ಉಘುರ ಮುಸ್ಲಿಮಾನರ ರಮಜಾನ ಉಪವಾಸದ ಮೇಲೆ ನಿಷೇಧ ಹೇರಿದ ಚೀನಾ !

ಮುಸಲ್ಮಾನರು ಮಧ್ಯಪಾನ ಮತ್ತು ಹಂದಿಯ ಮಾಂಸ ತಿನ್ನಲು ಒತ್ತಡ !

ವಾಷಿಂಗ್ಟನ್ (ಅಮೇರಿಕ) – ಚೀನಾದ ಕಮ್ಯುನಿಸ್ಟ್ ಸರಕಾರ ಸಧ್ಯ ನಡೆಯುತ್ತಿರುವ ಮುಸಲ್ಮಾನರ ರಂಜಾನ ತಿಂಗಳಲ್ಲಿ ಉಪವಾಸ ಮಾಡಲು ನಿಷೇಧ ಹೇರಿದೆ. ಹಾಗೂ ಯಾರಾದರೂ ಈ ರೀತಿಯ ಉಪವಾಸ ಮಾಡಿದರೆ ಅವರ ಬಗ್ಗೆ ನಿಗಾವಹಿಸಲಾಗುತ್ತಿದೆ, ಎಂದು ‘ರೇಡಿಯೋ ಫ್ರೀ ಏಷ್ಯಾ’ ಈ ಸಂಘಟನೆಯು ನೀಡಿದ ವರದಿಯಿಂದ ಈ ಮಾಹಿತಿ ಬೆಳಕಿಗೆ ಬಂದಿದೆ. ಚೀನಾ ಮುಸಲ್ಮಾನರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಗಳ ಮೇಲೆ ನಿರಂತರ ದಾಳಿ ಮಾಡುತ್ತಿದೆ ಎಂದು ಕೂಡ ಇದರಲ್ಲಿ ಹೇಳಿದೆ.

ಈ ವರದಿಯ ಪ್ರಕಾರ ‘ವಿಶ್ವ ಉಘುರ ಕಾಂಗ್ರೆಸ್’ನ ವಕ್ತಾರ ದಿಲಶಾತ ಋಷಿತ್ ಇವರು, ರಂಜಾನದ ಸಮಯದಲ್ಲಿ ಚೀನಾದಲ್ಲಿ ಉಘುರ ಮುಸಲ್ಮಾನರು ಬಹುಸಂಖ್ಯತದಲ್ಲಿರುವ ಶಿನಝಿಯಾಂಗ್ ಪ್ರದೇಶದಲ್ಲಿನ ೧ ಸಾವಿರ ೮೧೧ ಗ್ರಾಮದಲ್ಲಿ ೨೪ ಗಂಟೆ ಕಾವಲು ಇಡಲಾಗಿದೆ. ಹಾಗೂ ಕಮ್ಯುನಿಸ್ಟ್ ಸರಕಾರದಿಂದ ಇಲ್ಲಿಯ ಮುಸಲ್ಮಾನರಿಗೆ ಮದ್ಯಪಾನ ಮತ್ತು ಹಂದಿಯ ಮಾಂಸ ತಿನ್ನಲು ಕೂಡ ಒತ್ತಡ ಹೇರಲಾಗುತ್ತಿದೆ. ಈ ವರದಿಯ ಪ್ರಕಾರ ಶಿನಝಿಯಾಂಗ್ ಪ್ರದೇಶದಲ್ಲಿ ಕನಿಷ್ಠ ೧೮ ಲಕ್ಷ ಉಘುರ್ ಮುಸಲ್ಮಾನರು ಬಂದಿತರಾಗಿದ್ದು ಅವರಿಂದ ಕಠಿಣ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತದೆ. ಹಾಗೂ ಉಘುರ ಸಮಾಜದ ಮಹಿಳೆಯರ ಮೇಲೆ ಬಲಾತ್ಕಾರ, ಲೈಂಗಿಕ ಶೋಷಣೆಯಂತಹ ದೌರ್ಜನ್ಯ ನಡೆಯುತ್ತಿದೆ.

ಸಂಪಾದಕರ ನಿಲುವು

ಯಾವಾಗಲೂ ಭಾರತದ ಮೇಲೆ ‘ಮುಸಲ್ಮಾನ ದ್ವೇಷ’ದ ಆರೋಪ ಮಾಡುವ ಪಾಕಿಸ್ತಾನ ಮತ್ತು ಟರ್ಕಿ ದೇಶದ ಸರಕಾರಗಳು ಚೀನಾದ ಮುಸಲ್ಮಾನ ವಿರೋಧಿ ನೀತಿಯ ಬಗ್ಗೆ ಚಕಾರ ಎತ್ತುವುದಿಲ್ಲ. ಪಾಕಿಸ್ತಾನದ ಮುಸಲ್ಮಾನ ಪ್ರೀತಿಯ ಬಗ್ಗೆ ಈ ದ್ವಂದ್ವ ನೀತಿ ತಿಳಿದುಕೊಳ್ಳಿ !