ನೆದರಲ್ಯಾಂಡ್ ಶಾಸಕ ವಿಲ್ಡರ್ಸ ಇವರ ಹತ್ಯೆಗೆ ಫತ್ವಾ

ಪಾಕಿಸ್ತಾನದ ‘ತೆಹರಿಕ ಲಬ್ಬೈಕ ಯಾ ರಸೂಲ ಅಲ್ಲಾ’ ಈ ಕಟ್ಟರವಾದಿ ಮುಸ್ಲಿಂ ರಾಜಕೀಯ ಪಕ್ಷದ ಸಂಸ್ಥಾಪಕನಿಂದ ಫತ್ವಾ ಜಾರಿ !

ನೆದರಲ್ಯಾಂಡ್ ಶಾಸಕ ಗೀರ್ಟ್ ವಿಲ್ಡರ್ಸ

ಆಮಸ್ಟರಡ್ಯಾಂ (ನೆದರಲ್ಯಾಂಡ) – ನಮ್ಮ ಫತ್ವಾ ಅಂತಿಮ, ಈ ರೀತಿ ನನ್ನ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ನನ್ನನ್ನು ಕೊಲ್ಲುವಂತೆ ಮುಸ್ಲಿಮರಿಗೆ ಕರೆ ನೀಡಿದ್ದಾನೆ. ಈ ಕೃತ್ಯವನ್ನು ಯಾವುದೇ ಮುಸಲ್ಮಾನರೂ ತಪ್ಪಿತಸ್ಥರೆಂದು ಭಾವಿಸಬಾರದು ಎಂದು ಅವರು ಹೇಳುತ್ತಾರೆ. ಇದು ಭಯಾನಕ ಭಯೋತ್ಪಾದನೆ ಎಂದು ನೆದರ್ಲೆಂಡ್ಸ್‌ನ ರಾಜಕೀಯ ಪಕ್ಷದ ‘ಪಾರ್ಟಿ ಫಾರ್ ಫ್ರೀಡಂ’ ಸಂಸ್ಥಾಪಕ ಹಾಗೂ ಕಟ್ಟರವಾದಿ ಮುಸ್ಲಿಮರ ನೈಜ ಸ್ವರೂಪವನ್ನು ಜಗತ್ತಿಗೆ ಸಾರಿದ ಸಂಸದ ಗೀರ್ಟ್ ವಿಲ್ಡರ್ಸ ಟ್ವೀಟ್ ಮಾಡಿದ್ದಾರೆ.

ವಿಲ್ಡರ್ಸ ಇವರು ಟ್ವೀಟ್ ನೊಂದಿಗೆ ಬೆದರಿಕೆ ಹಾಕಿರುವ ಮುಸಲ್ಮಾನ ಡಾ. ಮಹಮ್ಮದ ಅಶ್ರಫ ಆಸಿಫ ಜಲಾಲಿಯ ಹೇಳಿಕೆಯ ‘ಸ್ಕ್ರೀನ ಶಾಟ್’ ಜೋಡಿಸಿದ್ದಾರೆ. ಅದರಲ್ಲಿ ಡಾ. ಮಹಮ್ಮದನು ವಿಲ್ಡರ್ಸರನ್ನು ಉದ್ದೇಶಿಸಿ, ‘ವಿಲ್ಡರ್ಸರನ್ನು ಹತ್ಯೆ ಮಾಡುವಾಗ ಅವರು ಎಷ್ಟು ಕೂಗುತ್ತಾರೆ, ಅದರಿಂದ ನನಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ನಾವು ಅವರ ಕಾರಣದಿಂದ ಜಾಗತಿಕ ಶಾಂತಿ ನಷ್ಟಗೊಳ್ಳಲು ಬಿಡುವುದಿಲ್ಲ !’ ಎಂದು ಹೇಳಿದ್ದಾನೆ. ಫತ್ವಾ ಜಾರಿಗೊಳಿಸಿರುವ ಡಾ. ಮಹಮ್ಮದ ಅಶ್ರಫ ಆಸಿಫ್ ಜಲಾಲಿ ಪಾಕಿಸ್ತಾನದ ‘ತೆಹರಿಕ ಲಬ್ಬೈಕ ಯಾ ರಸೂಲ ಅಲ್ಲಾ’ ಈ ಕಟ್ಟರ ಮುಸ್ಲಿಂ ರಾಜಕೀಯ ಪಕ್ಷದ ಸಂಸ್ಥಾಪಕನಾಗಿದ್ದಾನೆ.