ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಹಿಂಸಾಚಾರ ಪ್ರಕರಣದಲ್ಲಿ 9 ಧರ್ಮಾಂಧ ಮುಸಲ್ಮಾನರ ವಿರುದ್ಧ ದೋಷಾರೋಪ ಪಟ್ಟಿ !

ಶರ್ಜೀಲ್ ಇಮಾಮ್, ಸಫೂರಾ ಝರ್ಗರ್, ಆಸಿಫ್ ಇಕ್ಬಾಲ್ ತನ್ಹಾ

ನವ ದೆಹಲಿ – 2019 ರಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮುಂದೆ ನಡೆದ ಹಿಂಸಾಚಾರದ ಪ್ರಕರಣದಲ್ಲಿ, ದೆಹಲಿ ಉಚ್ಚ ನ್ಯಾಯಾಲಯವು ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ತಪ್ಪು ಎಂದು ಹೇಳಿ 11 ಆರೋಪಿಗಳಲ್ಲಿ 9 ಆರೋಪಿಗಳ ವಿರುದ್ಧ ಆರೋಪ ಹೊರಿಸಿದೆ. ವಿಡಿಯೋದಲ್ಲಿ ಗುಂಪಿನ ಮೊದಲ ಸಾಲಿನಲ್ಲಿದ್ದ ಜನರು ದೆಹಲಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಮತ್ತು ’ಬ್ಯಾರಿಕೇಡ್’ ಅನ್ನು ತಳ್ಳಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ, ಎಂಬುದನ್ನು ಉಚ್ಚ ನ್ಯಾಯಾಲಯವು ಗಮನಿಸಿದೆ.

ಈ ಕಾರಣದಿಂದಾಗಿ, ಶಾರ್ಜೀಲ್ ಇಮಾಮ್, ಸಫೂರಾ ಜರ್ಗರ್ ಮತ್ತು ಆಸಿಫ್ ಇಕ್ಬಾಲ್ ಸೇರಿದಂತೆ 9 ಜನರನ್ನು ಆರೋಪಿಗಳೆಂದು ನಿರ್ಧರಿಸಲಾಗಿದೆ. ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ತೀರ್ಪು ನೀಡುತ್ತಾ, ಶಾಂತಿಯುತವಾಗಿ ಜನರನ್ನು ಒಟ್ಟುಗೂಡಿಸುವ ಅಧಿಕಾರದಲ್ಲಿ ಹಿಂಸೆ ಅಥವಾ ಹಿಂಸೆಯನ್ನು ಪ್ರಚೋದಿಸುವ ಭಾಷಣಗಳನ್ನು ನೀಡುವುದು ಒಳಗೊಂಡಿಲ್ಲ ಎಂದು ಹೇಳಿದರು !

ಏನಿದು ಪ್ರಕರಣ ?

2019 ರಲ್ಲಿ, ಪೌರತ್ವ ಸಮೀಕ್ಷೆ ಮಸೂದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕಾಯ್ದೆಯ ವಿರುದ್ಧ, ಕೆಲವು ಮತಾಂಧ ಮುಸ್ಲಿಮರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೊರಗೆ ಹಿಂಸಾಚಾರ ಮಾಡಿದ್ದರು ಮತ್ತು ವಿಶ್ವವಿದ್ಯಾಲಯವನ್ನು ಪ್ರವೇಶಿಸಲು ಪ್ರಯತ್ನಿಸಿದರು. ಈ ವೇಳೆ 12 ಮಂದಿಯನ್ನು ಬಂಧಿಸಲಾಗಿತ್ತು.