ಕೇರಳದ ತಿರುಮಂಧಮಕುನ್ನು ಭಗವತಿ ದೇವಸ್ಥಾನದ ಸಮಿತಿಯಲ್ಲಿ ಮುಸಲ್ಮಾನರ ನೇಮಿಸಿದ ಕುರಿತು ಉಚ್ಚನ್ಯಾಯಾಲಯದಲ್ಲಿ ಅರ್ಜಿ !

ತಿರುವನಂತಪುರಂ (ಕೇರಳ) – ಕೇರಳದ ಉಚ್ಚ ನ್ಯಾಯಾಲಯವು ರಾಜ್ಯದ ಮಲಪ್ಪುರಂನ ಅಂಗದಿಪುರಂನಲ್ಲಿರುವ ಪ್ರಸಿದ್ಧ ತಿರುಮಂಧಮಕುನ್ನು ಭಗವತಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಕೇರಳ ಉಚ್ಚನ್ಯಾಯಲಯವು ಸ್ವೀಕರಿಸಿದೆ. ದೇವಸ್ಥಾನದ ಮಹೋತ್ಸವಕ್ಕಾಗಿ ರಚಿಸಲಾಗಿದ್ದ ‘ಪೂರಂ ಆಯೋಜನಾ ಸಮಿತಿಯ ಪ್ರಮುಖ ಹುದ್ದೆಗಳಿಗೆ ಮುಸಲ್ಮಾನರನ್ನು ನೇಮಕಾತಿಯನ್ನು ಪ್ರಶ್ನಿಸಿ ‘ಹಿಂದೂ ಐಕ್ಯ ವೇದಿ’ಯು ಈ ಅರ್ಜಿ ದಾಖಲಿಸಿದೆ. ದೇವಸ್ಥಾನದ ಉತ್ಸವವು ಮಾರ್ಚ್ ೨೮ ರಿಂದ ಏಪ್ರಿಲ್ ೭ ರವರೆಗೆ ನಡೆಯಲಿದೆ.

೧. ಸ್ಥಳಿಯ ಪ್ರಸಾರ ಮಾಧ್ಯಮಗಳು ನೀಡಿದ ಮಾಹಿತಿಯನುಸಾರ, ‘ಇಂಡಿಯನ್ ಮುಸ್ಲಿಂ ಲೀಗ್’ ನ ಸಾಂಸದ ಅಬ್ದುಸ್ಮಮದ್ ಸಮದಾನಿ ಇವರು ಈ ಸಮಿತಿಯ ಮುಖ್ಯ ಸಂರಕ್ಷಕರಾಗಿದ್ದೂ ಸಮಿತಿಯವು ಇದೇ ಲೀಗ್ ನ ಶಾಸಕ ಮಂಜಲಮಕುಜಿ ಅಲಿ ಆಗಿದ್ದಾರೆ.

೨. ‘ವರ್ಡಿಕ್ಟಮ್’ ಈ ಕಾನೂನಿನ ವಿಷಯದ ಮಾಹಿತಿಯನ್ನು ಪ್ರಸಾರ ಮಾಡುವ ‘ಹಿಂದೂ ಐಕ್ಯ ವೇದಿ’ಯ ಸಚಿವ ಪಿ.ವಿ. ಮುರಲಿಧರನ್ ಇವರು, ಉತ್ಸವ ಸಮಿತಿಯ ಸ್ಥಾಪನೆ ದೇವಸ್ವಂ ಬೋರ್ಡ್‌ನ ನಿಯಮಗಳ ಮಾಡಲಾಗಿದೆ. ಬೋರ್ಡ್ ಪ್ರಕಾರ ಸಮಿತಿಯ ಮಹತ್ವದ ಹುದ್ದೆಯಲ್ಲಿ ಕೇವಲ ಹಿಂದೂಗಳನ್ನೇ ನೇಮಕ ಮಾಡಬಹುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಮುಸಲ್ಮಾನ ಅಥವಾ ಕ್ರೈಸ್ತರ ಪ್ರಾರ್ಥನೆ ಸ್ಥಳಗಳಿಗೆ ಹಿಂದೂಗಳನ್ನು ನೇಮಿಸಿರುವುದು ಎಂದಾದರು ಕೇಳಿದ್ದೀರಾ ?
  • ಮೂಲತಃ ಹಿಂದೂಗಳಲ್ಲೇ ಧರ್ಮಾಭಿಮಾನವಿಲ್ಲದ ಕಾರಣ ಇಂತಹ ಘಟಣೆಗಳು ಘಟಿಸುತ್ತಿವೆ. ಎಂಬುದನ್ನು ತಿಳಿಯಿರಿ !