ಬ್ರಿಟನ್ ನ ಹಿಂದೂಗಳು ಅತ್ಯಧಿಕ ಆರೋಗ್ಯವಂತರು ಮತ್ತು ಸುಶಿಕ್ಷಿತರು !

ಜನಗಣತಿಯಿಂದ ಮಾಹಿತಿ ಬಹಿರಂಗ !

ಬ್ರಿಟನ್ ನಲ್ಲಿ ನಡೆಸಲಾದ ಆನ್ ಲೈನ್ ಜನಗಣತಿಯಲ್ಲಿ ಹಿಂದೂಗಳು ಅತ್ಯಂತ ಆರೋಗ್ಯವಂತರು ಮತ್ತು ಸುಶಿಕ್ಷಿತರು

ಲಂಡನ(ಬ್ರಿಟನ) – ಬ್ರಿಟನ್ ನಲ್ಲಿ ಮಾರ್ಚ ೨೦೨೧ ರಲ್ಲಿ ನಡೆಸಲಾದ ಆನ್ ಲೈನ್ ಜನಗಣತಿಯಲ್ಲಿ ಹಿಂದೂ ಧರ್ಮಿಯರು ಅತ್ಯಂತ ಆರೋಗ್ಯವಂತರು ಮತ್ತು ಸುಶಿಕ್ಷಿತ ಧಾರ್ಮಿಕ ಸಮೂಹಗಳಲ್ಲಿ ಒಂದಾಗಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಈ ಜನಗಣತಿಯಲ್ಲಿ ಶೇ. ೮೭.೮ ರಷ್ಟು ಹಿಂದೂ ಧರ್ಮದವರು ‘ಅತ್ಯಂತ ಉತ್ತಮ’ ಅಥವಾ ‘ಉತ್ತಮ’ ಆರೋಗ್ಯ ಹೊಂದಿದ್ದಾರೆಂದು ನಮೂದಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಮಾಣ ಶೇ. ೮೨ ರಷ್ಟು ಇದೆ. ಇದರೊಂದಿಗೆ ಹಿಂದೂಗಳಲ್ಲಿ ಶಾರೀರಿಕ ಅಂಗವಿಕಲತೆ ಹೊಂದಿರುವ ಪ್ರಮಾಣವೂ ಅತ್ಯಂತ ಕಡಿಮೆಯಾಗಿದೆಯೆಂದು ನೊಂದಾಯಿಸಲಾಗಿದೆ. ದೇಶದ ಜನಸಂಖ್ಯೆಯಲ್ಲಿರುವ ವಿವಿಧ ಸಮೂಹಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಲು ಜನಗಣತಿಯ ಅಂಕಿ-ಅಂಶಗಳ ವಿಶ್ಲೇಷಣೆಯನ್ನು ಮಾಡಲಾಗುತ್ತಿದೆ. ಈ ಜನಗಣತಿಯಲ್ಲಿ ಕೇಳಲಾಗಿದ್ದ ಧಾರ್ಮಿಕ ಪ್ರಶ್ನೆ ಐಚ್ಛಿಕವಾಗಿದ್ದು, ೨೦೨೧ ರಲ್ಲಿ ನಡೆದ ಜನಗಣತಿಯಲ್ಲಿ ಬ್ರಿಟನ್ ನ ಶೇ. ೯೪ರಷ್ಟು ನಾಗರೀಕರು ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

೧. ಬ್ರಿಟನ್‌ನಲ್ಲಿರುವ ಹಿಂದೂಗಳು ರಾಷ್ಟ್ರೀಯ ಜನಸಂಖ್ಯೆಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ. ಬ್ರಿಟನ್‌ನಲ್ಲಿ ಉನ್ನತ ಮಟ್ಟದ ಶಿಕ್ಷಣವು ‘ಹಂತ ೮’ ರಷ್ಟು ಇದೆ. ಶೇ. ೫೪.೮ ರಷ್ಟು ಹಿಂದೂಗಳು ‘ಹಂತ ೪’ ಮತ್ತು ಅದಕ್ಕಿಂತ ಹೆಚ್ಚಿನ (ಪ್ರಮಾಣಪತ್ರ ಮಟ್ಟ) ಶಿಕ್ಷಣವನ್ನು ಪಡೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇದೇ ಅನುಪಾತ ಶೇ.೩೩.೮ರಷ್ಟಿದೆ.

೨. ಬ್ರಿಟನ್‌ನಲ್ಲಿ ಸಿಖ್ ಸಮುದಾಯವನ್ನು ಪ್ರಬಲ ಗುಂಪಿನಲ್ಲಿ ಎಣಿಸಲಾಗಿದೆ ಎಂದು ಜನಗಣತಿ ತೋರಿಸುತ್ತದೆ. ಸ್ವಂತ ಮನೆ ಹೊಂದಿರುವವರಲ್ಲಿ ಸಿಖ್ಖರು ಪ್ರಮುಖರಾಗಿದ್ದಾರೆ.

ಸಂಪಾದಕೀಯ ನಿಲುವು

ಬ್ರಿಟನ್ನಿನಲ್ಲಿರುವ ಹಿಂದೂ ಸಮಾಜ ಅತ್ಯಧಿಕ ಸುಶಿಕ್ಷಿತರಾಗಿದ್ದು, ದೇಶದ ಉನ್ನತಿಗಾಗಿ ಅಲ್ಲಿರುವ ಹಿಂದೂಗಳ ಕೊಡುಗೆಯೂ ಗಮನಾರ್ಹವಾಗಿದೆ. ಹೀಗಿರುವಾಗಲೂ ಬ್ರಿಟನ್ ನ ಹಿಂದೂಗಳ ಮೇಲೆ ಅಲ್ಲಿರುವ ಮತಾಂಧ ಮುಸಲ್ಮಾನರು ದಾಳಿ ಮಾಡಿ ಅವರನ್ನು ಥಳಿಸುತ್ತಿದ್ದಾರೆ ಮತ್ತು ಅಲ್ಲಿಯ ಸರಕಾರ, ಪೊಲೀಸರು ಮತ್ತು ಆಡಳಿತವು ಕಣ್ಣುಮುಚ್ಚಿ ಕುಳಿತಿರುವುದು ಖೇದಕರವಾಗಿದೆ !