ಶೀಘ್ರವಾಗಿ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಯಾಗಬೇಕೆಂಬ ಕೋರಿಕೆಯ ಅರ್ಜಿಯನ್ನು ರದ್ದುಗೊಳಿಸಿದ ಮಥುರಾ ನ್ಯಾಯಲಯ !

ಶ್ರೀ ಕೃಷ್ಣ ಜನ್ಮಭೂಮಿ

ಮಥುರಾ (ಉತ್ತರಪ್ರದೇಶ) – ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳವಾದ ಶಾಹಿ ಈದ್ಗಾ ಮಸೀದಿಯ ಶೀಘ್ರವಾಗಿ ಸಮೀಕ್ಷೆ ಮಾಡಬೇಕೆಂಬ ಕೋರಿಕೆಯ ಹಿಂದೂ ಪಕ್ಷದ ಅರ್ಜಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯವು ವಜಾಗೊಳಿಸಿದೆ. ಈ ಸಂದರ್ಭದಲ್ಲಿ ಹಿಂದೂ ಪಕ್ಷವಾದ ಹಿಂದೂ ಮಹಾಸಭಾದ ಪ್ರತಿನಿಧಿಯೊಬ್ಬರು ಲಡ್ಡು ಗೋಪಾಲನ (ಭಗವಾನ್ ಶ್ರೀಕೃಷ್ಣ) ಮೂರ್ತಿಯೊಂದಿಗೆ ಹಾಜರಿದ್ದರು, ಆದರೆ ಸುನ್ನಿ ವಕ್ಫ್ ಬೋರ್ಡ್ ಹಾಜರಾಗಲು ಪದೇ ಪದೇ ಹೇಳಿಯೂೂ ಈ ಬಾರಿಯೂ ನ್ಯಾಯಾಲಯಕ್ಕೆ ಹಾಜರಿಲ್ಲದ ಕಾರಣ ಕೊನೆಯ ಅವಕಾಶ ನೀಡಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

1. ಮಾರ್ಚ್ 27 ರಂದು ನಡೆದ ವಿಚಾರಣೆಯಲ್ಲಿ ಮಹಾಸಭಾದ ಖಜಾಂಚಿ ದಿನೇಶ್ ಶರ್ಮಾ ಅವರು ನ್ಯಾಯಾಲಯದಲ್ಲಿ, ಔರಂಗಜೇಬ್ ನು ದೇವಾಲಯವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಿದ. ಆದ್ದರಿಂದಈ ಮಸೀದಿಯಿಂದ ಶ್ರೀ ಕೃಷ್ಣನ ಜನ್ಮಸ್ಥಳದ ಭೂಮಿಯ ಮೇಲಿನ ಅತಿಕ್ರಮಣವಾಗಿದೆ. 13.37 ಎಕರೆಯಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ತಿಳಿಸಿದರು.

2. ಈ ಪ್ರಕರಣದಲ್ಲಿ ಒಟ್ಟು 6 ಅರ್ಜಿಗಳು ದಾಖಲಾಗಿದ್ದು, ಮುಂದಿನ ವಿಚಾರಣೆ ಏಪ್ರಿಲ್ 28 ರಂದು ನಡೆಯಲಿದೆ.

3. ಮೂಲತಃ, ಸೆಷನ್ ಕೋರ್ಟ್ ಮಸೀದಿಯ ಸಮೀಕ್ಷೆಯನ್ನು ವಿರೋಧಿಸಿದೆ. ಸದ್ಯ ಅಲ್ಲಿ ಆಲಿಕೆ ಪೂರ್ಣಗೊಂಡಿಲ್ಲ. ಹಾಗಾಗಿ ಸಮೀಕ್ಷೆ ನಡೆಸುವ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಮಥುರಾ ಕೋರ್ಟ್ ಹೇಳಿದೆ.

4. ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸದ ಅಧ್ಯಕ್ಷ ಮಹೇಂದ್ರ ಪ್ರತಾಪ್ ಸಿಂಗ್ ಅವರು ನ್ಯಾಯಾಂಗ ಆಯುಕ್ತರ ನೇಮಕಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು. ಅವರು, ವಿರೋಧ ಪಕ್ಷದವರು ದೇವಾಲಯದ ಅವಶೇಷಗಳನ್ನು ಧ್ವಂಸ ಮಾಡುತ್ತಿದ್ದಾರೆ ಎಂದರು.