ಸಾಮಾಜಿಕ ಮಾಧ್ಯಮಗಳ ವಿರುದ್ಧ ಅಮೇರಿಕಾದ ಶೈಕ್ಷಣಿಕ ಸಂಸ್ಥೆಯ ಅರ್ಜಿ
ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾದ ‘ಸನ್ ಮೆಟೊ ಕೌಂಟಿ ಬೋರ್ಡ ಆಫ್ ಎಜ್ಯುಕೇಶನ್’ ಈ ಶೈಕ್ಷಣಿಕ ಸಂಸ್ಥೆಯು ಸಾಮಾಜಿಕ ಮಾಧ್ಯಮಗಳಾದ ಫೇಸಬುಕ್, ಇನ್ಸ್ಟಾಗ್ರಾಮ್, ಟಿಕ್ ಟಾಕ್ ಹಾಗೂ ಗೂಗಲ ಮತ್ತು ಸ್ನ್ಯಾಪ್ ಚಾಟ್‌ಗಳ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದೆ. ಈ ಮಾಧ್ಯಮಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆಯೆಂದು ಈ ಅರ್ಜಿಯಲ್ಲಿ ಹೇಳಲಾಗಿದೆ. ‘ಮಕ್ಕಳು ನಿರಂತರವಾಗಿ ಈ ಮಾಧ್ಯಮಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ಅದರಿಂದ ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’, ಎಂದು ಇದರಲ್ಲಿ ಹೇಳಲಾಗಿದೆ.
ಈ ಸಂದರ್ಭದಲ್ಲಿ ಫೇಸಬುಕ್ ಸಂಸ್ಥೆಯ ‘ಮೆಟಾ’ದ ಅಧಿಕಾರಿ ಆಂಟಿಗೋನ್ ಡೆವಿಸ್ ಇವರು ಮಾತನಾಡುತ್ತಾ, ಯಾವಾಗ ವಿದ್ಯಾರ್ಥಿಗಳು ಇನ್ಸ್ಟಾಗ್ರಾಮ್‌ನೊಂದಿಗೆ ಸಂಪರ್ಕದಲ್ಲಿರುತ್ತಾರೆಯೋ ಆಗ ತನ್ನಿಂತಾನೆ ಸ್ವಯಂಚಾಲಿತವಾಗಿ ಅವರ ಖಾತೆಯನ್ನು ಖಾಸಗಿಯಾಗುವಂತೆ ಮಾಡಿರುತ್ತೇವೆ ಮತ್ತು ಅವರಿಗೆ ಸ್ವಲ್ಪ ಕಾಲಾವಧಿಯ ಬಳಿಕ ಖಾತೆಯನ್ನು ನೋಡುವುದರಿಂದ ನಿರುತ್ಸಾಹಗೊಳಿಸಲು ಸಂದೇಶವನ್ನು ಕಳಿಸುತ್ತಿರುತ್ತೇವೆ. ಹಾಗೆಯೇ ಆತ್ಮಹತ್ಯೆ ಅಥವಾ ಹಾನಿಯನ್ನುಂಟು ಮಾಡುವಂತಹ ಸಾಮಗ್ರಿಗಳನ್ನು ನೋಡಲು ನಾವು ಅನುಮತಿಸುವುದಿಲ್ಲ. ಅವರಿಂದ ಈ ಪ್ರಕಾರದ ಸಾಮಗ್ರಿಗಳು ಪ್ರಸಾರಗೊಳ್ಳುತ್ತಿದ್ದರೆ, ನಾವು ಅದನ್ನು ತಕ್ಷಣವೇ ತೆಗೆದುಹಾಕುತ್ತೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವುಸಾಮಾಜಿಕ ಮಾಧ್ಯಮಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕವಾಗಿದೆ ಎಂದು ಈ ಘಟನೆಯಿಂದ ಕಂಡು ಬರುತ್ತದೆ ! |