾಡುವಾಗ ಮತಾಂಧ ಮುಸಲ್ಮಾನರು ವಾಹನಗಳಿಗೆ ಬೆಂಕಿ ಹಚ್ಚಲು ಆರಂಭಿಸಿದರು. ಆ ಸಮಯದಲ್ಲಿನ ಹಿಂಸಾಚಾರದಲ್ಲಿ ೮ ಪೊಲೀಸ ಸಿಬ್ಬಂದಿ ಸಹಿತ ಓರ್ವ ನಾಗರೀಕನು ಗಾಯಗೊಂಡನು. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಯಿತು, ಅದರಲ್ಲಿ ಸೋನು ಚಿಕನಾ ಹೆಸರಿನ ಒಬ್ಬ ಮತಾಂಧ ಮುಸಲ್ಮಾನನು ಶೋಭಾಯಾತ್ರೆಯ ಮೇಲೆ ಗುಂಡು ಹಾರಿಸುತ್ತಿರುವುದು ಕಾಣುತ್ತಿತ್ತು.

ಸಂಪಾದಕೀಯ ನಿಲುವು

ಹಿಂದೂಗಳ ಉತ್ಸವದ ಮೇಲೆ ಮತಾಂಧ ಮುಸಲ್ಮಾನರು ದಾಳಿ ಮಾಡುತ್ತಾರೆ. ಇದು ಸ್ವಾತಂತ್ರ್ಯನಂತರದ ಭಾರತದ ಇತಿಹಾಸಯಾಗಿರುವಾಗ ಮತಾಂಧರ ಮೇಲೆ ಕಡಿವಾಣ ತರುವ ಬದಲು ಹಿಂದೂಗಳ ಉತ್ಸವಗಳನ್ನು ನಿರ್ಬಂಧಿಸುವುದು ಎಂದರೆ ಇದು ಭಾರತವೋ ಅಥವಾ ಪಾಕಿಸ್ತಾನವೋ ?

ಜಾತ್ಯತೀತ ಎನ್ನಿಸಿಕೊಳ್ಳುವ ದೇಶದ ರಾಜಧಾನಿಯಲ್ಲೇ ಈ ಪರಿಸ್ಥಿತಿ ಇದೆ ಎಂದರೆ ಇತರ ಪ್ರದೇಶಗಳ ವಿಚಾರ ಮಾಡದೆ ಇರುವುದೇ ಒಳಿತು !

ದೆಹಲಿ ಪೊಲೀಸ ಇಲಾಖೆ ಕೇಂದ್ರ ಸರಕಾರದ ಅಧೀನದಲ್ಲಿರುವಾಗ ಈ ರೀತಿಯ ಸರ್ವಾಧಿಕಾರಿ ಆದೇಶ ನೀಡುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !